ಅಸ್ಸಾಂ ನಲ್ಲಿ ಜಾನುವಾರು ಸಾಗಿಸುತ್ತಿದ್ದವರ ಮೇಲೆ ಹಲ್ಲೆ: ಹಿಂದೂ ವಿದ್ಯಾರ್ಥಿ ಸಂಘಟನೆಯ 5 ಸದಸ್ಯರ ಬಂಧನ
ಜಾನುವಾರು ಸಾಗಿಸುತ್ತಿದ್ದ ಮೂರು ವಾಹನಗಳ ಚಾಲಕರ ಮೇಲೆ ಹಾಗೂ ಸಹಾಯಕರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ....

Published On :
ಗುವಾಹತಿ: ಜಾನುವಾರು ಸಾಗಿಸುತ್ತಿದ್ದ ಮೂರು ವಾಹನಗಳ ಚಾಲಕರ ಮೇಲೆ ಹಾಗೂ ಸಹಾಯಕರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಅಸ್ಸಾಂ ಪೊಲೀಸರು ಹಿಂದೂ ಯುವ ಛತ್ರ ಪರಿಷತ್ ನ ಐವರು ಸದಸ್ಯರನ್ನು ಬಂಧಿಸಿದ್ದಾರೆ.
ಕಳೆದ ಭಾನುವಾರ ಕಮ್ರೂಪ್ ಜಿಲ್ಲೆಯ ದಿಮೋರಿಯಾದಲ್ಲಿ ಜಾನುವಾರು ಸಾಗುಸುತ್ತಿದ್ದ ಒಂದು ಟ್ರಕ್ ಹಾಗೂ ಎರಡು ಟೆಂಪೊಗಳ ತಡೆದು ಅದರ ಚಾಲಕರ ಮೇಲೆ ಹಾಗೂ ಸಹಾಯಕರ ಮೇಲೆ ಹಲ್ಲೆ ನಡೆಸಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಸೋಮವಾರವೇ ಬಂಧಿಸಲಾಗಿದ್ದು, ಇತರೆ ನಾಲ್ವರನ್ನು ಇಂದು ಬಂಧಿಸಲಾಗಿದೆ. ಬಂಧಿತ ಆರೋಪಿಗಳೆಲ್ಲರೂ ಹಿಂದೂ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷೆನ್ 307 (ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಗುವಾಹತಿ ಪೊಲೀಸ್ ಆಯುಕ್ತ ಹಿರೇನ್ ನಾಥ್ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


