ಮಣಿಪುರ, ತ್ರಿಪುರ, ಮೇಘಾಲಯದಲ್ಲಿ 45ನೇ ರಾಜ್ಯೋತ್ಸವ ದಿನಾಚರಣೆ: ಶುಭಾಶಯ ಕೋರಿದ ಪ್ರಧಾನಿ ಮೋದಿ
ಮಣಿಪುರ, ತ್ರಿಪುರ ಹಾಗೂ ಮೇಘಾಲಯ ಮೂರು ರಾಜ್ಯಗಳಲ್ಲಿ 45ನೇ ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಶುಭಾಶಯಗಳನ್ನು...

ನವದೆಹಲಿ: ಮಣಿಪುರ, ತ್ರಿಪುರ ಹಾಗೂ ಮೇಘಾಲಯ ಮೂರು ರಾಜ್ಯಗಳಲ್ಲಿ 45ನೇ ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಶುಭಾಶಯಗಳನ್ನು ಕೋರಿದ್ದಾರೆ.
ಟ್ವಿಟರ್ ನಲ್ಲಿ ಶುಭಾಶಯಗಳನ್ನು ಕೋರಿರುವ ಅವರು, ಮೇಘಾಲಯ, ಮಣಿಪುರ ಮತ್ತು ತ್ರಿಪುರದಲ್ಲಿ ರಾಜ್ಯೋತ್ಸವ ದಿನಾಚರಣೆಯನ್ನು ಆದರಿಸುತ್ತಿದ್ದು, ಮೂರು ರಾಜ್ಯದ ಜನತೆಗೆ ಈ ಮೂಲ ಶುಭಾಶಯಗಳನ್ನು ಕೋರುತ್ತಿದ್ದೇನೆ. ಮೂರು ರಾಜ್ಯಗಳೂ ಉತ್ತಮ ಅಭಿವೃದ್ಧಿ ಪ್ರಯಾಣವನ್ನು ನಡೆಸಲಿ ಎಂದು ಹೇಳಿದ್ದಾರೆ.
ಮೂರು ರಾಜ್ಯಗಳ ರಾಜ್ಯೋತ್ಸವ ಹಿನ್ನಲೆಯಲ್ಲಿ ಸರಣಿಯಾಗಿ ಟ್ವೀಟರ್ ಮಾಡಿರುವ ಪ್ರಧಾನಿ ಮೋದಿಯವರು, ಮಣಿಪುರ ರಾಜ್ಯದ ಜನತೆ ಇಂದು ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸುತ್ತದೆ. ಮಣಿಪುರದಲ್ಲಿ ಸಂತೋಷ ಹಾಗೂ ಸಮೃದ್ಧಿ ತುಂಬಿರಲಿ ಎಂದು ಆಶಿಸುತ್ತೇನೆಂದು ತಿಳಿಸಿದ್ದಾರೆ.
ತ್ರಿಪುರ ರಾಜ್ಯದಲ್ಲಿ ರಾಜ್ಯದಲ್ಲಿ ರಾಜ್ಯೋತ್ಸವ ದಿನಾಚರಣೆ ಆಚರಿಸುತ್ತಿದ್ದು, ತ್ರಿಪುರ ರಾಜ್ಯ ಎಲ್ಲಾ ರೀತಿಯಲ್ಲಿಯೂ ಉತ್ತಮವಾದ ಬೆಳವಣಿಗೆಯನ್ನು ಕಾಣಲಿ ಎಂದಿದ್ದಾರೆ.
ಮೇಘಾಲಯ ರಾಜ್ಯದ ಜನತೆಗೆ ಶುಭಾಶಯಗಳನ್ನು ಕೋರಿರುವ ಅವರು, ಮಣಿಪುರ ರಾಜ್ಯದ ಅಭಿವೃದ್ಧಿ ಪ್ರಯಾಣ ಉತ್ತಮವಾಗಿ ಮುಂದುವರೆಯಲಿ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


