ಜಂತರ್ ಮಂತರ್: ದೆಹಲಿ ತಲುಪಿದ ಗೂರ್ಖಲ್ಯಾಂಡ್ ಪ್ರತಿಭಟನೆ
ಪಶ್ಚಿಮ ಬಂಗಾಳದಿಂದ ಗೂರ್ಖಾಲ್ಯಾಂಡ್ ನ್ನು ಪ್ರತ್ಯೇಕಿಸಬೇಕೆಂದು ಗೂರ್ಖ ಸಂಯುಕ್ತ ಸಂಘರ್ಷ ಸಮಿತಿ...

Published On :
ನವದೆಹಲಿ:ಪಶ್ಚಿಮ ಬಂಗಾಳದಿಂದ ಗೂರ್ಖಾಲ್ಯಾಂಡ್ ನ್ನು ಪ್ರತ್ಯೇಕಿಸಬೇಕೆಂದು ಗೂರ್ಖ ಸಂಯುಕ್ತ ಸಂಘರ್ಷ ಸಮಿತಿ ನಡೆಸುವ ಪ್ರತಿಭಟನೆ ಇಂದು ದೆಹಲಿಯ ಜಂತರ್ ಮಂತರ್ ತಲುಪಿದೆ.
ನಾವು ಇದನ್ನು ಬೇರೆಡೆಗೆ ತೆಗೆದುಕೊಂಡು ಹೋಗುತ್ತಿಲ್ಲ. ಗೂರ್ಖಲ್ಯಾಂಡ್ ಬಿಟ್ಟು ಬೇರೆ ವಿಷಯಗಳನ್ನು ನಾವು ಮಾತನಾಡುವುದಿಲ್ಲ. ಸರ್ಕಾರ ಈ ವಿಷಯ ಬಿಟ್ಟು ಬೇರೆಯದನ್ನು ಮಾತನಾಡಲು ಆಹ್ವಾನಿಸಿದರೆ ಅವರು ನಮ್ಮನ್ನು ಕರೆಯದಿರುವುದೇ ಒಳ್ಳೆಯದು. ನಾವು ಬೇರೆ ಯಾವುದೇ ಪ್ರಸ್ತಾಪಗಳಿಗೆ ಒಪ್ಪುವುದಿಲ್ಲ ಎಂದು ಗೂರ್ಖ ಸಂಯುಕ್ತ ಸಂಘರ್ಷ ಸಮಿತಿಯ ಸದಸ್ಯ ರಾಜೀವ್ ಶರ್ಮ ತಿಳಿಸಿದರು.
ಗೂರ್ಖರಾದ ನಾವು ಭಾರತಕ್ಕೆ ಸೇರಿದವರಾಗಿದ್ದು ಈ ದೇಶದ ಭಾಗವಾಗಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಪಕ್ಷ ಸೇರಿಲ್ಲ ಎಂದು ಪ್ರತಿಭಟನಾಕಾರರೊಬ್ಬರು ತಿಳಿಸಿದರು.
ಮೊನ್ನೆ ಶುಕ್ರವಾರ ಡಾರ್ಜಿಲಿಂಗ್ ನ ಹೊರವಲಯದ ಸೊನಾಡ ಎಂಬಲ್ಲಿ ಗೂರ್ಖಲ್ಯಾಂಡ್ ಬೆಂಬಲಿಗರೊಬ್ಬರು ಮೃತಪಟ್ಟಿದ್ದರು.
ಪೊಲೀಸರಿಂದ ಹತ್ಯೆಗೀಡಾಗಿದ್ದಾರೆ ಎಂದು ಗೂರ್ಖ ಜನಮುಕ್ತಿ ಮೋರ್ಚಾ ಆರೋಪಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪ್ರತಿಭಟನೆprotestದೆಹಲಿಪಶ್ಚಿಮ ಬಂಗಾಳWest BengalDelhiರಾಜ್ಯstateGorkha Sanyukt Sangharsh Samitiಗೂರ್ಖ ಸಂಯುಕ್ತ ಸಂಘರ್ಷ ಸಮಿತಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


