1996ರ ನಕಲಿ ಎನ್‌ಕೌಂಟರ್: 4 ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಸಿಬಿಐ ಕೋರ್ಟ್
1996ರ ಗಾಜಿಯಾಬಾದ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸರಿಗೆ ಸಿಬಿಐ ಕೋರ್ಟ್ ಜೀವವಾಧಿ ಶಿಕ್ಷೆ ವಿಧಿಸಿದೆ...

Published On :
ಭೋಜ್‌ಪುರ(ಉತ್ತರಪ್ರದೇಶ): 1996ರ ಗಾಜಿಯಾಬಾದ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸರಿಗೆ ಸಿಬಿಐ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
1996ರ ನವೆಂಬರ್ 8ರಂದು ಹಾಡು ಹಗಲೇ ಜಲಾಲುದ್ದೀನ್, ಜಸ್ಬೀರ್, ಅಶೋಕ್ ಮತ್ತು ಪ್ರವೇಶ್ ಎಂಬ ಯುವಕರನ್ನು ಕ್ರಿಮಿನಲ್ಸ್ ಗಳು ಎಂದು ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ಆದರೆ ಇದು ನಕಲಿ ಎನ್‌ಕೌಂಟರ್ ಎಂದು ಸಿಬಿಐ ಕೋರ್ಟ್ ಹೇಳಿದ್ದು ಭೋಜ್ ಪುರ ಠಾಣೆಯ ಮುಖ್ಯಸ್ಥ ಲಾಲ್ ಸಿಂಗ್, ಸಬ್ ಇನ್ ಸ್ಪೆಕ್ಟರ್ ಜೋಗಿಂದರ್ ಸಿಂಗ್, ಪೇದೆಗಳಾದ ಸೂರ್ಯ ಭಾನ್ ಹಾಗೂ ಸುಭಾಶ್ ಚಂದ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ನಾಲ್ವರು ಪೊಲೀಸರು ನಕಲಿ ಎನ್‌ಕೌಂಟರ್, ಸುಳ್ಳು ಪುರಾವೆ ಒದಗಿಸಿದ್ದು ಹಾಗೂ ಸಾಕ್ಷ್ಯ ನಾಶ ಮಾಡಿದ ಆರೋಪ ಸಾಬೀತಾಗಿದ್ದು ಅವರು ಅಪರಾಧಿಗಳು ಎಂದು ಕೋರ್ಟ್ ಹೇಳಿದ್ದು ತೀರ್ಪನ್ನು ಇಂದಿಗೆ ನಿಗದಿಪಡಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Policeಪೊಲೀಸ್CBIFake EncounterಸಿಬಿಐUttar pradeshನಕಲಿ ಎನ್ಕೌಂಟರ್ಉತ್ತರಪ್ರದೇಶಜೀವಾವಧಿ ಶಿಕ್ಷೆLife imprisonment
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


