ಸ್ಮಾರ್ಟ್ ಫೋನ್ ಬೆಟ್ ಕಟ್ಟುತ್ತೇನೆ, 2024 ವರೆಗೆ ಕಾಂಗ್ರೆಸ್ ಸುಧಾರಿಸುವುದಿಲ್ಲ: ರಾಮಚಂದ್ರ ಗುಹಾ
ಕಾಂಗ್ರೆಸ್ 2024 ರ ವರೆಗೆ ಕಾಂಗ್ರೆಸ್ ಸುಧಾರಣೆಯಾಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಖ್ಯಾತ ಇತಿಹಾಸಜ್ಞ ರಾಮಚಂದ್ರ ಗುಹಾ ಅಭಿಪ್ರಾಯಪಟ್ಟಿದ್ದಾರೆ.

Published On :
ಕೋಲ್ಕತಾ: ಕಾಂಗ್ರೆಸ್ 2024 ರ ವರೆಗೆ ಕಾಂಗ್ರೆಸ್ ಸುಧಾರಣೆಯಾಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಖ್ಯಾತ ಇತಿಹಾಸಜ್ಞ ರಾಮಚಂದ್ರ ಗುಹಾ ಅಭಿಪ್ರಾಯಪಟ್ಟಿದ್ದಾರೆ.
ಅತ್ಯಂತ ಹಳೆಯ ಪಕ್ಷವಾಗಿರುವ ಕಾಂಗ್ರೆಸ್ ನ ಸುಧಾರಣೆ ಕಷ್ಟ ಸಾಧ್ಯ ಎಂದಿರುವ ರಾಮಚಂದ್ರ ಗುಹಾ, ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಒಂದು ಕಾಲದಲ್ಲಿದ್ದ ತನ್ನ ಹಳೆಯ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸರ ಕುರಿತು ಉಪನ್ಯಾಸ ನೀಡಿದ ಸಂದರ್ಭದಲ್ಲಿ ಮಾತನಾಡಿರುವ ರಾಮಚಂದ್ರ ಗುಹಾ, ಕಾಂಗ್ರೆಸ್ ಸುಧಾರಣೆ ವಿಷಯದಲ್ಲಿ ನನ್ನ ಸ್ಮಾರ್ಟ್ ಫೋನ್ ನನ್ನೂ ಬೆಟ್ ಕಟ್ಟಲು ಸಿದ್ಧನಿದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಕಾಂಗ್ರೆಸ್ಸೇತರ ಸರ್ಕಾರಗಳಲ್ಲಿ ಆಂತರಿಕ ಭಿನ್ನಮತ ಉಂಟಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮತ್ತೊಂದು ಸಾಧ್ಯತೆ ಇರುವುದರ ಬಗ್ಗೆ ಸಭಿಕರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಾಮಚಂದ್ರ ಗುಹಾ, "ನನ್ನ ಪ್ರಕಾರ ಅಂತಹ ಸ್ಥಿತಿಯನ್ನು ನಾವು ದಾಟಿದ್ದೇವೆ" ಎಂದು ಉತ್ತರಿಸಿದ್ದಾರೆ. ಕಾಂಗ್ರೆಸ್ ಗೆ ಪರ್ಯಾಯವಾಗಿ ಯಾರೂ ಸಹ ನರೇಂದ್ರ ಮೋದಿ ಸರ್ಕಾರವನ್ನು 2019 ರಲ್ಲಿ ಅಥವಾ 2024 ರಲ್ಲಿ ಕಲ್ಪಿಸಿಕೊಳ್ಳಬಾರದು ಎಂದೂ ರಾಮಚಂದ್ರ ಗುಹಾ ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ 44 ಲೋಕಸಭಾ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಗರಿಷ್ಟ ಎಷ್ಟು ಸ್ಥಾನಗಳನ್ನು ಪಡೆಯಬಹುದು? 100, 200 ಅಷ್ಟೇ. ಈ ವಿಚಾರವಾಗಿ ನಾನು ನನ್ನ ಸ್ಮಾರ್ಟ್ ಫೋನ್ ನ್ನು ಬೆಟ್ ಕಟ್ಟಲೂ ಸಿದ್ಧನಿದ್ದೇನೆ ಎಂದು ಸುಭಾಷ್ ಚಂದ್ರ ಬೋಸರ 120 ನೇ ಜನ್ಮದಿನದ ಅಂಗವಾಗಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಗುಹಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


