ನೋಟು ನಿಷೇಧ, ಸೀಮಿತ ದಾಳಿ: ಪ್ರಧಾನಿ ಮೋದಿ ಕ್ರಮಕ್ಕೆ ಬಾಬಾ ರಾಮ್'ದೇವ್ ಬೆಂಬಲ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೋಟು ನಿಷೇಧ ಹಾಗೂ ಸೀಮಿತ ದಾಳಿ ನಿರ್ಧಾರಕ್ಕೆ ಯೋಗ ಗುರು ಬಾಬಾ ರಾಮ್ ದೇವ್ ಅವರು ಬೆಂಬಲ ವ್ಯಕ್ತಪಡಿಸಿದ್ದು, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಮೋದಿಯವರು ಉತ್ತಮವಾದ ಕೆಲಸಗಳನ್ನು...

ಕೋಲ್ಕತಾ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೋಟು ನಿಷೇಧ ಹಾಗೂ ಸೀಮಿತ ದಾಳಿ ನಿರ್ಧಾರಕ್ಕೆ ಯೋಗ ಗುರು ಬಾಬಾ ರಾಮ್ ದೇವ್ ಅವರು ಬೆಂಬಲ ವ್ಯಕ್ತಪಡಿಸಿದ್ದು, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಮೋದಿಯವರು ಉತ್ತಮವಾದ ಕೆಲಸಗಳನ್ನು ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ಖಾಸಗಿ ಪತ್ರಿಕೆಯೊಂದು ನಡೆಸಿದ್ದ ರಾಷ್ಟ್ರೀಯ ವಿಚಾರಗಳ ಕುರಿತ ಚರ್ಚೆಯಲ್ಲಿ ಮಾತನಾಡಿರುವ ಅವರು, ಮೋದಿಯವರನ್ನು ಟೀಕಿಸುವುದರಿಂದ ದೇಶಕ್ಕೆ ಏನೂ ಸಿಗುವುದಿಲ್ಲ. ರಾಜಕೀಯ ವ್ಯಕ್ತಿಗಳೇ ಆಗಲೀ, ಯಾರೇ ಆದರೂ, ಅವರ ವೈಯಕ್ತಿಕ ಕ್ಷೇತ್ರಗಳ ಬಗ್ಗೆ ಗಮನಹರಿಸಿ ತಮ್ಮಿಂದ ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡಿ ದೇಶಕ್ಕೆ ಕೊಡುಗೆಯನ್ನು ನೀಡಬೇಕಿದೆ ಎಂದು ಹೇಳಿದ್ದಾರೆ.
ನಾನು ಮೋದಿಯವರನ್ನು ರಕ್ಷಿಸುವುದಕ್ಕಾಗಿ ಈ ಮಾತುಗಳನ್ನು ಹೇಳಿತ್ತಿಲ್ಲ. ದೇಶಕ್ಕಾಗಿ ಮೋದಿಯವರಿಂದ ಏನಾದರೂ ತೆಗೆದುಕೊಳ್ಳಬೇಕೆಂಬುದು ನನಗಿದೆ. ಮೋದಿಯವರಿಂದ ನಾನು ಒಂದು ಪೈಸೆ ಹಣವನ್ನೂ ತೆಗೆದುಕೊಂಡಿಲ್ಲ. ಮೋದಿಯವರಿಂದ ನಾನು ಯಾವುದೇ ಕೆಲಸವನ್ನು ಅಪೇಕ್ಷಿಸಿಲ್ಲ. ಹುದ್ದೆ, ಸ್ಥಾನ ಬೇಕೆಂದೂ ನಾನು ಕೇಳಿಲ್ಲ. ನಾನೊಬ್ಬ ಅಂತರಾಷ್ಟ್ರೀಯ ಭಿಕ್ಷುಕನಾಗಿದ್ದು, ಒಬ್ಬ ಭಿಕ್ಷುಕನಾಗಿ ನಾನು ರಾಜನ ಬಳಿ ಭಿಕ್ಷೆಯನ್ನು ಬೇಡುವುದಿಲ್ಲ.
ಇಂದು ಒಬ್ಬ ದೇಶದ ಪ್ರಧಾನಮಂತ್ರಿಯಾಗಿ ಮೋದಿಯವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಸರಿಯಾಗಿದೆ. ದೇಶದ ಒಳಿತಿಗಾಗಿ ಉತ್ತಮ ನೀತಿಗಳನ್ನು ತಂದಿದ್ದಾರೆ, ಮೋದಿಯವರು ಸಾಕಷ್ಟು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. 27 ಕೋಟಿ ಭಾರತೀಯರು ಬ್ಯಾಂಕ್ ಗಳಲ್ಲಿ ಖಾತೆ ತೆರೆಯುವಂತೆ ಮಾಡಿದ್ದಾರೆ. ಸಾರ್ವಜನಿಕರಿಗೆ ನೇರವಾಗಿ ಸಬ್ಸಿಡಿ ಹೋಗುವಂತೆ ಮಾಡಿದ್ದಾರೆ. ಈ ಯೋಜನೆಗಳು ವೋಟ್ ಬ್ಯಾಂಕ್ ಗಾಗಿ ಅಲ್ಲ. ದೇಶವನ್ನು ಮುನ್ನಡೆಸುವುದಕ್ಕಾಗಿ ಆಗಿದೆ. ಯಾರಾದರೂ ಉತ್ತಮ ಕೆಲಸವನ್ನು ಮಾಡುತ್ತಿದ್ದರೆ, ಅವರನ್ನು ಮಾಡುವುದಕ್ಕೆ ಬಿಡಬೇಕು.
ಇನ್ನು ಸೇನೆಯ ವಿಚಾರಕ್ಕೆ ಬಂದರೆ, ಭಾರತೀಯ ಸೇನೆ ಮಾಡುತ್ತಿರುವ ಕೆಲಸ ಸರಿಯಾಗಿದೆ. ಇದೇ ರೀತಿಯಲ್ಲಿಯೇ ದೇಶದಲ್ಲಿರುವ ಪ್ರತೀಯೊಬ್ಬರೂ ಅಪೌಷ್ಟಿಕತೆ, ಅನಕ್ಷರತೆ, ಬಡತನ, ಹಸಿವು ಮತ್ತು ದೇಶದ ಇನ್ನತರೆ ಸಮಸ್ಯೆಗಳ ವಿರುದ್ಧ ಸೀಮಿತ ದಾಳಿಗಳನ್ನು ನಡೆಸಬೇಕಿದೆ. ಇದು ನಮ್ಮ ದೇಶ. ನಮ್ಮ ದೇಶದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರತೀನಿತ್ಯ ನಾವು ಸೀಮಿತ ದಾಳಿಗಳನ್ನು ನಡೆಸಬೇಕಿದೆ. ಆಗ ಮಾತ್ರ ದೇಶದಲ್ಲಿರುವ ಪ್ರತೀಯೊಬ್ಬ ವ್ಯಕ್ತಿಯೂ ದೇಶದ ಅಭಿವೃದ್ಧಿಗಾಗಿ ಎದ್ದು ನಿಲ್ಲಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


