ಎಸ್ ಬಿಐ ಎಟಿಎಂಗೆ 2000 ರು.ನಕಲಿ ನೋಟು ತುಂಬಿದ್ದ ವ್ಯಕ್ತಿಯ ಗುರುತು ಪತ್ತೆ!
ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಎಸ್ ಬಿಐ ಎಟಿಎಂ ನಲ್ಲಿ 2000 ರು. ನಕಲಿ ನೋಟು ಪತ್ತೆ ಪ್ರಕರಣ ಮಹತ್ವದ ತಿರುವು ಪಡೆದಿದ್ದು, ಎಟಿಎಂಗೆ ನಕಲಿ ನೋಟು ತುಂಬಿದ್ದ ವ್ಯಕ್ತಿಯನ್ನು ಪೊಲೀಸರು ಗುರುತಿಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಹೇಳಿದ್ದಾರೆ.

ದೆಹಲಿ: ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಎಸ್ ಬಿಐ ಎಟಿಎಂ ನಲ್ಲಿ 2000 ರು. ನಕಲಿ ನೋಟು ಪತ್ತೆ ಪ್ರಕರಣ ಮಹತ್ವದ ತಿರುವು ಪಡೆದಿದ್ದು, ಎಟಿಎಂಗೆ ನಕಲಿ ನೋಟು ತುಂಬಿದ್ದ ವ್ಯಕ್ತಿಯನ್ನು ಪೊಲೀಸರು ಗುರುತಿಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಹೇಳಿದ್ದಾರೆ.
ಆರ್ ಬಿಐ ನೀಡಿದ್ದ ಹಣಕ್ಕೆ ಬದಲಾಗಿ ನಕಲಿ ನೋಟುಗಳನ್ನು ಎಟಿಎಂಗೆ ಹಾಕಿರುವ ವ್ಯಕ್ತಿಯನ್ನು ದೆಹಲಿ ಪೊಲೀಸರು ಗುರುತಿಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವ್ಯಕ್ತಿಯೇ ಅಸಲಿ ನೋಟುಗಳಿಗೆ ಬದಲಾಗಿ ನಕಲಿ ನೋಟುಗಳನ್ನು ತುಂಬಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದೇ ಕಾರಣಕ್ಕೆ ಕಳೆದ ಫೆಬ್ರವರಿ 6ರಂದು ನಕಲಿ ನೋಟುಗಳು ಎಟಿಎಂ ನಿಂದ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?
ಫೆಬ್ರವರಿ 6 ರಂದು ರೋಹಿತ್ ಎಂಬುವವರು ದೆಹಲಿಯ ಛತ್ತರ್ಪುರ್ನಲ್ಲಿರುವ ಎಸ್ಬಿಐ ಬ್ಯಾಂಕಿನ ಎಟಿಎಂನಲ್ಲಿ 8000 ರೂ. ಹಣ ಡ್ರಾ ಮಾಡಿದ್ದರು. ಆದರೆ ಎಟಿಎಂನಿಂದ ಅವರಿಗೆ ದೊರೆತ ನೋಟುಗಳೆಲ್ಲವೂ ನಕಲಿಯಾಗಿದ್ದವು. ಮಕ್ಕಳು ಆಟವಾಡಲು ಬಳಸುವ ‘ಚಿಲನ್ ಬ್ಯಾಂಕ್ ಆಫ್ ಇಂಡಿಯಾ’ ಎಂಬ ಮುದ್ರೆಯಿದ್ದ ಹೊಸ 2000 ರೂ. ನೋಟುಗಳನ್ನೇ ಹೋಲುವ ನೋಟುಗಳನ್ನು ಎಟಿಎಂ ಅವರಿಗೆ ನೀಡಿತ್ತು. ಈ ಸಂಬಂಧ ರೋಹಿತ್ ಬ್ಯಾಂಕಿನ ಕಸ್ಟಮರ್ ಕೇರ್ಗೆ ಕರೆ ಮಾಡಿ ದೂರು ನೀಡಿದ್ದರು. ನಂತರ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದರು.
ಚೆಕ್ ಮಾಡಲು ಬಂದ ಪೊಲೀಸ್ ಅಧಿಕಾರಿಗೇ 2000 ರು.ನಷ್ಟ
ಇನ್ನು ರೋಹಿತ್ ನೀಡಿದ ದೂರಿನ ಅನ್ವಯ ಎಟಿಎಂ ಅನ್ನು ಪರೀಕ್ಷೆಗೆ ಒಳಪಡಿಸಲು ಬಂದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕಾರ್ಡ್ ನಿಂದ 2 ಸಾವಿರ ರುಯ ಡ್ರಾಮಾಡಿದ್ದಾರೆ. ಆಗ ಅವರಿಗೂ ನಕಲಿ ನೋಟು ಬಂದಿದ್ದು,. ಖಾತೆಯಿಂದ 2 ಸಾವಿರು ವಿತ್ ಡ್ರಾ ಆಗಿರುವ ಕುರಿತು ಮಾಹಿತಿ ಬಂದಿದೆ. ಅದರಂತೆ ಪರೀಕ್ಷೆಗೆ ಬಂದ ಪೊಲೀಸ್ ಅಧಿಕಾರಿ ಕೂಡ 2000 ರು. ಕಳೆದುಕೊಳ್ಳುವಂತಾಗಿತ್ತು. ಇನ್ನು ಈ ಬಗ್ಗೆ ಕೂಡಲೇ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿಚಿ ನೀಡಿದ ಪೊಲೀಸರು, ನೋಟಿನ ಕಂತೆಯಲ್ಲಿ ಕೆಲವು ನೋಟುಗಳು ಮಾತ್ರ ನಕಲಿ ಇದ್ದವು, ಉಳಿದ ನೋಟುಗಳು ಅಸಲಿಯಾಗಿದ್ದವು. ತಕ್ಷಣ ಎಟಿಎಂನಲ್ಲಿದ್ದ ಎಲ್ಲಾ ನೋಟುಗಳನ್ನು ಹಿಂಪಡೆಯುವಂತೆ ನಾವು ಬ್ಯಾಂಕಿಗೆ ಸೂಚಿಸಿದೆವು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 489-ಬಿ, 489-ಸಿ ಮತ್ತು 420 ಕಾಯ್ದೆಯಡಿಯಲ್ಲಿ ದೂರುದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


