ವಸತಿ ಶಾಲೆಯಲ್ಲಿ ಅತ್ಯಾಚಾರ ಆರೋಪ: ಬಾಲಕಿಯರಿಗೆ ಆಕ್ಷೇಪಾರ್ಹ ಪ್ರಶ್ನೆ ಕೇಳಿದ ಶಾಸಕ
ಸರ್ಕಾರಿ ಸ್ವಾಮ್ಯದ ವಸತಿ ಶಾಲೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ...

Published On :
ಪಾಟ್ನಾ: ಸರ್ಕಾರಿ ಸ್ವಾಮ್ಯದ ವಸತಿ ಶಾಲೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಇತರೆ ಬಾಲಕಿಯರಿಗೆ ರಾಷ್ಟ್ರೀಯ ಲೋಕ ಸಮತಾ ಪಾರ್ಟಿಯ (ಆರ್ ಎಲ್ ಎಸ್ ಪಿ) ಶಾಸಕರು ಆಕ್ಷೇಪಾರ್ಹ ಪ್ರಶ್ನೆಗಳನ್ನು ಕೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಇಂದು ಬಿಹಾರದ ವೈಶಾಲಿ ಜಿಲ್ಲೆಯಲ್ಲಿರುವ ದಲಿತ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿದ್ದ ರೋಹ್ಟಾಸ್ ಜಿಲ್ಲೆಯ ಚೆನಾರಿ ಶಾಸಕ ಲಲನ್ ಪಾಸ್ವಾನ್ ಅವರು, "ಒಂದು ಹುಡುಗಿ ಅತ್ಯಾಚಾರಕ್ಕೊಳಗಾಗಿದ್ದಾಳೆ ಅಂತ ಹೇಗೆ ಹೇಳ್ತೀರಿ? ಅಸಲಿಗೆ ರೇಪ್ ಅಂದ್ರೆ ಏನು ಗೊತ್ತಾ? ಹಾಗಾದಾಗ ರಕ್ತ ಎಲ್ಲಿಂದ ಬರುತ್ತೆ ಹೇಳಿ ನೋಡೋಣ?'' ಎಂಬ ನಿರ್ಲಜ್ಜ ಪ್ರಶ್ನೆಗಳನ್ನು ಹತ್ಯೆಯಾದ ಬಾಲಕಿಯ ಗೆಳತಿಯರಿಗೆ ಕೇಳಿದ್ದಾರೆ.
ಜನಪ್ರತಿನಿಧಿಯೊಬ್ಬರು ಹಾಸ್ಟೆಲ್ ನಲ್ಲಿರುವ 11ನೇ ತರಗತಿಯಲ್ಲಿ ಓದುತ್ತಿರುವ ಹುಡುಗಿಯರ ಬಳಿ ಇಂಥ ಪ್ರಶ್ನೆಗಳನ್ನು ಕೇಳಿರುವುದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಜನವರಿ 8ರಂದು ಬೆಳಗ್ಗೆ ಇದೆ ಹಾಸ್ಟೆಲ್ ನಲ್ಲಿ ಓದುತ್ತಿದ್ದ ಬಾಲಕಿಯ ಶವ, ಹಾಸ್ಟೆಲ್ ನಿಂದ ತುಸು ದೂರ ಪತ್ತೆಯಾಗಿತ್ತು. ರಕ್ತ ಸಿಕ್ತವಾಗಿ, ಬಟ್ಟೆ ಹರಿದಿದ್ದರಿಂದಾಗಿ ಅದು ಅತ್ಯಾಚಾರವೆಂದೇ ಭಾಸವಾಗುವಂತಿತ್ತು.
ಪ್ರಕರಣದ ಹಿನ್ನೆಲೆಯಲ್ಲೇ ಇಂದು ಹಾಸ್ಟೆಲ್ ಗೆ ಭೇಟಿ ನೀಡಿದ ಶಾಸಕ ಮಹಾಶಯ, ಅಲ್ಲಿನ ಹುಡುಗಿಯರ ಬಳಿ ಪ್ರಕರಣದ ತನಿಖೆಯನ್ನೇ ಶುರು ಮಾಡಿದ್ದಾರೆ. ಮೊದಲೇ ಭೀತಿಗೊಳಗಾಗಿದ್ದ ಹುಡುಗಿಯರ ಬಳಿಗೆ ತೆರಳಿ, ರೇಪ್ ಅಂದ್ರೆ ಏನು ಗೊತ್ತಾ... ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಅವರನ್ನು ಮುಜುಗರಕ್ಕಿಡು ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bihar MLAಬಿಹಾರ ಶಾಸಕRape at residential schooluncomfortable questionsವಸತಿ ಶಾಲೆಯಲ್ಲಿ ಅತ್ಯಾಚಾರಆಕ್ಷೇಪಾರ್ಹ ಪ್ರಶ್ನೆಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


