ದೇಶ

ಲಾಲು ಹಿರಿಯ ಪುತ್ರ 3 ವರ್ಷದವನಿದ್ದಾಗ ಆತನ ಹೆಸರಲ್ಲಿತ್ತು 13 ಎಕರೆ ಜಮೀನು:ಬಿಜೆಪಿ

ಆರ್ ಜೆ ಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಹಿರಿಯ ಪುತ್ರ ಹಾಗೂ ಬಿಹಾರ ಆರೋಗ್ಯ ಸಚಿವ ತೇಜ್ ಪ್ರತಾಪ್ 3 ವರ್ಷದ ಮಗುವಾಗಿದ್ದಾಗ ಆತನ ಹೆಸರಲ್ಲಿ ...

ಲಾಲು ಹಿರಿಯ ಪುತ್ರ 3 ವರ್ಷದವನಿದ್ದಾಗ ಆತನ ಹೆಸರಲ್ಲಿತ್ತು 13 ಎಕರೆ ಜಮೀನು:ಬಿಜೆಪಿ
ಸುಶೀಲ್ ಕುಮಾರ್ ಮೋದಿ
Published On :
ಪಾಟ್ನಾ: ಆರ್ ಜೆ ಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಹಿರಿಯ ಪುತ್ರ ಹಾಗೂ ಬಿಹಾರ ಆರೋಗ್ಯ ಸಚಿವ ತೇಜ್ ಪ್ರತಾಪ್ 3 ವರ್ಷದ ಮಗುವಾಗಿದ್ದಾಗ ಆತನ ಹೆಸರಲ್ಲಿ 13.12 ಎಕರೆ ಜಮೀನು ಇತ್ತು ಎಂದು ಬಿಜೆಪಿ ಹಿರಿಯ ಮುಖಂಡ ಸುಶೀಲ್ ಕುಮಾರ್ ಮೋದಿ ಆರೋಪಿಸಿದ್ದಾರೆ.
ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್  ಕುಟುಂಬ ಬೇನಾಮಿ ಆಸ್ತಿ ಹೊಂದಿರುವುದರ ವಿರುದ್ಧ  ಸರರಣಿ ವಾಗ್ದಾಳಿ ನಡೆಸಿರುವ ಸುಶೀಲ್ ಕುಮಾರ್, ಬ್ರಿಜಿ ಬಿಹಾರಿ ಪ್ರಸಾದ್  ಅವರ ವಿಧವಾ ಪತ್ನಿ ರಮಾದೇವಿ ಮುಜಾರಾಫುರ್ ನಲ್ಲಿ ತೇಜ್ ಪ್ರತಾಫ್ ಗೆ ಎರಡು ಫ್ಲ್ಯಾಟ್ ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸುಶೀಲ್ ಕುಮಾರ್ ಮೋದಿ ದಾಖಲೆಗಳನ್ನು ಪ್ರದರ್ಶಿಸಿದ್ದಾರೆ.
ಆರ್ ಜೆಡಿ ಯ ಬೇರೆ ಮುಖಂಡರುಗಳಿಗೆ ರಾಜಕೀಯ ಸಹಾಯಕ್ಕಾಗಿ  ಲಾಲು ಕುಟುಂಬಕ್ಕೆ  ಮತ್ತೊಂದು ಉಡುಗೊರೆ ಸಿಗಲಿದೆ ಎಂದು ಹೇಳಿದ್ದಾರೆ.
ಗಿವ್ ಲ್ಯಾಂಡ್, ಗೆಟ್ ಫೇವರ್ ಎಂಬ ನೀತಿಯನ್ನು ಲಾಲೂ ಪ್ರಸಾದ್ ರೂಢಿಸಿಕೊಂಡಿದ್ದಾರೆ, ಹೀಗಾಗಿ ಈ ನೀತಿ ಅವರ ಕುಟುಂಬ ಸದಸ್ಯರು ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂದು ದೂರಿದ್ದಾರೆ. 
1990ರಲ್ಲಿ ಲಾಲು ಪ್ರಸಾದ್ ಮುಖ್ಯಮಂತ್ರಿಯಾದಾಗ ಆರ್ ಜೆಡಿ ಮುಖಂಡ ಬ್ರಿಜ್ ಬಿಹಾರಿ ಪ್ರಸಾದ್ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿ ನೇಮಕ ಗೊಂಡಿದ್ದರು. 
1998 ರ ಜೂನ್ 13 ರಂದು ಪಾಟ್ನಾ ಆಸ್ಪತ್ರೆಯ ಬಳಿ ನಡೆದ ಗುಂಡಿನ ದಾಳಿಗೆ ಬಲಿಯಾದರು, ಅವರ ಪತ್ನಿ ರಮಾದೇವಿ ಶೆಹಾಹಾರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೂರು ಭಾರಿ ಸಂಸದರಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.