ದೇಶ

ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ತ.ನಾಡಿನ ವಿವಿಧೆಡೆ ಜಲ್ಲಕಟ್ಟು ಆಚರಣೆ

ಸುಪ್ರೀಂ ಕೋರ್ಟ್ ನ ಆದೇಶದ ಹೊರತಾಗಿಯೂ ತಮಿಳುನಾಡಿನ ವಿವಿಧೆಡೆ ನಿಷೇಧಿತ ಜಲ್ಲಿಕಟ್ಟು ಆಚರಣೆ ಮಾಡಲಾಗಿದ್ದು, ಈ ವೇಳೆ ಆಚರಣೆಯಲ್ಲಿ ತೊಡಗಿದ್ದ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ತ.ನಾಡಿನ ವಿವಿಧೆಡೆ ಜಲ್ಲಕಟ್ಟು ಆಚರಣೆ
ಪಾಲಮೇಡುವಿನಲ್ಲಿ ನಡೆದ ಜಲ್ಲಿಕಟ್ಟು ಆಚರಣೆ
Published On :

ಮಧುರೈ: ಸುಪ್ರೀಂ ಕೋರ್ಟ್ ನ ಆದೇಶದ ಹೊರತಾಗಿಯೂ ತಮಿಳುನಾಡಿನ ವಿವಿಧೆಡೆ ನಿಷೇಧಿತ ಜಲ್ಲಿಕಟ್ಟು ಆಚರಣೆ ಮಾಡಲಾಗಿದ್ದು, ಈ ವೇಳೆ ಆಚರಣೆಯಲ್ಲಿ ತೊಡಗಿದ್ದ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಪೊಂಗಲ್ ಹಬ್ಬದ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಸಾಹಸ ಕ್ರೀಡೆಗೆ ಸುಪ್ರೀಂ ಕೋರ್ಟ್ ಅನುಮತಿ ನಿರಾಕರಿಸಿರುವದರಿಂದ ಕೆಲ ತಮಿಳು ಸಂಘಟನೆಗಳು ನ್ಯಾಯಾಲಯದ ಆದೇಶವನ್ನು ನಿರಾಕರಿಸಿ ಜಲ್ಲಿಕಟ್ಟು  ಆಚರಣೆ ಮಾಡಿದ್ದಾರೆ. ಪ್ರಮುಖವಾಗಿ ಜಲ್ಲಿಕಟ್ಟು ಆಚರಣೆಯ ಕೇಂದ್ರ ಭಾಗ ಎಂದೇ ಖ್ಯಾತಿ ಗಳಿಸಿರುವ ಮಧುರೈನ ಪಾಲಮೇಡುವಿನಲ್ಲಿ ಗೂಳಿಗಳನ್ನು ಓಡಿಸಲಾಗಿದ್ದು, ಇದಲ್ಲದೇ ಮುದಕಾಂತನ್, ಅಲ್ಲಂಗನಲ್ಲೂರು, ವಿಲಾನ್‌ಗುಡಿ,  ದಿಂಡಿಗಲ್ ಜಿಲ್ಲೆಯ ನಲ್ಲಂಪಟ್ಟಿ ಹಾಗೂ ತಂಜಾವೂರ್ ಜಿಲ್ಲೆಯ ಪೊಟ್ಟುಚಾವಡಿ ಗ್ರಾಮಗಳಲ್ಲಿ ಜಲ್ಲಿಕಟ್ಟು ಆಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಪಲಮೇಡು ಗ್ರಾಮದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ನಡೆಸಿದ ಗ್ರಾಮಸ್ಥರು ಬಳಿಕ ಜಲ್ಲಿಕಟ್ಟು ನಡೆಸಿ ಸಂಭ್ರಮಿಸಿದರು. ಇನ್ನು ಅನೇಕ ಕಡೆಗಳಲ್ಲಿ ಜಲ್ಲಿಕಟ್ಟು ಆಯೋಜನೆಗೆ ಪೊಲೀಸರು ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ  ಪ್ರತಿಭಟನೆಗಳು ನಡೆದಿವೆ. ಜಲ್ಲಿಕಟ್ಟು ಆಚರಣೆ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ತೆರಳಿ ಹತ್ತಾರು ಮಂದಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಅಲ್ಲದೆ ಹಲವು ಗೂಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.   ಮಧುರೈನ ಪಾಲಮೇಡು ಪ್ರದೇಶದಲ್ಲಿ ಭಾನುವಾರ ಬಂದ್ ಆಚರಿಸುವ ಮೂಲಕ ಜಲ್ಲಿಕಟ್ಟು ಆಸಕ್ತರು ಕೇಂದ್ರ ಸರ್ಕಾರ ಮತ್ತು ಸರ್ವೋಚ್ಚ ನ್ಯಾಯಾಲಯದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ಗೂಳಿಗಳ ಮಾಲೀಕರನ್ನು ಗುರುತಿಸಲು ಪೊಲೀಸರು ಕ್ರಮ ಕೈಗೊಂಡಿದ್ದು, ಬಂಧಿತರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಪಾಲಮೇಡುವಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಸ್ಥಳದಲ್ಲಿ ಸುಮಾರು 600ಕ್ಕೂ  ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಂತೆಯೇ ಗೂಳಿ ಓಟಕ್ಕೆ ಸಿದ್ಧಪಡಿಸಲಾಗಿದ್ದ ಮೈದಾನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮೈದಾನಗ ಸುತ್ತ ಬ್ಯಾರಿಕೇಡ್ ಗಳನ್ನು ಹಾಕಿದ್ದಾರೆ. ಪೊಲೀಸರ ಆಗಮನ  ತಿಳಿಯುತ್ತಿದ್ದತಂಯೇ ಸ್ಥಳೀಯರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದು, ಜಲ್ಲಿಕಟ್ಟು ನಮ್ಮ ಸಾಂಪ್ರದಾಯಿಕ ಆಚರಣೆ ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ವಾಗ್ವಾದ ನಡೆಸಿದ್ದಾರೆ. ಈ ವೇಳೆ ಹಿರಿಯ ಪೊಲೀಸ್  ಅಧಿಕಾರಿಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಇನ್ನು ಪಾಲಮೇಡುವಿನ ಮನೆ ಹಾಗೂ ಅಂಗಡಿ ಮುಂಗಟ್ಟುಗಳ ಮೇಲೆ ಕಪ್ಪುಧ್ವಜ ಹಾರಿಸುವ ಮೂಲಕ ಕೇಂದ್ರ ಸರ್ಕಾರ ಹಾಗೂ ಸರ್ವೋಚ್ಛ ನ್ಯಾಯಾಲಯದ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.