ದೇಶ

ಎಲ್ ಪಿಜಿ ಮೇಲಿನ ಜಿಎಸ್ ಟಿಯನ್ನು ವಾಪಸ್ ಪಡೆಯಲು ಕಾಂಗ್ರೆಸ್ ಒತ್ತಾಯ

ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜೆಎಸ್ ಟಿ) ಜಾರಿಗೊಂಡ ನಂತರ ಕೇಂದ್ರ ಸರ್ಕಾರ ಸಬ್ಸಿಡಿ ಸಹಿತ ಗೃಹ ಬಳಕೆ ಅಡುಗೆ ಅನಿಲ(ಎಲ್ ಪಿಜಿ)ದ ಸಿಲಿಂಡರ್ ದರ ಪ್ರತಿ ಸಿಲಿಂಡರ್ ಗೆ 30 ರುಪಾಯಿ ವರೆಗೆ...

ಎಲ್ ಪಿಜಿ ಮೇಲಿನ ಜಿಎಸ್ ಟಿಯನ್ನು ವಾಪಸ್ ಪಡೆಯಲು ಕಾಂಗ್ರೆಸ್ ಒತ್ತಾಯ
ಕಾಂಗ್ರೆಸ್
Published On :
ನವದೆಹಲಿ: ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜೆಎಸ್ ಟಿ) ಜಾರಿಗೊಂಡ ನಂತರ ಕೇಂದ್ರ ಸರ್ಕಾರ ಸಬ್ಸಿಡಿ ಸಹಿತ ಗೃಹ ಬಳಕೆ ಅಡುಗೆ ಅನಿಲ(ಎಲ್ ಪಿಜಿ)ದ ಸಿಲಿಂಡರ್ ದರ ಪ್ರತಿ ಸಿಲಿಂಡರ್ ಗೆ 30 ರುಪಾಯಿ ವರೆಗೆ ಏರಿಕೆಯಾಗಿರುವುದನ್ನು ಕಾಂಗ್ರೆಸ್ ಖಂಡಿಸಿದೆ. 
ಅಡುಗೆ ಅನಿಲ (ಎಲ್ ಪಿಜಿ) ಮೇಲಿನ ಜಿಎಸ್ ಟಿಯನ್ನು ಕೇಂದ್ರ ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ವಕ್ತಾರ ಅಜಯ್ ಮಕೇನ್ ಒತ್ತಾಯಿಸಿದ್ದಾರೆ. ಜಿಎಸ್ ಟಿ ಜಾರಿಯಾದಾಗಿನಿಂದ ದೇಶದ ವಿವಿಧ ಭಾಗಗಳಲ್ಲಿ ಅಡುಗೆ ಅನಿಲ ದರ (ಎಲ್ ಪಿಜಿಜ್) ದರ ಪ್ರತಿ ಸಿಲಿಂಡರ್ ಗೆ 30 ರೂಪಾಯಿ ಹೆಚ್ಚಳವಾಗಿದ್ದು, ಜನಸಾಮಾನ್ಯರಿಗೆ ಹೊರೆಯಾಗಿದೆ. ಆದ್ದರಿಂದ ಕೂಡಲೇ ಎಲ್ ಪಿಜಿ ಮೇಲಿನ ಜಿಎಸ್ ಟಿಯನ್ನು ವಾಪಸ್ ಪಡೆಯಬೇಕೆಂದು ಅಜಯ್ ಮಕೇನ್ ಒತ್ತಾಯಿಸಿದ್ದಾರೆ. 
ದೆಹಲಿಯಲ್ಲಿ 446.65 ರುಪಾಯಿ ಇದ್ದ ಸಬ್ಸಿಡಿ ಸಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಜಿಎಸ್ ಟಿ ಜಾರಿಯಾದ ನಂತರ ಜುಲೈ 1ರಿಂದ 477.46 ರುಪಾಯಿಗೆ ಏರಿಕೆ ಮಾಡಲಾಗಿದೆ. ತೈಲ ಕಂಪನಿಗಳಿಂದ ದೊರೆತ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಪ್ರತಿ ಸಿಲಿಂಡರ್ ಗೆ 31.67 ರುಪಾಯಿ, ಕೋಲ್ಕತಾದಲ್ಲಿ 31.67 ರುಪಾಯಿ, ಚೆನ್ನೈನಲ್ಲಿ 31.41ರುಪಾಯಿ ಏರಿಕೆ ಮಾಡಲಾಗಿದೆ. ರಾಜ್ಯಗಳಲ್ಲಿ ಜಾರಿ ಇರುವ ತೆರಿಗೆಗೆ ಅನುಗುಣವಾಗಿ ದರದಲ್ಲಿ ಹೆಚ್ಚಳ ಆಗಲಿದೆ. ಇದು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಲಿದೆ. ಜೂನ್ 25, 2011ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಪ್ರತಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 50 ರುಪಾಯಿ ಏರಿಕೆ ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.