ಭಾರತದ ಹೈ-ಟೆಕ್ ಪ್ರತಿಭೆಯನ್ನು ನಿರ್ಲಕ್ಷಿಸಿ ಚೀನಾ ತಪ್ಪು ಮಾಡಿದೆ: ಗ್ಲೋಬಲ್ ಟೈಮ್ಸ್
ಭಾರತದ ಹೈ-ಟೆಕ್ ಪ್ರತಿಭೆಗಳನ್ನು ನಿರ್ಲಕ್ಷಿಸಿ ಚೀನಾ ತಪ್ಪು ಮಾಡಿದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.

Published On :
ಬೀಜಿಂಗ್: ಭಾರತದ ಹೈ-ಟೆಕ್ ಪ್ರತಿಭೆಗಳನ್ನು ನಿರ್ಲಕ್ಷಿಸಿ ಚೀನಾ ತಪ್ಪು ಮಾಡಿದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.
ಚೀನಾ ತನ್ನ ಆವಿಷ್ಕಾರದ ಸಾಮರ್ಥ್ಯವನ್ನು ಉಳಿಸಿಕೊಳ್ಳಬೇಕಾದರೆ ಭಾರತದ ಹೈ-ಟೆಕ್ ಪ್ರತಿಭೆಗಳನ್ನು ತನ್ನತ್ತ ಸೆಳೆಯಬೇಕು. ಈ ವರೆಗೂ ಚೀನಾ ಭಾರತದ ಹೈ-ಟೆಕ್ ಪ್ರತಿಭೆಯನ್ನು ಆಕರ್ಷಿಸುವ ಬದಲು ಅಮೆರಿಕಾ ಹಾಗೂ ಯೂರೋಪ್ ನ ಪ್ರತಿಭೆಗಳನ್ನು ಸೆಳೆಯಲು ಯತ್ನಿಸಿದೆ. ಇತ್ತೀಚಿನ ದಿನಗಳಲ್ಲಿ ಹೊರ ದೇಶದ ಪ್ರತಿಭೆಗಳು ಚೀನಾದ ಬದಲು ಭಾರತದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ, ಆದ್ದರಿಂದ ಚೀನಾ ತನ್ನ ಆವಿಷ್ಕಾರ ಸಾಮರ್ಥ್ಯವನ್ನು ಉಳಿಸಿಕೊಳ್ಳಬೇಕಾದರೆ ಭಾರತದ ಪ್ರತಿಭೆಗಳನ್ನು ಸೆಳೆಯಬೇಕಿದೆ ಎಂದು ಗ್ಲೋಬಲ್ ಟೈಮ್ಸ್ ಪತ್ರಿಕೆ ಹೇಳಿದೆ.
ಅಮೆರಿಕ ಮೂಲದ ಸಾಫ್ಟ್ ವೇರ್ ಸಂಸ್ಥೆ ಸಿಎ ಟೆಕ್ನಾಲಜೀಸ್ ಚೀನಾದಲ್ಲಿ 300 ಜನರ ಸಂಶೋಧನಾ ಹಾಗೂ ಅಭಿವೃದ್ಧಿ ತಂಡವನ್ನು ನಿಯೋಜಿಸಿದೆ. ಆದರೆ ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಸುಮಾರು 2,000 ವೈಜ್ಞಾನಿಕ ಮತ್ತು ತಾಂತ್ರಿಕ ವೃತ್ತಿಪರರನ್ನು ನಿಯೋಜಿಸಿದ್ದು, ಭಾರತ ಇತ್ತೀಚಿನ ದಿನಗಳಲ್ಲಿ ಯುವಕರನ್ನು ಹೆಚ್ಚು ಆಕರ್ಷಿಸುತ್ತಿದೆ ಹೈ-ಟೆಕ್ ಹೂಡಿಕೆದಾರರನ್ನು ಸೆಳೆಯುವುದನ್ನು ಕಡಿಮೆ ಮಾಡಿಕೊಳ್ಳುವಂತಹ ಅಪಾಯವನ್ನು ಚೀನಾ ತಂದುಕೊಳ್ಳಬಾರದು ಚೀನಾ ತನ್ನ ಆವಿಷ್ಕಾರದ ಸಾಮರ್ಥ್ಯವನ್ನು ಉಳಿಸಿಕೊಳ್ಳಬೇಕಾದರೆ ಭಾರತದ ಹೈ-ಟೆಕ್ ಪ್ರತಿಭೆಗಳನ್ನು ತನ್ನತ್ತ ಸೆಳೆಯಬೇಕು ಎಂದು ಗ್ಲೋಬಲ್ ಟೈಮ್ಸ್ ಅಭಿಪ್ರಾಯಪಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


