ದೇಶ

ಪಾಕ್ ಪರವಾಗಿ ಕಾಶ್ಮೀರಕ್ಕೆ ಮೂರನೇ ರಾಷ್ಟ್ರದ ಸೇನೆ ಪ್ರವೇಶಿಸಬಹುದು: ಚೀನಾ ಮಾಧ್ಯಮ

ಕಾಶ್ಮೀರ ವಿಷಯವನ್ನು ಮುಂದಿಟ್ಟುಕೊಂಡು ಭಾರತವನ್ನು ಬೆದರಿಸಲು ಚೀನಾ ಯೋಜನೆ ರೂಪಿಸಿರುವಂತಿದ್ದು, ಅಲ್ಲಿನ ಮಾಧ್ಯಮಗಳು ಕಾಶ್ಮೀರ ವಿವಾದದಲ್ಲಿ ಪಾಕಿಸ್ತಾನದ ಪರವಾಗಿ ನಿಲ್ಲುವ ಸೂಚನೆ ನೀಡಿದೆ.

ಪಾಕ್ ಪರವಾಗಿ ಕಾಶ್ಮೀರಕ್ಕೆ ಮೂರನೇ ರಾಷ್ಟ್ರದ ಸೇನೆ ಪ್ರವೇಶಿಸಬಹುದು: ಚೀನಾ ಮಾಧ್ಯಮ
Published On :
ಬೀಜಿಂಗ್: ಗಡಿ ಬಿಟ್ಟು ಹೋಗಿ ಇಲ್ಲವೇ ಯುದ್ಧ ಎದುರಿಸಲು ಸಿದ್ಧರಾಗಿ ಎಂಬ ಚೀನಾದ ಬೆದರಿಕೆಗೆ ಭಾರತ ಸೆಡ್ಡು ಹೊಡೆದಿರುವುದು ಚೀನಾ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದ್ದು, ಕಾಶ್ಮೀರ ವಿಷಯವನ್ನು ಮುಂದಿಟ್ಟುಕೊಂಡು ಭಾರತವನ್ನು ಬೆದರಿಸಲು ಚೀನಾ ಯೋಜನೆ ರೂಪಿಸಿರುವಂತಿದ್ದು, ಅಲ್ಲಿನ ಮಾಧ್ಯಮಗಳು ಕಾಶ್ಮೀರ ವಿವಾದದಲ್ಲಿ ಪಾಕಿಸ್ತಾನದ ಪರವಾಗಿ ನಿಲ್ಲುವ ಸೂಚನೆ ನೀಡಿದೆ. 
ಚೀನಾ ಮಾಧ್ಯಮ ಗ್ಲೋಬಲ್ ಟೈಮ್ಸ್ ಈ ಬಗ್ಗೆ ಲೇಖನ ಪ್ರಕಟಿಸಿದ್ದು, ಡೋಕ್ಲಾಮ್ ನಲ್ಲಿ ಚೀನಾ ಸೇನೆ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿಯನ್ನು ವಿರೋಧಿಸಿ ಭೂತಾನ್ ಪರವಾಗಿ ಭಾರತೀಯ ಸೇನೆ ನಿಲ್ಲುವುದಾದರೆ, ಕಾಶ್ಮೀರದ ವಿವಾದದಲ್ಲಿ ಪಾಕಿಸ್ತಾನದ ಪರವಾಗಿ ಮೂರನೇ ರಾಷ್ಟ್ರದ ಸೇನೆಯೂ ಪ್ರವೇಶ ಮಾಡಬಹುದು ಎಂಬ ತರ್ಕವನ್ನು ಚೀನಾ ಥಿಂಕ್ ಟ್ಯಾಂಕ್ ಮುಂದಿಟ್ಟಿದೆ. 
ಒಂದು ವೇಳೆ ತನ್ನ ಪರವಾಗಿ ನಿಲ್ಲುವಂತೆ ಭೂತಾನ್ ಮನವಿ ಮಾಡಿದ್ದರೂ ಸಹ ಭಾರತ ವಿವಾದಿತ ಪ್ರದೇಶದಲ್ಲಿ ಪ್ರವೇಶ ಮಾಡುವಂತಿಲ್ಲ ಎಂದು ಚೀನಾದಲ್ಲಿರುವ ಭಾರತೀಯ ವಿಷಯಗಳ ಅಧ್ಯಯನ ಕೇಂದ್ರದ ನಿರ್ದೇಶಕರು ಗ್ಲೋಬಲ್ ಟೈಮ್ಸ್ ನಲ್ಲಿ ಲೇಖನ ಬರೆದಿದ್ದಾರೆ. 
ಭಾರತದ ಲಾಜಿಕ್ ಪ್ರಕಾರವೇ ಹೋಗುವುದಾದರೆ, ಕಾಶ್ಮೀರದ ವಿವಾದದಲ್ಲಿ ಪಾಕಿಸ್ತಾನದ ಪರವಾಗಿ ಮೂರನೇ ರಾಷ್ಟ್ರದ ಸೇನೆಯೂ ಪ್ರವೇಶ ಮಾಡಬಹುದು ಎಂದೂ ಲೇಖನದಲ್ಲಿ ಎಚ್ಚರಿಕೆ ನೀಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.