ವಿದೇಶಿಗರ ನೆಚ್ಚಿನ ತಾಣ ಹೌಜ್ ಖಾಸ್ ಮೇಲೆ ಉಗ್ರರ ಕೆಂಗಣ್ಣು: ದೆಹಲಿ ಪೊಲೀಸರ ಎಚ್ಚರಿಕೆ
ರಾಜಧಾನಿ ದೆಹಲಿಯಲ್ಲಿರುವ ವಿದೇಶಿಗರ ನೆಚ್ಚಿನ ತಾಣ ಹೌಜಾ ಖಾಸ್ ಮೇಲೆ ಉಗ್ರರು ಕೆಂಗಣ್ಣು ಬೀರಿದ್ದು, ವಿದೇಶಿಗರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವ ಸಂಭವವಿದೆ ಎಂದು ದೆಹಲಿ...

Published On :
ನವದೆಹಲಿ: ರಾಜಧಾನಿ ದೆಹಲಿಯಲ್ಲಿರುವ ವಿದೇಶಿಗರ ನೆಚ್ಚಿನ ತಾಣ ಹೌಜಾ ಖಾಸ್ ಮೇಲೆ ಉಗ್ರರು ಕೆಂಗಣ್ಣು ಬೀರಿದ್ದು, ವಿದೇಶಿಗರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವ ಸಂಭವವಿದೆ ಎಂದು ದೆಹಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಹೌಜ್ ಖಾಸ್ ಜನಪ್ರಿಯ ಹಾಗೂ ಅತ್ಯಾಕರ್ಷಕ ಪ್ರವಾಸಿ ತಾಣವಾಗಿದ್ದು, ಆಕರ್ಷಕ ಮಳಿಗೆಗಳನ್ನು ಒಳಗೊಂಡಿದೆ. ಜನಪ್ರಿಯ ಹಾಗೂ ಬಹು ಬೇಡಿಕೆಯ ಭಾರತೀಯ ಪಾರಂಪರಿಕ ಉಡುಗೆಗಳ ಮಾರಾಟದ ಪ್ರಮುಖ ತಾಣವಾಗಿ ಅಭಿವೃದ್ಧಿ ಹೊಂದಿರುವ ಪ್ರದೇಶವಾಗಿದೆ.
ಇದೀಗ ಈ ಪ್ರದೇಶದ ಮೇಲೆ ಉಗ್ರರು ದಾಳಿ ನಡೆಸಲು ಸಂಚು ರೂಪಿಸುತ್ತಿದ್ದು, ವಿದೇಶಿಗರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಯೋಜನೆ ರೂಪಿಸಿದ್ದಾರೆಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಅಲ್ಲಲ್ಲಿ ಸಿಸಿಟಿವಿಗಳನ್ನು ಅಳವಡಿಸಿದ್ದಾರೆಂದು ವರದಿಗಳು ತಿಳಿಸಿವೆ.
ವಿಶೇಷವಾಗಿ ತರಬೇತಿ ಪಡೆದ ಭದ್ರತಾ ಪಡೆಗಳು ಹೌಜ್ ಖಾಸ್ ಗ್ರಾಮಕ್ಕೆ ಭದ್ರತೆಯನನು ನೀಡುತ್ತಿದ್ದು, ಪಾರ್ಕಿಂಗ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ತೀವ್ರ ತಪಾಸಣೆಗಳನ್ನು ನಡೆಸುತ್ತಿದ್ದಾರೆ.
ಯುರೋಪಿಯನ್ ದೇಶಗಳಲ್ಲಿ ವಿದೇಶಿಗರನ್ನು ಗುರಿಯಾಗಿರಿಸಿಕೊಂಡಹು ಹಲವು ದಾಳಿಗಳು ನಡೆಯುತ್ತಿವೆ. ಇದರಂತೆ ದೆಹಲಿ ಹೌಜ್ ಖಾಸ್ ಮೇಲೂ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದು, ಹೀಗಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೌಜ್ ಖಾಸ್ ಗೆ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುತ್ತಾರೆ. ಭದ್ರತಾ ದೃಷ್ಟಿಯಿಂದ ಹೌಜ್ ಖಾಸ್ ಗ್ರಾಮದಲ್ಲಿರುವ ಬಾರ್ ಗಳು ಮತ್ತು ಪಬ್ ಗಳಲ್ಲಿ ನಡೆಯಿರುವ ನೈಟ್ ಪಾರ್ಟಿ ಗಳ ಮೇಲೆ ನಿರ್ಬಂಧ ಹೇರಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆಂದು ಡಿಸಿಪಿ ಈಶ್ವರ್ ಸಿಂಗ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


