ಜಾದವ್ ತಾಯಿಗೆ ವೀಸಾ ನೀಡುವ ಕುರಿತು ಮರು ಪರೀಶಿಲನೆ ನಡೆಸುವಂತೆ ಭಾರತ ಕೋರಿಲ್ಲ: ಸುಷ್ಮಾ ಸ್ವರಾಜ್
ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಭಾರತದ ಕುಲಭೂಷಣ್ ಜಾದವ್ ಅವರ ತಾಯಿಗೆ ವೀಸಾ ನೀಡುವ ಕುರಿತು ಮರು ಪರಿಶೀಲನೆ ನಡೆಸುವಂತೆ ಭಾರತ ಕೋರಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ನವದೆಹಲಿ: ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಭಾರತದ ಕುಲಭೂಷಣ್ ಜಾದವ್ ಅವರ ತಾಯಿಗೆ ವೀಸಾ ನೀಡುವ ಕುರಿತು ಮರು ಪರಿಶೀಲನೆ ನಡೆಸುವಂತೆ ಭಾರತ ಕೋರಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಪಾಕಿಸ್ತಾನದ ಜೈಲಿನಲ್ಲಿರುವ ಕುಲಭೂಷಣ್ ಜಾದವ್ ರನ್ನು ಭೇಟಿ ಮಾಡಲು ಅವರ ತಾಯಿ ಆವಂತಿಕಾ ಅವರಿಗೆ ವೀಸಾ ನೀಡುವ ಕುರಿತು ಮರು ಪರಿಶೀಲನೆ ನಡೆಸುವಂತೆ ಭಾರತ ಮನವಿ ಮಾಡಿದೆ ಎಂಬ ಪಾಕಿಸ್ತಾನ ಮಾಧ್ಯಮಗಳ ವರದಿಯನ್ನು ಅಲ್ಲಗಳೆದೆರುವ ಸುಷ್ಮಾ ಸ್ವರಾಜ್ ಅವರು, ಮರು ಪರೀಶಿಲನೆ ನಡೆಸುವಂತೆ ಭಾರತ ಕೋರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಂತೆಯೇ ಜಾದವ್ ತಾಯಿ ಆವಂತಿಕಾ ಅವರಿಗೆ ವೀಸಾ ನೀಡುವ ಕುರಿತು ರಾಯಭಾರ ಕಚೇರಿಯ ಬದಲಾದ ಪಾತ್ರದ ಕುರಿತು ನಮಗೆ ಮಾಹಿತಿ ಬಂದಿಲ್ಲ ಎಂದೂ ಅವರು ಟ್ವಿಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಸುಷ್ಮಾ ಸ್ವರಾಜ್ ಅವರು, ಕಾಯಿಲೆ ಪೀಡಿತ ಪಾಕಿಸ್ತಾನಿ ನಾಗರಿಕರು ಚಿಕಿತ್ಸೆಗಾಗಿ ಭಾರತಕ್ಕೆ ಬರಲು ಹಾತೊರೆಯುತ್ತಿದ್ದಾರೆ. ಇಂತಹವರಿಗೆ ಶಿಫಾರಸ್ಸು ಮಾಡಲು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಲಹೆಗಾ ಸರ್ತಾಜ್ ಎಜೀಜ್ ಅವರಿಗೆ ಅದಾವ ಅಂಶಗಳು ತೊಡಕುಂಟು ಮಾಡುತ್ತಿವೆ ತಿಳಿಯುತ್ತಿಲ್ಲ. ಪಾಕಿಸ್ತಾನಿ ನಾಗರಿಕರಿಗೆ ವೀಸಾ ಮಂಜೂರು ಮಾಡಲು ಅವರ ಶಿಫಾರಸ್ಸು ಅಗತ್ಯವಾಗಿರುತ್ತದೆ. ಆದರೆ ಅವರು ಶಿಫಾರಸ್ಸು ಮಾಡದಿರಲು ಯಾವುದೇ ಕಾರಣಗಳು ಇಲ್ಲ. ಹೀಗಿದ್ದೂ ಅವರೇಕೆ ಶಿಫಾರಸ್ಸು ಮಾಡುತ್ತಿಲ್ಲ ಎಂದು ಸುಷ್ಮಾ ಪ್ರಶ್ನಿಸಿದ್ದಾರೆ.
ನಮ್ಮಲ್ಲೂ ಕೂಡ ಸಾಕಷ್ಟು ಅರ್ಜಿಗಳು ಬಾಕಿ ಇದ್ದು, ಅದರಲ್ಲಿ ತಮ್ಮ ಮಗನನ್ನು ನೋಡಲು ಹಾತೊರೆಯುತ್ತಿರುವ ಕುಲಭೂಷಣ್ ಜಾದವ್ ಅವರ ಅರ್ಜಿ ಕೂಡ ಒಂದಾಗಿದೆ. ಈ ಬಗ್ಗೆ ನಾನೇ ಖುದ್ದು ಸರ್ತಾಜ್ ಎಜೀಜ್ ಅವರಿಗೆ ಪತ್ರ ಬರೆದು ವೀಸಾ ನೀಡುವಂತೆ ಮನವಿ ಮಾಡಿದ್ದೆ. ಆದರೆ ಎಜೀಜ್ ಯಾವುದೇ ಕರುಣೆ ತೋರಿಲ್ಲ. ಆದರೆ ಭಾರತದ ವೀಸಾಗೆ ಕಾಯುತ್ತಿರುವ ಪಾಕಿಸ್ತಾನಿ ಪ್ರಜೆಗಳಿಗೆ ನಾನು ಒಂದು ಮಾತು ಹೇಳುತ್ತೇನೆ. ನಿನ್ನ ವಿದೇಶಾಂಗ ವ್ಯವಹಾರಗಳ ಸಲಹೆಗಾರರಾದ ಎಜೀಜ್ ಅವರು ಶಿಫಾರಸ್ಸು ಮಾಡಿದ್ದೇ ಆದರೇ ಕೂಡಲೇ ಅಂತಹವರಿಗೆ ತುರ್ತಾಗಿ ವೀಸಾ ನೀಡುತ್ತೇವೆ ಎಂದು ಸುಷ್ಮಾ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


