ದೇಶ

ಮುಸ್ಲಿಮರಿಗೆ ವಿಶೇಷ ಬಜೆಟ್ ಹೇಳಿಕೆ: ಓವೈಸಿ ವಿರುದ್ಧ ದೂರು ದಾಖಲಿಸಿದ ಬಿಜೆಪಿ

ಜನತೆ ಎಐಎಂಐಎಂಗೆ ಬೆಂಬಲ ವ್ಯಕ್ತಪಡಿಸಿದ್ದೇ ಆದರೆ, ಮುಸ್ಲಿಮರಿಗೆ ವಿಶೇಷ ಬಜೆಟ್ ಮಾಡಲು ಪ್ರಯತ್ನಿಸುತ್ತೇನೆಂದು ಹೇಳಿದ್ದ ಸಂಸದ ಅನಾದುದ್ದೀನ್ ಓವೈಸಿ ವಿರುದ್ಧ ಚುನಾವಣಾ ಆಯೋಗದ...

ಮುಸ್ಲಿಮರಿಗೆ ವಿಶೇಷ ಬಜೆಟ್ ಹೇಳಿಕೆ: ಓವೈಸಿ ವಿರುದ್ಧ ದೂರು ದಾಖಲಿಸಿದ ಬಿಜೆಪಿ
ಸಂಸದ ಅನಾದುದ್ದೀನ್ ಓವೈಸಿ
Published On :

ಮುಂಬೈ: ಜನತೆ ಎಐಎಂಐಎಂಗೆ ಬೆಂಬಲ ವ್ಯಕ್ತಪಡಿಸಿದ್ದೇ ಆದರೆ, ಮುಸ್ಲಿಮರಿಗೆ ವಿಶೇಷ ಬಜೆಟ್ ಮಾಡಲು ಪ್ರಯತ್ನಿಸುತ್ತೇನೆಂದು ಹೇಳಿದ್ದ ಸಂಸದ ಅನಾದುದ್ದೀನ್ ಓವೈಸಿ ವಿರುದ್ಧ ಚುನಾವಣಾ ಆಯೋಗದ ಬಳಿ ಬಿಜೆಪಿ ದೂರು ದಾಖಲಿಸಿದೆ.

ಓವೈಸಿಯವರ ಹೇಳಿಕೆ ಕೋಮು ಗಲಭೆಯನ್ನು ಸೃಷ್ಟಿಸುವಂತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ನಿರ್ಮಾಣ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಓವೈಸಿಯವರ ಭಾಷಣ ಸಂಪೂರ್ಣವಾಗಿ ಕಾನೂನಿಗೆ ವಿರುದ್ಧವಾಗಿದೆ. ಅಲ್ಲದೆ, ಸುಪ್ರೀಂಕೋರ್ಟ್ ನ ಆದೇಶಕ್ಕೆ ವಿರುದ್ಧವಾಗಿದೆ. ಮುಸ್ಲಿಂ ಸಮುದಾಯಕ್ಕೂ ಈ ಹೇಳಿಕೆ ಅಪಾಯಕಾರಿಯಾಗಿದೆ. ಹೀಗಾಗಿ ಓವೈಸಿ ವಿರುದ್ದ ಕ್ರಮ ಕೈಗೊಳ್ಳಬೇಕಿದೆ ಎಂದು ಮುಂಬೈ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಮಂದ್ ಘೈಸಾಸ್ ಅವರು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮುಂಬೈನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ್ದ ಓವೈಸಿಯವರು, ಮುಸ್ಲಿಮರು ಎಐಎಂಐಎಂಗೆ ಬೆಂಬಲ ನೀಡಿದ್ದೇ ಆದರೆ, ರು.6,770 ಕೋಟಿ ವಿಶೇಷ ಬಜೆಟ್ ನ್ನು ಮುಸ್ಲಿಮರಿಗೆ ಘೋಷಣೆ ಮಾಡಲು ಪ್ರಯತ್ನಿಸುತ್ತೇನೆಂದು ಹೇಳಿದ್ದರು. ಅಲ್ಲದೆ, ಛತ್ರಪತಿ ಶಿವಾಜಿಯವರ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮುಸ್ಲಿಮರ ಅಭಿವೃದ್ಧಿಗೆ ಹಣ ನೀಡುವಲ್ಲಿ ಆಡಳಿತಾರೂಢ ಬಿಎಂಸಿ ಪಕ್ಷ ವಿಫಲವಾಗಿದೆ.

ಬಿಎಂಸಿ ಅಧಿಕಾರ ನಡೆಸುತ್ತಿರುವ ವಾರ್ಡ್ ಗಳಲ್ಲಿ ಶೇ.21 ರಷ್ಟು ಮುಸ್ಲಿಮರಿದ್ದಾರೆ. ಬಿಎಂಸಿ ಬಜೆಟ್ ರು.36,000 ಕೋಟಿಯಿದ್ದರೆ, ರು.7,700 ಕೋಟಿ ಹಣವನ್ನು ಮುಸ್ಲಿಮರ ಅಭಿವೃದ್ಧಿಗಾಗಿ ಮೀಸಲಿಡಬೇಕು. ಆದರೆ, ಅದನ್ನು ಅವರು ಮಾಡಿಲ್ಲ. ನಮ್ಮಲ್ಲಿ 30-40 ಕಾರ್ಪೊರೇಟರ್ ಗಳೇನಾದರೂ ಚುನಾವಣೆಯಲ್ಲಿ ಗೆದ್ದಿದ್ದೇ ಆದರೆ, ಮುಸ್ಲಿಮರಿಗೆ ಆಗುತ್ತಿರುವ ಅನ್ಯಾಯ ಮತ್ತೆ ಮರುಕಳಿಸಲು ಬಿಡುವುದಿಲ್ಲ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.