ಭಾರತ ರತ್ನ ಬಿಸ್ಮಿಲ್ಲಾ ಖಾನ್ ಶೆಹನಾಯ್ ಕಳವು ಪ್ರಕರಣ: ಮೊಮ್ಮಗನ ಬಂಧನ
ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಶೆಹನಾಯ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ವಾರಣಾಸಿಯ ಸ್ಸೆಷಲ್ ಟಾಸ್ಕ್ ಪೋರ್ಸ್ ಸಿಬ್ಬಂದಿ ಮೂವರನ್ನು...

ವಾರಣಾಸಿ: ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಶೆಹನಾಯ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ವಾರಣಾಸಿಯ ಸ್ಸೆಷಲ್ ಟಾಸ್ಕ್ ಪೋರ್ಸ್ ಸಿಬ್ಬಂದಿ ಮೂವರನ್ನು ಬಂಧಿಸಿದ್ದಾರೆ.
ಬಿಸ್ಮಿಲ್ಲಾ ಖಾನ್ ಅವರ ಮೊಮ್ಮಗ ಸೇರಿದಂತೆ ಮೂವರನ್ನು ಬಂಧಿಸಿರುವ ಪೊಲೀಸರು, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಬಿಸ್ಮಿಲ್ಲಾ ಖಾನ್ ಅವರ ಮೊಮ್ಮಗ ನಜ್ರೆ ಹಾಸನ್ ನಗರ ಬಿಟ್ಟು ಓಡಿ ಹೋಗಲು ಯತ್ನಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಶೆಹನಾಯ್ ಕಳ್ಳತನವಾದ ಮೇಲೆ ಆತನ ಮೇಲೆ ಪೊಲೀಸರು ನಿಗಾ ವಹಿಸಿದ್ದರು, ನಾಲ್ಕು ಶೆಹನಾಯ್ ಗಳನ್ನು ಕದ್ದಿದ್ದ ಆತ ಬೆಳ್ಳಿಯ ಶೆಹನಾಯ್ ಗಳನ್ನ ಕದ್ದು ಅವುಗಳಲ್ಲಿ ಒಂದನ್ನು ಕರಗಿಸಿ ಬೆಳ್ಳಿ ಗಟ್ಟಿ ಮಾಡಿಕೊಂಡಿದ್ದ, ಉಳಿದ ಮೂರು ಶೆಹನಾಯ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಸ್ಮಿಲ್ಲಾ ಖಾನ್ ಅವರ ಬೆಲೆ ಕಟ್ಟಲಾಗದ ಶೆಹನಾಯ್ ಅನ್ನು ಕೇವಲ 17 ಸಾವಿರ ರು. ಗೆ ಆತ ಮಾರಾಟ ಮಾಡಿದ್ದಾನೆ.
ತಾನು ಒಬ್ಬ ವ್ಯಕ್ತಿಯಿಂದ ಹಣವನ್ನು ಸಾಲ ಪಡೆದಿದ್ದು, ಅದನ್ನು ವಾಪಸ್ ಮಾಡಲು ತನ್ನ ಬಳಿ ಹಣ ಇಲ್ಲದಿದ್ದರಿಂದ ಶೆಹನಾಯ್ ಕದ್ದಿದ್ದಾಗಿ ಆತ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


