ಹಿರಾಖಂಡ್ ಎಕ್ಸ್ ಪ್ರೆಸ್ ರೈಲು ದುರಂತದಲ್ಲಿ ವಯಸ್ಕ ಮಕ್ಕಳನ್ನು ಕಳೆದುಕೊಂಡ ತಾಯಿ
ಆಂಧ್ರಪ್ರದೇಶದ ವಿಜಯನಗರಂನಲ್ಲಿ ಜಗದಲ್ ಪುರ-ಭುವನೇಶ್ವರ ನಡುವೆ ಸಂಚರಿಸುತ್ತಿದ್ದ ಹಿರಾಖಂಡ್ ಎಕ್ಸ್ ಪ್ರೆಸ್ ರೈಲು ದುರಂತದಲ್ಲಿ 40 ವರ್ಷದ ...

ಕೋರಾಪುಟ್: ಆಂಧ್ರಪ್ರದೇಶದ ವಿಜಯನಗರಂನಲ್ಲಿ ಜಗದಲ್ ಪುರ-ಭುವನೇಶ್ವರ ನಡುವೆ ಸಂಚರಿಸುತ್ತಿದ್ದ ಹಿರಾಖಂಡ್ ಎಕ್ಸ್ ಪ್ರೆಸ್ ರೈಲು ದುರಂತದಲ್ಲಿ 40 ವರ್ಷದ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದಾರೆ.
ಜಶೋದಾ ಎಂಬ ಮಹಿಳೆ ತಮ್ಮ ಇಬ್ಬರು ಮಕ್ಕಳ ಜೊತೆ ಜನವರಿ 21 ರಂದು ಆಂಧ್ರಪ್ರದೇಶಕ್ಕೆ ಸಂಚರಿಸುತ್ತಿದ್ದರು. ಈ ವೇಳೆ ಸಂಭವಿಸಿದ ರೈಲು ದುರಂತದಲ್ಲಿ ಜಶೋದಾ ಅವರು ತಮ್ಮ 16 ವರ್ಷದ ಮಗಳು ಹಾಗೂ 18 ವರ್ಷದ ಮಗನನ್ನು ಕಳೆದುಕೊಂಡಿದ್ದಾರೆ.
ಮತ್ತೊಂದು ದುರಾದೃಷ್ಟವೆಂದರೆ ಕಳೆದ ವರ್ಷ ಜನವರಿ 22 ರಂದು ಸಂಭವಿಸಿದ ರೈಲು ದುರಂತದಲ್ಲಿ ಜಶೋದಾ ತಮ್ಮ ಪತಿಯನ್ನು ಕಳೆದು ಕೊಂಡಿದ್ದರು. ತಮ್ಮ ಇಬ್ಬರು ಮಕ್ಕಳೊಂದಿಗೆ ಜಶೋದಾ ವಿಜಯನಗರಂ ನಲ್ಲಿರುವ ತಮ್ಮ ಪೋಶಕರ ಮನೆಗೆ ತೆರಳುತ್ತಿದ್ದರು.
ಜುನಾಘರ್-ಭುವನೇಶ್ವರ್ ಎಕ್ಸ್ ಪ್ರೆಸೆ ರೈಲಿನ ಜನರಲ್ ಬೋಗಿಯಲ್ಲಿ ಈ ಕುಟುಂಬ ಟಿಕೆಟ್ ಪಡೆದಿತ್ತು, ಸುಮಾರು ರಾತ್ರಿ 9.30 ರ ಸುಮಾರಿಗೆ ರೈಲು ರಾಯಘಡ ರೈಲು ನಿಲ್ದಾಣ ತಲುಪಿದೆ. ವಿಜಯನಗರಂ ತಲುಪುವ ವೇಳೆಗೆ ಅಲಾರಂ ನಿಲ್ಲಿಸಿದ ಕುಟುಂಬ ರಾತ್ರಿ ಊಟ ಮುಗಿಸಿ ಸ್ವಲ್ಪ ಹೊತ್ತು ಹರಟಿ ನಂತರ ನಿದ್ರೆಗೆ ಜಾರಿದ್ದೆವು ಎಂದು ಜಶೋದಾ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
20 ನಿಮಿಷಗಳ ನಂತರ ರೈಲು ರಾಯಘಡ ನಿಲ್ದಾಣದಿಂದ ಹೊರಟಿತ್ತು. ಜೋರಾದ ಶಬ್ದ ಕೇಳಿ ನಾನು ಎಚ್ಚರಗೊಂಡೆ, ರೈಲಿಗೆ ಯಾರೋ ಕಲ್ಲು ಹೊಡೆಯುತ್ತಿದ್ದಾರೆ ಎಂದು ನಾನು ತಿಳಿದುಕೊಂಡೆ, ಕೂಡಲೇ ರೈಲು ಹಳಿ ತಪ್ಪಿದೆ ಎಂದು ನನಗೆ ತಿಳಿಯಿತು ಎಂದು ನನಗೆ ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.
ಎಲ್ಲಾ ಕಡೆ ಕೂಗಾಟ ಕೇಳಿತು, ನಾನು ಬೋಗಿಯಿಂದ ಹೊರಬಂದು ನನ್ನ ಮಕ್ಕಳಿಗಾಗಿ ಕಾಯುತ್ತಾ ನಿಂತೆ, ಆದರೆ ಅವರು ಬರಲೇ ಇಲ್ಲ ಎಂದು ಗದ್ಗದಿತರಾದರು. ರೈಲು ಹಳಿ ದುರಂತದಲ್ಲಿ ತಮ್ಮ ಇಬ್ಬರು ಮಕ್ಕಳು ಸಾವನ್ನಪ್ಪಿದ್ದನ್ನು ಜಶೋದಾ ನೆನಪಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


