ಪ್ರಧಾನಿ ಕಚೇರಿಯನ್ನು ಆಳಿದ ಸೋನಿಯಾ ಗಾಂಧಿ
ರಾಷ್ಟ್ರೀಯ ಸಲಹಾ ಮಂಡಳಿಯ(ಎನ್ ಎಸಿ) 710 ಪುಟಗಳ ದಾಖಲೆಗಳನ್ನು ಬಹಿರಂಗಗೊಳಿಸಲು ಕೇಂದ್ರ ತೀರ್ಮಾನಿಸಿದೆ. ಅದು...

Published On :
ನವದೆಹಲಿ: ರಾಷ್ಟ್ರೀಯ ಸಲಹಾ ಮಂಡಳಿಯ(ಎನ್ ಎಸಿ) 710 ಪುಟಗಳ ದಾಖಲೆಗಳನ್ನು ಬಹಿರಂಗಗೊಳಿಸಲು ಕೇಂದ್ರ ತೀರ್ಮಾನಿಸಿದೆ. ಅದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿ ರಚಿಸಲಾದ ರಾಷ್ಟ್ರೀಯ ಸಲಹಾ ಮಂಡಳಿ 2004ರಿಂದ 2014ರವರೆಗೆ ಸರ್ಕಾರದ ಆಡಳಿತದ ಮೇಲೆ ಯಾವ ರೀತಿ ಪ್ರಭಾವ ಮತ್ತು ಹಿಡಿತ ಹೊಂದಿತ್ತು ಎಂಬುದನ್ನು ಮತ್ತು ಪ್ರಧಾನಿಯವರಿಗೆ ಯಾವುದೇ ಅಧಿಕಾರವಿಲ್ಲದೆ ಇಡೀ ವ್ಯವಸ್ಥೆ ಮೇಲೆ ಸೋನಿಯಾ ಗಾಂಧಿಯವರ ಹಿಡಿತವಿತ್ತು ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ.
ಸೋನಿಯಾ ಗಾಂಧಿಯವರು ಕಲ್ಲಿದ್ದಲು, ಇಂಧನ, ಹೂಡಿಕೆ ಹಿಂತೆಗೆತ, ರಿಯಲ್ ಎಸ್ಟೇಟ್, ಆಡಳಿತ, ಸಾಮಾಜಿಕ ಮತ್ತು ಕೈಗಾರಿಕಾ ವಲಯಗಳಲ್ಲಿ ಯೋಜನೆಗಳನ್ನು ರೂಪಿಸುವಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ಹೇಳುತ್ತದೆ.
ಮಂಡಳಿಯ ದಾಖಲೆಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದೆ. ಅದರಲ್ಲಿ 2004ರಿಂದ 2014ರವರೆಗೆ ಮನಮೋಹನ್ ಸಿಂಗ್ ಸರ್ಕಾರ ಸಲಹೆಗಳನ್ನು ಪಾಲಿಸುತ್ತಿತ್ತು ಎಂಬುದು ತಿಳಿದುಬರುತ್ತದೆ. ಎನ್ಎಸಿ,ದೆಹಲಿಯ ಮೋತಿಲಾಲ್ ನೆಹರೂ ಅರಮನೆಯಲ್ಲಿರುವ ಆಡಳಿತಗಾರರನ್ನು ಕರೆದು ಸಚಿವರಿಗೆ ಪತ್ರ ಬರೆದು ಅನುಸರಣೆ ವರದಿಗಳನ್ನು ಕೇಳಿದೆ. ಎನ್ಎಸಿ ಸರ್ಕಾರದ ಕಾನೂನು ವ್ಯವಹಾರಗಳಲ್ಲಿ, ಯೋಜನೆ ರೂಪಿಸುವಿಕೆಯಲ್ಲಿ ಸಲಹೆ. ಸೂಚನೆ, ಅಭಿಪ್ರಾಯಗಳನ್ನು ನೀಡುವ ಕೆಲಸ ಮಾಡುತ್ತಿತ್ತು. ಯುಪಿಎ ಸರ್ಕಾರಕ್ಕೆ ಬೇರೆ ಮಾರ್ಗವಿರಲಿಲ್ಲ. ಅದು ಎನ್ಎಸಿ ಶಿಫಾರಸು ಮಾಡಿದವುಗಳನ್ನು ಜಾರಿಗೆ ತರಬೇಕಾಗಿತ್ತು.
2005ರ ಅಕ್ಟೋಬರ್ 29ರಂದು ನಡೆದ ರಾಷ್ಟ್ರೀಯ ಸಲಹಾ ಮಂಡಳಿ ಸಭೆಯ ಆಯ್ದ ಭಾಗ ಹೀಗಿದೆ: '' ಆಯೋಗದ ಹಲವು ಶಿಫಾರಸುಗಳನ್ನು ಜಾರಿಗೆ ತರುವುದು ಸರ್ಕಾರದ ಸಂಸ್ಥೆಗಳ ನೇರ ಜವಾಬ್ದಾರಿ. ಈ ಪ್ರಕ್ರಿಯೆಗಳ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ನಿಕಟವಾಗಿ ಸ್ವತಂತ್ರವಾಗಿ ಮತ್ತು ನಿಖರವಾಗಿ ಕಡ್ಡಾಯವಾಗಿದೆ. ಎಂದು ಸಭೆಯಲ್ಲಿ ಹೇಳಲಾಗಿತ್ತು.
ಸೋನಿಯಾ ಗಾಂಧಿಯವರಿಗೆ ಮನಮೋಹನ್ ಸಿಂಗ್ ಸಾಮರ್ಥ್ಯದ ಮೇಲೆ ನಂಬಿಕೆಯಿರಲಿಲ್ಲವೇ?
ರಾಷ್ಟ್ರೀಯ ಸಲಹಾ ಮಂಡಳಿಯ ದಾಖಲೆ ಸಂಖ್ಯೆ 11012/2/2014-ಎನ್ಎಸಿ(ದಿನಾಂಕ ಫೆಬ್ರವರಿ 25) ರಲ್ಲಿ ಹೇಳಿರುವ ಪ್ರಕಾರ, ಎನ್ಎಸಿ ಹಲವು ಕಾರ್ಯಸೂಚಿಗಳನ್ನು ತೆಗೆದುಕೊಂಡಿದ್ದು ಸರ್ಕಾರದ ವಿವಿಧ ಶಿಫಾರಸುಗಳನ್ನು ಕಳುಹಿಸಿದೆ.
2014 ಫೆಬ್ರವರಿ 21ಕ್ಕೆ ಸೋನಿಯಾ ಗಾಂಧಿಯವರು ಬರೆದ ಪತ್ರದಲ್ಲಿ ಕ್ರೀಡೆಗಳ ಅಭಿವೃದ್ಧಿಗೆ ಸರ್ಕಾರಕ್ಕೆ ರಾಷ್ಟ್ರೀಯ ಸಲಹಾ ಮಂಡಳಿ ಸರ್ಕಾರಕ್ಕೆ ಸೂಚಿಸಿತ್ತು. ಸೋನಿಯಾ ಗಾಂಧಿಯವರ ಒಪ್ಪಿಗೆಯಿಂದ ಸರ್ಕಾರಕ್ಕೆ ಸಹಕಾರಗಳ ಅಭಿವೃದ್ಧಿಗೆ ಕೂಡ ಶಿಫಾರಸು ಮಾಡಲಾಗಿತ್ತು. ದಾಖಲೆ ಸಂಖ್ಯೆ 9 ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗೆ ಸಂಬಂಧಿಸಿದ್ದಾಗಿದ್ದು, ಅದು ಕೂಡ ಸೋನಿಯಾ ಗಾಂಧಿಯವರು ಬರೆದ ಪತ್ರವನ್ನು ಒಳಗೊಂಡಿತ್ತು. ಅವರು 2004, ಸೆಪ್ಟೆಂಬರ್ 6ಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಅದರಲ್ಲಿ ಸರ್ಕಾರ ಬಂಡವಾಳ ಹಿಂದೆಗೆತ ಆಯೋಗ ಮತ್ತು ಹೊಸ ಬೋರ್ಡ್ ಸ್ಥಾಪಿಸಲು ಸರ್ಕಾರ ಯೋಜಿಸುತ್ತಿರುವುದರ ಬಗ್ಗೆ ಮಾಹಿತಿ ನೀಡಿದ್ದರು.
ಸೋನಿಯಾ ಗಾಂಧಿಯವರ ಶಿಫಾರಸು, ಸಲಹೆಗಳಂತೆ ಅಂದಿನ ಪ್ರಧಾನ ಮಂತ್ರಿ ನಡೆದುಕೊಳ್ಳುತ್ತಿದ್ದರು ಎಂಬುದನ್ನು ದಾಖಲೆಗಳು ಹೇಳುತ್ತವೆ. 2006, ಫೆಬ್ರವರಿ 27ರಂದು, ಉತ್ಪಾದಕ ವಲಯಗಳಿಗೆ ಕೇಂದ್ರ ಯಾಂತ್ರಿಕವನ್ನು ಸ್ಥಾಪಿಸುವಂತೆ ಸೋನಿಯಾ ಗಾಂಧಿಯವರು ಮನಮೋಹನ್ ಸಿಂಗ್ ಅವರನ್ನು ಕೇಳುತ್ತಾರೆ. ಸರ್ಕಾರದ ಮಟ್ಟದಲ್ಲಿ ಈ ವಿಷಯವನ್ನು ವಿಳಂಬ ಮಾಡದೆ ತುರ್ತು ತೆಗೆದುಕೊಳ್ಳಬೇಕಾಗಿದೆ ಎಂದು ಪತ್ರ ಸಂಖ್ಯೆ 1728/ಸಿಪಿ/ಎನ್ಎಸಿ/ 06ನಲ್ಲಿ ನಮೂದಿಸಲಾಗಿದೆ. ಅದಕ್ಕೆ ಉತ್ತರವಾಗಿ 2006, ಅಕ್ಟೋಬರ್ 27ರಂದು ಸರ್ಕಾರ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು, ನೀವು ನೀಡಿರುವ ಸಲಹೆಯಂತೆ ಉತ್ಪಾದಕ ವಲಯದಲ್ಲಿನ ಜಾರಿಗೆ ಉನ್ನತ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sonia Gandhiಸೋನಿಯಾ ಗಾಂಧಿUPA governmentಯುಪಿಎ ಸರ್ಕಾರManmohan Singhಮನಮೋಹನ್ ಸಿಂಗ್National Advisory Councilರಾಷ್ಟ್ರೀಯ ಸಲಹಾ ಮಂಡಳಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


