ದೇಶ

ತಂದೆಯ ಪುಣ್ಯ ಸ್ಮರಣೆ ದಿನದಂದೇ ಪಿಡಿಪಿ ಸೇರಿದ ಮುಫ್ತಿ ಮೊಹಮ್ಮದ್ ಪುತ್ರ ತಸಾದುಕ್

ಜಮ್ಮು-ಕಾಶ್ಮೀರ ಮಾಜಿ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುಣ್ಯ ಸ್ಮರಣೆಯ ದಿನದಂದೇ ಅವರ ಪುತ್ರ ತಸಾದುಕ್ ಸಯೀದ್ ಪಿಡಿಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ತಂದೆಯ ಪುಣ್ಯ ಸ್ಮರಣೆ ದಿನದಂದೇ ಪಿಡಿಪಿ ಸೇರಿದ ಮುಫ್ತಿ ಮೊಹಮ್ಮದ್ ಪುತ್ರ ತಸಾದುಕ್
ಮೆಹಬೂಬಾ ಮುಫ್ತಿ ಅವರೊಂದಿಗೆ ತಸಾದುಕ್ ಮುಫ್ತಿ
Published On :
ಶ್ರೀನಗರ: ಜಮ್ಮು-ಕಾಶ್ಮೀರ ಮಾಜಿ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುಣ್ಯ ಸ್ಮರಣೆಯ ದಿನದಂದೇ ಅವರ ಪುತ್ರ ತಸಾದುಕ್ ಸಯೀದ್ ಪಿಡಿಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 
ತಂದೆಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲೇ ಪಿಡಿಪಿಗೆ ಸೇರ್ಪಡೆಯಾಗಿದ್ದು, ಪಿಡಿಪಿ ಪಕ್ಷದೆಡೆಗಿನ ಕಾರ್ಯಕರ್ತರ ಅಭಿಮಾನಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ವರೆಗೂ ರಾಜಕೀಯದಿಂದ ದೂರವಿದ್ದೆ, ಈಗ ಪಿಡಿಪಿಗೆ ಸೇರ್ಪಡೆಯಾಗಿದ್ದು, ಅವಿಸ್ಮರಣೀಯ ದಿನವಾಗಿದೆ ಎಂದಿದ್ದಾರೆ. 
ಕಾಶ್ಮೀರದ ರಾಜಕೀಯವನ್ನು ಸರಿಪಡಿಸುವುದು ನನ್ನ ಗುರಿಯಾಗಿದೆ ಎಂದು ತಸಾದುಕ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ತಸಾದುಕ್ ಸಯೀದ್ ಮುಫ್ತಿ ಮೊಹಮ್ಮದ್ ಇದ್ದಂತೆ, ತಸಾದುಕ್ ಗೆ ಕಾಶ್ಮೀರಕ್ಕಾಗಿ ಒಳಿತನ್ನು ಮಾಡುವ ತುಡಿತವಿದೆ ಎಂದು ಹೇಳಿದ್ದಾರೆ. ಅಮೆರಿಕನ್ ಫಿಲ್ಮ್ ಗ್ರಾಜುಯೇಟ್ ಆಗಿರುವ ತಸಾದುಕ್ ಬಾಲಿವುಡ್ ನಲ್ಲಿ ತಸಾದುಕ್ ಹುಸೇನ್ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.