ವೃದ್ಧೆಯ ಜನ್ಮದಿನಕ್ಕೆ ಮುಂಬೈನ ಮಾತುಂಗ ಪೊಲೀಸರಿಂದ ಅನಿರೀಕ್ಷಿತ ಉಡುಗೊರೆ!
ಸದಾ ಅಪರಾಧಿಗಳ ಜಾಡು ಹಿಡಿಯುವ ಕೆಲಸದಲ್ಲಿ ನಿರತರಾಗಿರುವ ಪೊಲೀಸರು ಮುಂಬೈ ನಲ್ಲಿ ಹಿರಿಯ ನಾಗರಿಕರಿಗಾಗಿಯೇ ವಿಶೇಷ ಕಾಳಜಿ ವಹಿಸುತ್ತಿದ್ದಾರೆ.

Published On :
ಮುಂಬೈ: ಸದಾ ಅಪರಾಧಿಗಳ ಜಾಡು ಹಿಡಿಯುವ ಕೆಲಸದಲ್ಲಿ ನಿರತರಾಗಿರುವ ಪೊಲೀಸರು ಮುಂಬೈ ನಲ್ಲಿ ಹಿರಿಯ ನಾಗರಿಕರಿಗಾಗಿಯೇ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಪ್ರಮುಖವಾಗಿ ಒಬ್ಬಂಟಿಯಾಗಿರುವ ಹಿರಿಯ ನಾಗರಿಕರ ಬಗ್ಗೆ ಮುಂಬೈ ನ ಮಾತುಂಗ ಪೊಲೀಸ್ ಇಲಾಖೆ ಕಾಳಜಿ ವಹಿಸುತ್ತಿದ್ದು, ಕಳೆದ 25 ವರ್ಷಗಳಿಂದ ಮುಂಬೈ ನ ಫ್ಲಾಟ್ ಒಂದರಲ್ಲಿ ವಾಸವಿರುವ ಲಲಿತಾ ಸುಬ್ರಹ್ಮಣ್ಯಂ ಅವರಿಗೆ ಜ.2 ರಂದು 83 ನೇ ಜನ್ಮದಿನದ ಅಂಗವಾಗಿ ಅನಿರೀಕ್ಷಿತ ಉಡುಗೊರೆ ನೀಡಿದೆ.
ಲಲಿತಾ ಸುಬ್ರಹ್ಮಣ್ಯಂ ಅವರ ಮೂವರು ಮಕ್ಕಳ ಪೈಕಿ ಇಬ್ಬರು ಅಮೆರಿಕಾದಲ್ಲಿದ್ದರೆ ಇನ್ನೊಬ್ಬರು ಬೆಂಗಳೂರಿನಲ್ಲಿದ್ದಾರೆ. ಜನ್ಮದಿನದ ಅಂಗವಾಗಿ ಮಕ್ಕಳು ಮುಂಬೈಗೆ ಭೇಟಿ ನೀಡುವುದು ಸಾಧ್ಯವಾಗದ ಕಾರಣ ಮುಂಬೈ ನ ವಡಾಲದಲ್ಲಿರುವ ವೃದ್ಧೆಯ ಮನೆಗೆ ಸ್ವತಃ ಮಾತುಂಗ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಅನಿರೀಕ್ಷಿತ ಉಡುಗೊರೆ ನೀಡಿದ್ದಾರೆ.
ತಾವು ಬಳಸುವ ಔಷಧಗಳನ್ನು, ಖರೀದಿಸಿ ಅಗಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಅವರ ಬಗ್ಗೆ ನಿಗಾ ಇಟ್ಟಿರುವ ಪೊಲೀಸ್ ಪೇದೆಯ ಸಮ್ಮುಖದಲ್ಲಿ ಲಲಿತಾ ಸುಬ್ರಹ್ಮಣ್ಯಂ ಪೊಲೀಸ್ ಸಿಬ್ಬಂದಿಗಳು ತಂದಿದ್ದ ಕೇಕ್ ನ್ನು ಕತ್ತರಿಸಿ ಸಂಭ್ರಮಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಅನಿರೀಕ್ಷಿತ ಉಡುಗೊರೆಯಿಂದ ಸಂತೋಷಗೊಂಡ ಲಲಿತಾ ಸುಬ್ರಹ್ಮಣ್ಯಂ ಪೊಲೀಸ್ ಅಧಿಕಾರಿಗಳನ್ನು ಹರಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಎಂ.ಕಕಡ್ ಲಲಿತಾ ಸುಬ್ರಹ್ಮಣ್ಯಂ ಅವರು ನಮ್ಮ ತಾಯಿ ಇದ್ದಂತೆ, ಹುಟ್ಟುಹಬ್ಬದ ಆಚರಣೆಯಿಂದ ಅವರು ಅತ್ಯಂತ ಸಂತೋಷಪಟ್ಟರು ಎಂದು ಹೇಳಿದ್ದಾರೆ.
ಹಿರಿಯ ನಾಗರಿಕರಿಗಾಗಿಯೇ ವಿಶೇಷ ಹೆಲ್ಪ್ ಲೈನ್:
ಮುಂಬೈ ಪೊಲೀಸರು ಒಬ್ಬಂಟಿಯಾಗಿರುವ ಹಿರಿಯ ನಾಗರಿಕರಿಗಾಗಿಯೇ ವಿಶೇಷ ಹೆಲ್ಪ್ ಲೈನ್ ಹೊಂದಿದ್ದು (1090) ಪೊಲೀಸ್ ಸಿಬ್ಬಂದಿಗಳು ಹಿರಿಯ ನಾಗರಿಕರಿಗೆ ಸಹಾಯ ಮಾಡಲು ಸದಾ ಸನ್ನದ್ಧರಾಗಿರುತ್ತಾರೆ. ಮಹಾರಾಷ್ಟ್ರದ ಮಾಜಿ ಗೃಹ ಸಚಿವ ದಿ.ಆರ್ ಆರ್ ಪಾಟೀಲ್ ಅವರು ಹಿರಿಯ ನಾಗರಿಕರ ಬಗ್ಗೆ ಕಾಳಜಿ ವಹಿಸುವ ಯೋಜನೆಯನ್ನು ಅವರ ಅವಧಿಯಲ್ಲಿ ಜಾರಿಗೆ ತಂದಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


