ಹಣ ಅವ್ಯವಹಾರ ಪ್ರಕರಣ: ಜಾರಿ ನಿರ್ದೇಶನಾಲಯದ ಮುಂದೆ ಮಿಸಾ ಭಾರತಿ ಹಾಜರ್
ಸಾವಿರ ಕೋಟಿ ರು ಅಕ್ರಮ ಹಣ ಪ್ರಕರಣದಲ್ಲಿ ಆರ್ ಜೆಡಿ ಸಂಸದೆ ಹಾಗೂ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರ್ತಿ ಜಾರಿ...

Published On :
ನವದೆಹಲಿ: 8 ಸಾವಿರ ಕೋಟಿ ರು ಅಕ್ರಮ ಹಣ ಪ್ರಕರಣದಲ್ಲಿ ಆರ್ ಜೆಡಿ ಸಂಸದೆ ಹಾಗೂ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರ್ತಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ಬೆಳಗ್ಗೆ 11 ಗಂಟೆಗೆ ವೇಳೆಗೆ ಕೇಂದ್ರೀಯ ತನಿಖಾ ಎಜೆನ್ಸಿಯ ತನಿಖಾಧಿಕಾರಿ ಕಚೇರಿಯಲ್ಲಿ ಹಾಜರಾಗಿದ್ದರು.
ಮಿಶಾಲಿ ಪ್ರಿಂಟರ್ಸ್ ಅಂಡ್ ಪ್ಯಾಕರ್ಸ್ ಪ್ರೈವೇಟ್ ಲಿಮಿಟೆಡೆ ಜೊತೆಗಿರುವ ಸಂಬಂಧದ ಬಗ್ಗೆ ಮಿಸಾ ಭಾರತಿ ಅವರನ್ನು ವಿಚಾರಣೆ ನಡೆಸಲಾಯಿತು. ಜೊತೆಗೆ ಈ ಮುಚೆ ಬಂಧಿತವಾಗಿದ್ದ ಆಕೆಯ ಸಿಎ ಜೊತೆಗಿನ ಸಂಬಂಧವೂ ಕೂಡ ವಿಚಾರಣೆ ನಡೆಸಲಾಗಿದೆ.
ಜುಲೈ 8 ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಪುತ್ರಿ, ಸಂಸದೆ ಮಿಸಾ ಭಾರತಿ ಮತ್ತು ಅಳಿಯ ಶೈಲೇಶ್ ಕುಮಾರ್‌ಗೆ ಸೇರಿದ ಮೂರು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು.
ಈ ವಿಷಯ ಸಂಬಂಧ ಇಡಿ ಅಧಿಕಾರಿಗಳು ಆಕೆಯನ್ನು ವಿಚಾರಣೆಗೊಳಪಡಿಸಲಾಗವುದು. ಮಿಸಾ ಭಾರತಿ ಪತಿ ಶೈಲೇಶ್ ಕುಮಾರ್ ಗೂ ಕೂಡ ಹಾಜರಾಗಲು ನಿನ್ನೆ ಸಮನ್ಸ್ ನೀಡಲಾಗಿತ್ತು, ಆದರೆ ಆತ ಹಾಜರಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Enforcement Directoratemoney laundering caseಜಾರಿ ನಿರ್ದೇಶನಾಲಯವಿಚಾರಣೆAppearMisa Bhartiಮಿಸಾ ಭಾರತಿಹಣ ಅವ್ಯವಹಾರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


