ಜಮ್ಮು-ಕಾಶ್ಮೀರ: ಸಂಚಾರ, ನೀರು, ವಿದ್ಯುತ್ ಪೂರೈಕೆಗೆ ತೊಂದರೆಯಾಗಿರುವ ದಟ್ಟ ಮಂಜು
ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ದಟ್ಟ ಹಿಮ ಬೀಳುವುದು ಮುಂದುವರಿದಿದ್ದು ಚಳಿಗೆ ಜನರ ಸಮಸ್ಯೆಗಳು...

Published On :
ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ದಟ್ಟ ಹಿಮ ಬೀಳುವುದು ಮುಂದುವರಿದಿದ್ದು ಚಳಿಗೆ ಜನರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರ ಸಂಚಾರ ಸಮಸ್ಯೆಗಳು ಮಾತ್ರವಲ್ಲದೆ ನೀರು, ವಿದ್ಯುತ್ ಪೂರೈಕೆಯಂತಹ ತೊಂದರೆಗಳು ಕೂಡ ಕಂಡುಬರುತ್ತಿವೆ.
ಪಟ್ನಿಟೊಪ್ ನಲ್ಲಿ ನೀರು ಮಂಜುಗಡ್ಡೆಯಾಗಿರುವುದರಿಂದ ಜನರಿಗೆ ನಿತ್ಯ ಕಾರ್ಯಕ್ಕೆ ಸಿಗುವುದು ದುಸ್ತರವಾಗುತ್ತಿದೆ. ವಿದ್ಯುತ್ ಕೂಡ ಸರಿಯಾಗಿ ಪೂರೈಕೆಯಾಗುತ್ತಿಲ್ಲ.
ಹೊಟೇಲ್ ಗಳಲ್ಲಿ ನೀರು, ವಿದ್ಯುತ್ ಇಲ್ಲದೆ ಸರಿಯಾಗಿ ತಿಂಡಿ ತಿನಿಸುಗಳನ್ನು ತಯಾರಿಸಲು ಆಗುತ್ತಿಲ್ಲ ಎಂದು ಹೊಟೇಲ್ ನ ವ್ಯವಸ್ಥಾಪಕರೊಬ್ಬರು ಹೇಳುತ್ತಾರೆ.
ಜಮ್ಮು-ಕಾಶ್ಮೀರಕ್ಕೆ ತೆರಳಿರುವ ಪ್ರವಾಸಿಗರು ಅಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದಾರೆ. ''ನಮಗೆ ಆದಷ್ಟು ಬೇಗ ಮನೆಗೆ ಹೋಗಬೇಕೆಂದು ಅನಿಸುತ್ತಿದೆ. ಇಲ್ಲಿ ಮೂಲಭೂತ ಅಗತ್ಯಗಳಿಗೆ ತೊಂದರೆಯಾಗುತ್ತಿದೆ''ಎನ್ನುತ್ತಾರೆ ಪ್ರವಾಸಿಗರೊಬ್ಬರು.
ದಟ್ಟ ಮಂಜು ಕವಿದಿರುವುದರಿಂದ ಜಮ್ಮುವಿನ ಮುಘಲ್ ರಸ್ತೆಯಲ್ಲಿ ವಾಹನ ಸಂಚಾರದ ಮೇಲೆ ಪರಿಣಾಮ ಬಿದ್ದಿದೆ.ಪ್ರತಿ ವರ್ಷ ಚಳಿಗಾಲದಲ್ಲಿ ಕಣಿವೆ ರಾಜ್ಯದಲ್ಲಿ ಈ ಸಮಸ್ಯೆ ಕಂಡುಬರುವುದರಿಂದ ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಸಲಹೆಯೊಂದನ್ನು ಹೇಳಿದ್ದಾರೆ.
ಸುರಂಗವೊಂದನ್ನು ಕೆತ್ತಿ ಸಂಚಾರಕ್ಕೆ ತೊಂದರೆಯುಂಟಾಗಿರುವ ರಾಜೌರಿ, ಪೂಂಚ್ ಜಿಲ್ಲೆಗಳನ್ನು ಕಾಶ್ಮೀರಕ್ಕೆ ಸಂಪರ್ಕಿಸಬೇಕು ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


