ದೇಶ

ಶೈಕ್ಷಣಿಕ ಅರ್ಹತೆ ಮಾಹಿತಿ ನೀಡದಂತೆ ದೆಹಲಿ ವಿವಿಗೆ ಇರಾನಿ ಆದೇಶ: ಎಸ್ ಒಎಲ್

ತಮ್ಮ ಶೈಕ್ಷಣಿಕ ವಿದ್ಯಾರ್ಹತೆಯ ಮಾಹಿತಿಯನ್ನು ಆರ್ ಟಿ ಐ ಕಾರ್ಯಕರ್ತನಿಗೆ ನೀಡಬಾರದು ಎಂದು ದೆಹಲಿ ವಿಶ್ವ ವಿದ್ಯಾನಿಲಯಕ್ಕೆ ಕೇಂದ್ರ ಸಚಿವೆ ...

ಶೈಕ್ಷಣಿಕ ಅರ್ಹತೆ ಮಾಹಿತಿ ನೀಡದಂತೆ ದೆಹಲಿ ವಿವಿಗೆ ಇರಾನಿ ಆದೇಶ: ಎಸ್ ಒಎಲ್
ಸ್ಮೃತಿ ಇರಾನಿ
Published On :

ನವದೆಹಲಿ: ತಮ್ಮ ಶೈಕ್ಷಣಿಕ ವಿದ್ಯಾರ್ಹತೆಯ ಮಾಹಿತಿಯನ್ನು ಆರ್ ಟಿ ಐ ಕಾರ್ಯಕರ್ತನಿಗೆ ನೀಡಬಾರದು ಎಂದು ದೆಹಲಿ ವಿಶ್ವ ವಿದ್ಯಾನಿಲಯಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆದೇಶಿಸಿದ್ದಾರೆ ಎಂದು ದೆಹಲಿಯ ಮುಕ್ತ ಕಲಿಕಾ ಶಾಲೆ ಕೇಂದ್ರ ಮಾಹಿತಿ ಆಯೋಗಕ್ಕೆ ಹೇಳಿದೆ.

ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಅವರ ವಿದ್ಯಾರ್ಹತೆಯ ಎಲ್ಲಾ ದಾಖಲೆಗಳನ್ನು ನೀಡುವಂತೆ ದೆಹಲಿಯ ಮುಕ್ತ ಕಲಿಕಾ ಶಾಲೆ ಕೇಂದ್ರ ಮಾಹಿತಿ ಆಯೋಗ ಸೂಚಿಸಿದೆ.

ಇರಾನಿ ವಿದ್ಯಾರ್ಹತೆ ಬಗೆಗಿನ ಮಾಹಿತಿಗಳನ್ನೊಳಗೊಂಡ ದಾಖಲೆಗಳನ್ನು ನೀಡುವಲ್ಲಿ ವಿಫಲವಾಗಿರುವ ದೆಹಲಿ ವಿವಿಗೆ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಶೋಕಾಸ್ ನೊಟೀಸ್ ನೀಡಿದ್ದಾರೆ.

2004, 2011 ಹಾಗೂ 2014 ರ ಚುನಾವಣೆ ಸಂದರ್ಭಗಳಲ್ಲಿ ಸ್ಮೃತಿ ಇರಾನಿ ಪದವಿ ವಿಚಾರವಾಗಿ ಸರಿಯಾದ ಪ್ರಮಾಣಪತ್ರ ನೀಡಿಲ್ಲ ಎಂದು ಅರ್ಜಿ ಸಲ್ಲಿಸಲಾಗಿತ್ತು.ಈ ಸಂಬಂಧ ಮಾಹಿತಿ ನೀಡುವಂತೆ ದೆಹಲಿ ವಿವಿಗೆ ಕೇಂದ್ರ ಮಾಹಿತಿ ಆಯೋಗ ಸೂಚಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.