ದೇಶ

ಯೋಧರೇ.. ನಿಮ್ಮ ದೂರುಗಳನ್ನು ನೇರವಾಗಿ ನನಗೆ ನೀಡಿ: ಬಿಪಿನ್ ರಾವತ್

ಭಾರತೀಯ ಸೇನೆ ಯೋಧರು ತಮಗೆ ಆಗುತ್ತಿರುವ ಸಮಸ್ಯೆಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದು ಇದು ದೇಶಾದ್ಯಂತ ಹೆಚ್ಚು...

ಯೋಧರೇ.. ನಿಮ್ಮ ದೂರುಗಳನ್ನು ನೇರವಾಗಿ ನನಗೆ ನೀಡಿ: ಬಿಪಿನ್ ರಾವತ್
ಬಿಪಿನ್ ರಾವತ್
Published On :
ನವದೆಹಲಿ: ಭಾರತೀಯ ಸೇನೆ ಯೋಧರು ತಮಗೆ ಆಗುತ್ತಿರುವ ಸಮಸ್ಯೆಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದು ಇದು ದೇಶಾದ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ. ಹೀಗಾಗಿ ನೂತನ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಅವರು ಯೋಧರು ತಮಗೆ ಆಗುತ್ತಿರುವ ಸಮಸ್ಯೆಗಳ ದೂರನ್ನು ನೇರವಾಗಿ ನೀಡುವಂತೆ ತಿಳಿಸಿದ್ದಾರೆ.
ಭಾರತೀಯ ಸೇನೆಯ ಪ್ರತಿಯೊಂದು ಕ್ಯಾಂಪ್ ನಲ್ಲೂ ಸಲಹೆ ಮತ್ತು ದೂರು ಬಾಕ್ಸ್ ಗಳನ್ನು ಅಳವಡಿಸಲಾಗುವುದು ಅದರಲ್ಲಿ ಯೋಧರು ತಮ್ಮಗೆ ಆಗುತ್ತಿರುವ ಸಮಸ್ಯೆಗಳನ್ನು ಪತ್ರದಲ್ಲಿ ಬರೆದು ಹಾಕಬಹುದಾಗಿದೆ. ನೀವು ಬರೆದಂತಾ ಪತ್ರಗಳ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದು ಬಿಪಿನ್ ರಾವತ್ ಭರವಸೆ ನೀಡಿದ್ದಾರೆ. 
ಸೇನಾ ದಿನಾಚರಣೆ ಹಿನ್ನೆಲೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಬಿಪಿನ್ ರಾವತ್ ಅವರು, ಯೋಧರು ತಮಗೆ ಆಗುತ್ತಿರುವ ತೊಂದರೆ, ಅಪೌಷ್ಟಿಕ ಆಹಾರ, ರಜೆ ಸೇರಿದಂತೆ ಯಾವುದೇ ಸಮಸ್ಯೆ ಎದುರಿಸುತ್ತಿದ್ದರೆ ಅದನ್ನು ನೇರವಾಗಿ ಬರೆದು ಬಾಕ್ಸ್ ನಲ್ಲಿ ಹಾಕಬಹುದು. ಸಮಸ್ಯೆ ಕುರಿತು ಯೋಧರು ಬರೆದ ಪತ್ರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ ಎಂದು ಹೇಳಿದರು. 
ಕಳಪೆ ಆಹಾರ ಹಾಗೂ ಉಪವಾಸ ಇರಬೇಕಾದ ಸ್ಥಿತಿ ಬಗ್ಗೆ ಗಡಿ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು. ಇದರ ಹಿಂದೆ ಇನ್ನು ಕೆಲ ಯೋಧರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆಗಿದ್ದವು. ಈ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ರಾವತ್ ಯೋಧರು ತಮ್ಮ ದೂರುಗಳನ್ನು ಆಂತರಿಕವಾಗಿ ನೀಡುವ ಅವಕಾಶ ಕಲ್ಪಿಸುವ ಭರವಸೆ ನೀಡಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.