ಝಾಕೀರ್ ನಾಯಕ್ ಗೆ ದಾವೂದ್ ನಂಟು: ಎನ್ ಜಿ ಒಗೆ ಭೂಗತ ಪಾತಕಿಯ ಹವಾಲಾ ಹಣ
ಭೂಗತ ಪಾತಕಿ ದಾವೂದ್ ಇಬ್ರಾಹಿಂ ತನ್ನ ಹವಾಲಾ ಹಣವನ್ನು ಝಾಕೀರ್ ನಾಯಕ್ ಎನ್ ಜಿಒ ಇಸ್ಲಾಮಿಕ್ ರಿಸೆರ್ಚ್ ಫೌಂಡೇಶನ್ ಗೆ ಬಳಕೆ ಮಾಡುತ್ತಿದ್ದಾನೆ ಎಂಬ ...

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ತನ್ನ ಹವಾಲಾ ಹಣವನ್ನು ಝಾಕೀರ್ ನಾಯಕ್ ಎನ್ ಜಿಒ ಇಸ್ಲಾಮಿಕ್ ರಿಸೆರ್ಚ್ ಫೌಂಡೇಶನ್ ಗೆ ಬಳಕೆ ಮಾಡುತ್ತಿದ್ದಾನೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಝಾಕೀರ್ ನಾಯಕ್ ನ ಎನ್ ಜಿಓ ಗೆ ದಾವೂದ್ ಇಬ್ರಾಹಿಂ ಹಣಕಾಸು ಸಹಾಯ ನೀಡುತ್ತಿದ್ದಾನೆ ಎಂದು ಝಾಕೀರ್ ನ ಮುಖ್ಯ ಹಣಕಾಸು ಅಧಿಕಾರಿ ಆಮೀರ್ ಗಜ್ದಾರ್ ಹೇಳಿದ್ದಾರೆ.
ಮಧ್ಯವರ್ತಿ ಸುಲ್ತಾನ್ ಅಹ್ಮದ್ ಎಂಬಾತನ ಮೂಲಕ ಹವಾಲಾ ಹಣವನ್ನು ಝಾಕೀರ್ ನಾಯಕ್ ನ ಇಸ್ಲಾಮಿಕ್ ರಿಸೇರ್ಚ್ ಸೆಂಟರ್ ಗೆ ನೀಡಲಾಗುತ್ತಿದೆ ಆಮೀರ್ ಗಜ್ದಾರ್ ತಿಳಿಸಿದ್ದಾನೆ.
ಫೆಬ್ರವರಿ 18 ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು 48 ವರ್ಷದ ಗಾಜ್ದಾರ್ ನನ್ನು ಬಂಧಿಸಿದ್ದರು. ಸುಮಾರು 200 ಕೋಟಿ ರುಗಳಷ್ಟು ಹಣದ ವಹಿವಾಟು ನಡೆದಿದೆ ಎಂದು ಇಡಿ ಅಧಿಕಾರಿಗಳು ಶಂಕಿಸಿದ್ದಾರೆ. ಈ ಮಾಹಿತಿ ಝಾಕೀರ್ ನಾಯಕ್ ಗೆ ಪಾಕಿಸ್ತಾನ ಮತ್ತು ದಾವೂದ್ ಇಬ್ರಾಹಿಂ ಜೊತೆ ಸಂಪರ್ಕ ಇದೆ ಎಂಬುದನ್ನು ಸ್ಪಷ್ಟ ಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


