ಕೇಂದ್ರ ಬಜೆಟ್: ರೈತರಿಗೆ, ಯುವಕರಿಗೆ ದೊಡ್ಡ ಯೋಜನೆಗಳು ಇಲ್ಲ- ರಾಹುಲ್ ಗಾಂಧಿ
2017-18ನೇ ಸಾಲಿನ ಕೇಂದ್ರದ ಬಜೆಟ್ ನಲ್ಲಿ ರೈತರಿಗೆ ಹಾಗೂ ಯುವಕರಿಗೆ ದೊಡ್ಡ ಮಟ್ಟದ ಯಾವುದೇ ಘೋಷಣೆಗಳನ್ನು ಮಾಡಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬುಧವಾರ ಹೇಳಿದ್ದಾರೆ...

ನವದೆಹಲಿ: 2017-18ನೇ ಸಾಲಿನ ಕೇಂದ್ರದ ಬಜೆಟ್ ನಲ್ಲಿ ರೈತರಿಗೆ ಹಾಗೂ ಯುವಕರಿಗೆ ದೊಡ್ಡ ಮಟ್ಟದ ಯಾವುದೇ ಘೋಷಣೆಗಳನ್ನು ಮಾಡಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬುಧವಾರ ಹೇಳಿದ್ದಾರೆ.
ಬಜೆಟ್ ಮಂಡನೆ ಮುಕ್ತಾಯಗೊಂಡ ಬಳಿಕ ಸಂಸತ್ತಿನ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಒದ್ದೆಯಾಗಿರುವ ಪಟಾಕಿಗಳಿಗಿಂತ ಸಿಡಿಯುವ ಪಟಾಕಿಗಳಂತಹ ದೊಡ್ಡ ಘೋಷಣೆಗಳನ್ನು ನಾವು ನಿರೀಕ್ಷೆ ಮಾಡಿದ್ದೆವು. ಈ ಬಾರಿಯ ಬಜೆಟ್ ನಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿ, ರೈತರ ಪರವಾಗಿರುವ ಯಾವ ದೊಡ್ಡ ಘೋಷಣೆಗಳೂ ಆಗಲಿಲ್ಲ ಎಂದು ಹೇಳಿದ್ದಾರೆ.
ದೇಶ ಇಂದು ಉದ್ಯೋಗ, ರೈತರ ಸಮಸ್ಯೆಗಳಂತಹ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ, ಮೋದಿ ಸರ್ಕಾರ ಇಂತಹ ಸಮಸ್ಯೆಗಳಿಗೆ ಯಾವುದೇ ದೊಡ್ಡ ಘೋಷಣೆಗಳನ್ನು ಮಾಡಿಲ್ಲ. ನಿರುದ್ಯೋಗಸ್ಥ ಯುವಕರಿಗೆ ಹಾಗೂ ರೈತರಿಗೆ ಇದರಿಂದ ಯಾವುದೇ ಲಾಭಗಳಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


