ದೇಶ

ಭಯೋತ್ಪಾದನೆ ನಿರ್ಮೂಲನೆಗೆ ಮೋದಿ-ನೇತನ್ಯಾಹು ಪಣ

ಭಯೋತ್ಪಾದನೆ ಭಾರತ ಮತ್ತು ಇಸ್ರೇಲ್ ರಾಷ್ಟ್ರಗಳ ಪ್ರಮುಖ ಸಮಸ್ಯೆಯಾಗಿದ್ದು ಉಭಯ ದೇಶಗಳು ಭಯೋತ್ಪಾದನೆ ನಿರ್ಮೂಲನೆ ಪಣತೊಟ್ಟಿದ್ದೇವೆ ಎಂದು...

ಭಯೋತ್ಪಾದನೆ ನಿರ್ಮೂಲನೆಗೆ ಮೋದಿ-ನೇತನ್ಯಾಹು ಪಣ
ನರೇಂದ್ರ ಮೋದಿ, ಬೆಂಜಮಿನ್ ನೇತುನ್ಯಾಹು
Published On :
ಜೆರುಸಲೆಂ: ಭಯೋತ್ಪಾದನೆ ಭಾರತ ಮತ್ತು ಇಸ್ರೇಲ್ ರಾಷ್ಟ್ರಗಳ ಪ್ರಮುಖ ಸಮಸ್ಯೆಯಾಗಿದ್ದು ಉಭಯ ದೇಶಗಳು ಭಯೋತ್ಪಾದನೆ ನಿರ್ಮೂಲನೆ ಪಣತೊಟ್ಟಿದ್ದೇವೆ ಎಂದು ಇಸ್ರೇಲ್ ಪ್ರಧಾನಿ ನೇತನ್ಯಾಹು ಹೇಳಿದ್ದಾರೆ. 
ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬೆಂಜಮಿನ್ ನೇತನ್ಯಾಹು ಪ್ರಧಾನಿ ಮೋದಿ ಜತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇನೆ. ಎರಡು ದೇಶಗಳ ಸ್ನೇಹ ಸ್ವರ್ಗದಲ್ಲೇ ನಿಶ್ಚಯವಾಗಿತ್ತು ಎಂದರು. ಇನ್ನು ಎರಡು ದೇಶಗಳು ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಭಯೋತ್ಪಾದನೆ ಎರಡು ದೇಶಗಳಿಗೆ ಕಂಟಕವಾಗಿದ್ದು ಉಗ್ರರ ವಿರುದ್ಧ ಸಮರ ಸಾರಲು ಉಭಯ ದೇಶಗಳು ಸಿದ್ಧವಾಗಿವೆ. ಇನ್ನು ಉಗ್ರವಾದಕ್ಕೆ ಆರ್ಥಿಕ ನೆರವು ನೀಡಿ ಪೋಷಿಸುತ್ತಿರುವವರಿಗೂ ತಕ್ಕ ಪಾಠ ಕಲಿಸಲಾಗುವುದು ಎಂದರು. 
ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ ಅವರು, ಇಸ್ರೇಲ್ ಗೆ ಭೇಟಿ ನೀಡಿದ್ದು ಬಹಳ ಸಂತೋಷವಾಗಿದೆ. ಇಸ್ರೇಲ್ ಪ್ರಧಾನಿ ಜತೆ ಹಲವು ಗಂಭೀರ ವಿಷಯಗಳ ಕುರಿತು ಚರ್ಚಿಸಿದ್ದೇನೆ. ಇಸ್ರೇಲ್ ತಾಂತ್ರಿಕ ಕ್ಷೇತ್ರದಲ್ಲಿ ಭಾರೀ ಸಾಧನೆ ಮಾಡಿದೆ. ಇನ್ನು ನೀರು, ಕೃಷಿ ಸೇರಿದಂತೆ ಹಲವು ಮಹತ್ವದ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದ್ದು ಭಾರತ-ಇಸ್ರೇಲ್ ಸಂಬಂಧ ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು. 
ಪ್ರಧಾನಿ ಬೆಂಜಮಿನ್ ನೇತನ್ಯಾಹು ಪರಿವಾರದ ಜತೆಗೂ ಮಾತನಾಡಿದೆ. ನನ್ನ ಭೂರಿ ಭೋಜನ ನೀಡಿದಕ್ಕೆ ಧನ್ಯವಾದ. ಇದೇ ವೇಳೆ ನಾನು ಇಸ್ರೇಲ್ ಪ್ರಧಾನಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದು ಈ ಆಹ್ವಾನಕ್ಕೆ ಬೆಂಜಮಿನ್ ನೇತನ್ಯಾಹು ಅವರು ಸಹ ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರದಲ್ಲೇ ಅವರು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.