ದೇಶ

ತವರು ಕ್ಷೇತ್ರದಲ್ಲಿಯೇ 'ಬಾದಲ್' ಸೋಲು ಕಾಣುವಂತೆ ಮಾಡುತ್ತೇನೆ: ಅಮರಿಂದರ್ ಸಿಂಗ್

ಪಂಜಾಬ್ ರಾಜ್ಯದಲ್ಲಿ ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಪ್ರಕಾಶ್ ಸಿಂಗ್ ಬಾದಲ್ ಅವರು ತಮ್ಮ ತವರು ಕ್ಷೇತ್ರದಲ್ಲಿಯೋ ಸೋಲು ಕಾಣುವಂತೆ ಮಾಡುತ್ತೇನೆಂದು ಪಂಜಾಬಾ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕ್ಯಾಪ್ಟೆನ್ ಅಮರಿಂದರ್ ಸಿಂಗ್ ಅವರು...

ತವರು ಕ್ಷೇತ್ರದಲ್ಲಿಯೇ 'ಬಾದಲ್' ಸೋಲು ಕಾಣುವಂತೆ ಮಾಡುತ್ತೇನೆ: ಅಮರಿಂದರ್ ಸಿಂಗ್
ಪಂಜಾಬಾ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕ್ಯಾಪ್ಟೆನ್ ಅಮರಿಂದರ್ ಸಿಂಗ್
Published On :

ಪಟಿಯಾಲ: ಪಂಜಾಬ್ ರಾಜ್ಯದಲ್ಲಿ ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಪ್ರಕಾಶ್ ಸಿಂಗ್ ಬಾದಲ್ ಅವರು ತಮ್ಮ ತವರು ಕ್ಷೇತ್ರದಲ್ಲಿಯೋ ಸೋಲು ಕಾಣುವಂತೆ ಮಾಡುತ್ತೇನೆಂದು ಪಂಜಾಬಾ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕ್ಯಾಪ್ಟೆನ್ ಅಮರಿಂದರ್ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಪ್ರಕಾಶ್ ಸಿಂಗ್ ಬಾದಲ್ ಅವರ ತವರು ಕ್ಷೇತ್ರ ಲಂಬಿಯಲ್ಲೇ ಅವರು ಸೋಲು ಕಾಣುವಂತೆ ಮಾಡುತ್ತೇನೆಂದು ಹೇಳಿದ್ದಾರೆ.

ಇದೇ ವೇಳೆ ನವಜೋತ್ ಸಿಂಗ್ ಸಿಧು ಅವರು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರು ಅವರು, ಸಿಧು ಸೇರ್ಪಡೆ ಹಿಂದೆ ಯಾವುದೇ ಒಪ್ಪಂದಗಳಿಲ್ಲ. ಸೇರ್ಪಡೆಗೊಂಡ ಸಮಯದಲ್ಲಿಯೇ ಸ್ವತಃ ಸಿಧು ಅವರ ತಾವು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನನ್ನ ತಂದೆ ಕಾಂಗ್ರೆಸ್ಸಿಗರಾಗಿದ್ದರು, " ನಾನು ಮೂಲತಃ ಕಾಂಗ್ರೆಸ್ಸಿಗ, ಈಗ ಘರ್ ವಾಪಸಿಯಾಗಿದೆಯಷ್ಟೇ ಎಂದು ಹೇಳಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

ಮಾಜಿ ಸೇನಾ ಮುಖ್ಯಸ್ಥ ಹಾಗೂ ಅಕಾಲಿ ದಳದಿಂದ ಪಟಿಯಾಲಗೆ ಅಭ್ಯರ್ಥಿಯಾಗಿ ಜೆ.ಜೆ. ಸಿಂಗ್ ಅವರು ಚುನಾವಣಾ ಕಣಕ್ಕೆ ಇಳಿಯುತ್ತಿರುವ ಕುರಿತಂತೆ ಮಾತನಾಡಿರುವ ಅವರು, ನನಗಿಂತಲೂ ಸಿಂಗ್ ಅವರು ಒಂದು ವರ್ಷ ಜೂನಿಯರ್ ಆಗಿದ್ದು, ಅವರ ಬಲವೇನು ಎಂಬುದು ನನಗೆ ಗೊತ್ತಿದೆ ಎಂದಿದ್ದಾರೆ.

ಸಟ್ಲಜ್ ಯಮುನಾ ಸಂಪರ್ಕ ಕಾಲುವೆ ವಿವಾದ ಕುರಿತಂತೆ ಮಾತನಾಡಿರುವ ಅವರು, ಹರಿಯಾಣ ರಾಜ್ಯಕ್ಕೆ ಒಂದು ತೊಟ್ಟು ಹನಿ ನೀರು ಹೋಗಲು ನಾವು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.