ರೈಲು ದುರಂತ

ಉಡುಪಿ: ಹಳಿಯಲ್ಲಿದ್ದ ದೋಷ ಪತ್ತೆ ಹಚ್ಚಿದ ಟ್ರ್ಯಾಕ್ ನಿರ್ವಾಹಕ; ತಪ್ಪಿತು ಸಂಭಾವ್ಯ ರೈಲು ಅವಘಡ!
ಕೊಂಕಣ ರೈಲು ಮಾರ್ಗದ ಇನ್ನಂಜೆ ಹಾಗೂ ಪಡುಬಿದ್ರಿ ನಡುವಿನ ರೈಲ್ವೆ ಹಳಿಯಲ್ಲಿ ವೆಲ್ಡಿಂಗ್ ಜಾಯಿಂಟ್ ಬಿಟ್ಟಿರುವುದನ್ನು ಪತ್ತೆ ಹಚ್ಚುವ ಮೂಲಕ ರೈಲ್ವೆ ಜಾಗೃತ ಹಳಿ ನಿರ್ವಾಹಕ ಪ್ರದೀಪ್ ಶೆಟ್ಟಿ ಸಂಭಾವ್ಯ ಅವಘಡ ತಪ್ಪಿಸಿದ್ದಾರೆ.

ರೈಲ್ವೆ ಇಲಾಖೆ ನಿದ್ರೆಯಿಂದ ಹೊರಬರುವುದು ಯಾವಾಗ? ಆಂಧ್ರ ರೈಲು ಅಪಘಾತದ ಬಗ್ಗೆ ಮಮತಾ ಬ್ಯಾನರ್ಜಿ ಕಿಡಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಆಂಧ್ರ ರೈಲು ದುರಂತದ ನಂತರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ರೈಲ್ವೆ ನಿದ್ರೆಯಿಂದ ಯಾವಾಗ ಹೊರಬರುತ್ತವೆ? ಎಂದು ಪ್ರಶ್ನಿಸಿದ್ದಾರೆ.

ರೈಲುಗಳಿಗೆ ಚಾಲನೆ ನೀಡುವುದರಲ್ಲಿರುವ ಉತ್ಸಾಹ ಸುರಕ್ಷತೆ ನೀಡುವುದರಲ್ಲೂ ತೋರಿಸಿ: ಕೇಂದ್ರ ಸರ್ಕಾರಕ್ಕೆ ಮಲ್ಲಿಕಾರ್ಜುನ ಖರ್ಗೆ
ಆಂಧ್ರಪ್ರದೇಶ ಸಂಭವಿಸಿದು ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸೋಮವಾರ ವಾಗ್ದಾಳಿ ನಡೆಸಿದ್ದಾರೆ.

ಬಾಲಸೋರ್ ರೈಲು ಅಪಘಾತ ಪ್ರಕರಣ; 3 ರೈಲ್ವೆ ಉದ್ಯೋಗಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಸಿಬಿಐ
ಜೂನ್ 2ರಂದು ನಡೆದ ಭೀಕರ ಬಾಲಸೋರ್ ತ್ರಿವಳಿ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಮೂವರು ರೈಲ್ವೆ ಉದ್ಯೋಗಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಶನಿವಾರ ಚಾರ್ಜ್ ಶೀಟ್ ಸಲ್ಲಿಸಿದೆ. ಆರೋಪಗಳಲ್ಲಿ ನರಹತ್ಯೆ ಮತ್ತು ಸಾಕ್ಷ್ಯ ನಾಶವೂ ಸೇರಿದೆ.

ಮೃತದೇಹಗಳ ಗುರುತು ಪತ್ತೆ ಸವಾಲು; 33 ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗೆ ದೆಹಲಿಗೆ ಕಳುಹಿಸಿದ ಒಡಿಶಾ ಸರ್ಕಾರ
ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಮೃತಪಟ್ಟ ಹಲವರ ಗುರುತು ಪತ್ತೆಹಚ್ಚುವುದು ಇದೀಗ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಒಂದೇ ಮೃತದೇಹಕ್ಕೆ ಹಲವಾರು ಜನರು ಹಕ್ಕು ಸಾಧಿಸುತ್ತಿದ್ದು, ಒಡಿಶಾ ಸರ್ಕಾರವು ಮೃತರ ಗುರುತಿಗಾಗಿ ಡಿಎನ್‌ಎ ಪರೀಕ್ಷೆಗಾಗಿ 33 ಮಾದರಿಗಳನ್ನು ದೆಹಲಿಯ ಏಮ್ಸ್‌ಗೆ ಕಳುಹಿಸಿದೆ.

WTC ಫೈನಲ್: ಕಪ್ಪು ಪಟ್ಟಿ ಧರಿಸಿ ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ಗೌರವ ಸಲ್ಲಿಸಿದ ಭಾರತ, ಆಸ್ಟ್ರೇಲಿಯಾ
ಲಂಡನ್ ನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮತ್ತು ಪಂದ್ಯದ ಅಧಿಕಾರಿಗಳು ಕಪ್ಪು ಪಟ್ಟಿ ಧರಿಸುವ ಮೂಲಕ...

ಒಡಿಶಾ ತ್ರಿವಳಿ ರೈಲು ದುರಂತ: ಎಫ್‌ಐಆರ್ ದಾಖಲಿಸಿದ ಸಿಬಿಐ, ತನಿಖೆ ಚುರುಕು
ಒಡಿಶಾ ತ್ರಿವಳಿ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಮಂಗಳವಾರ ತಿಳಿಸಿದೆ.

ಒಡಿಶಾ ರೈಲು ದುರಂತ: ನಿರ್ಲಕ್ಷ್ಯವೇ ಸಾವಿಗೆ ಕಾರಣ, ರೈಲ್ವೆ ಪೊಲೀಸರಿಂದ ಪ್ರಕರಣ ದಾಖಲು
ಒಡಿಶಾದ ಬಹನಾಗ ಬಳಿ ಸಂಭವಿಸಿದ ಭೀಕರ ರೈಲು ಅಪಘಾತದ ನಂತರ ನಿರ್ಲಕ್ಷ್ಯದಿಂದ ಸಾವು, ನೋವಿಗೆ ಕಾರಣವಾಗಿದ್ದಕ್ಕೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಸರ್ಕಾರಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಒಡಿಶಾ ರೈಲು ದುರಂತ: ಪಶ್ಚಿಮ ಬಂಗಾಳದ ಸುಂದರಬನ್ಸ್ ಪ್ರದೇಶದಿಂದ ಗರಿಷ್ಠ ಸಾವು ವರದಿ
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸುಂದರಬನ್ಸ್ ಪ್ರದೇಶವು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಅಪಘಾತದ ಪರಿಣಾಮವಾಗಿ ಉಂಟಾದ ಸಾವುಗಳ ಪೈಕಿ ರಾಜ್ಯದಿಂದ ಗರಿಷ್ಠ ಸಂಖ್ಯೆಯ ಸಾವುನೋವುಗಳನ್ನು ದಾಖಲಿಸಿದೆ.

