ಓಂ ಪುರಿ ನಿಧನಕ್ಕೆ ಕಂಬನಿ ಮಿಡಿದ ಬಾಲಿವುಡ್; ಟ್ವಿಟರ್ ನಲ್ಲಿ ನಟರ ಸಂತಾಪ
ಶುಕ್ರವಾರ ನಿಧನರಾದ ಖ್ಯಾತ ಬಾಲಿವುಡ್ ನಟ ಓಂ ಪುರಿ ಅವರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದ್ದು, ಟ್ವಿಟರ್ ನಲ್ಲಿ ನಮ್ಮನ್ನಗಲಿದ ನಟನಿಗೆ ಸಂತಾಪ ಸೂಚಿಸಲಾಗಿದೆ.

ಮುಂಬೈ: ಶುಕ್ರವಾರ ನಿಧನರಾದ ಖ್ಯಾತ ಬಾಲಿವುಡ್ ನಟ ಓಂ ಪುರಿ ಅವರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದ್ದು, ಟ್ವಿಟರ್ ನಲ್ಲಿ ನಮ್ಮನ್ನಗಲಿದ ನಟನಿಗೆ ಸಂತಾಪ ಸೂಚಿಸಲಾಗಿದೆ.
ನಟ ಓಂಪುರಿ ಅವರ ನಿಧನದಿಂದಾಗಿ ಮನಸ್ಸು ಭಾರವಾಗಿದ್ದು, ಅವರ ನಟನೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಅಂತೆಯೇ ನಟ ಅನುಪಮ್ ಖೇರ್ ಅವರು ಕೂಡ ಟ್ವೀಟ್ ಮಾಡಿದ್ದು, ಬೆಡ್ ಮೇಲೆ ಚಲನೆ ಇಲ್ಲದೇ ಮಲಗಿರುವ ಅವರನ್ನು ನೋಡಿ ನಿಜಕ್ಕೂ ನನಗೆ ನಂಬಲಾಗುತ್ತಿಲ್ಲ. ಓಂಪುರಿ ಇನ್ನಿಲ್ಲ ಎಂದು ಹೇಳಲು ದುಃಖವಾಗತ್ತಿದೆ ಎಂದು ಹೇಳಿದ್ದಾರೆ. ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ಟ್ವೀಟ್ ಮಾಡಿದ್ದು, ದಶಕದ ಅತ್ಯುತ್ತಮ ನಟ ಓಂಪುರಿ ಇನ್ನಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


