ಪ್ರತ್ಯೇಕತಾವಾದಿ ಮಿರ್ವೈಜ್ ಉಮರ್ ಫಾರೂಕ್ ಪೊಲೀಸ್ ವಶಕ್ಕೆ!
ಪ್ರತ್ಯೇಕತಾವಾದಿ ಮುಖಂಡ ಹುರಿಯನ್ ಮುಖ್ಯಸ್ಥ ಮಿರ್ವೈಜ್ ಉಮರ್ ಫಾರೂಕ್ ನನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀನಗರ: ಪ್ರತ್ಯೇಕತಾವಾದಿ ಮುಖಂಡ ಹುರಿಯನ್ ಮುಖ್ಯಸ್ಥ ಮಿರ್ವೈಜ್ ಉಮರ್ ಫಾರೂಕ್ ನನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
1931ರ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ ಕಾಶ್ಮೀರಿ ಹುತಾತ್ಮರಿಗೆ ಗೌರವ ಸಲ್ಲಿಕೆ ಮಾಡಿ ಅಂದಿನ ಮಹಾರಾಜ ಆಳ್ವಿಕೆ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ಮೀರ್ವೈಜ್ ಉಮರ್ ಫಾರೂಕ್ ರನ್ನು ಕಾಶ್ಮೀರ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಅಂದಿನ ಮಹಾರಾಜ ಆಳ್ವಿಕೆ ವಿರುದ್ಧ ಪ್ರತಿಭಟನೆ ಹೆಸರಲ್ಲಿ ಮೀರ್ವೈದ್ ಉಮರ್ ಫಾರೂಕ್ ಅವರ ಬೆಂಬಲಿಗರು ಹಿಂಸಾಚಾರ ನಡೆಸುವ ಶಂಕೆ ಮೇರೆಗೆ ಮೀರ್ವೈಜ್ ಫಾರೂಕ್ ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಮೀರ್ವೈಜ್ ಉಮರ್ ಫಾರೂಕ್ ನಿವಾಸವಿರುವ ನೈಗೀನ್ ಪ್ರದೇಶದ ಆವರಣದಲ್ಲೇ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಮೀರ್ವೈಜ್ ಉಮರ್ ಫಾರೂಕ್ ಪರ ವಕ್ತಾರರು ಈ ಬಗ್ಗೆ ಮಾತನಾಡಿದ್ದು, ಫಾರೂಕ್ ಕೇವಲ 1931ರ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಕೆಗೆ ಮುಂದಾಗಿದ್ದರು. ಅವರು ಯಾವುದೇ ಪ್ರತಿಭಟನೆಗೆ ಮುಂದಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


