ಕಾಶ್ಮೀರ ಕಣಿವೆಯಲ್ಲಿ 50 ದಿನದಲ್ಲಿ 22 ಉಗ್ರರ ಹತ್ಯೆಗೈದ ಸೇನೆ!
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಐವತ್ತು ದಿನದಲ್ಲಿ ಬರೊಬ್ಬರಿ 22 ಮಂದಿ ಉಗ್ರಗಾಮಿಗಳನ್ನು ಭಾರತೀಯ ಸೇನೆಯ ಯೋಧರು ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಐವತ್ತು ದಿನದಲ್ಲಿ ಬರೊಬ್ಬರಿ 22 ಮಂದಿ ಉಗ್ರಗಾಮಿಗಳನ್ನು ಭಾರತೀಯ ಸೇನೆಯ ಯೋಧರು ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.
ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಉಂಟಾಗಿದ್ದ ಗಲಭೆ ಮತ್ತು ರಾಜ್ಯದಲ್ಲಿ ನಡೆ ವಿವಿಧ ಉಗ್ರ ದಾಳಿ ಸಂದರ್ಭದಲ್ಲಿ 2017 ರ ಮೊದಲ 2 ತಿಂಗಳೊಳಗೇ 22 ಮಂದಿ ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಅಂತೆಯೇ 26 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇದು 2010ರ ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಅತೀ ಹೆಚ್ಚು ಉಗ್ರರನ್ನು 2017ರಲ್ಲಿ ಕೊಲ್ಲಲಾಗಿದ್ದು, ಕೇವಲ 2 ತಿಂಗಳ ಅವಧಿಯಲ್ಲಿ 22 ಮಂದಿ ಉಗ್ರರನ್ನು ಕೊಂದು ಹಾಕಿರುವುದು ಇದೇ ಮೊದಲು. ಗುಂಡಿನ ಕಾಳಗದ ವೇಳೆ ಇಬ್ಬರು ನಾಗರಿಕರೂ ಬಲಿಯಾಗಿದ್ದಾರೆ ಎಂದು ಸೇನಾ ಅಂಕಿಅಂಶಗಳು ತಿಳಿಸಿವೆ.
ಕಣಿವೆ ರಾಜ್ಯದಲ್ಲಿ ಯೋಧರು ದಿನಕ್ಕೊಂದರಂತೆ 50 ಕಾರ್ಯಾಚರಣೆ ನಡೆಸಿದ್ದು, 16 ಕಾರ್ಯಾಚರಣೆಗಳು ಉಗ್ರರ ಹತ್ಯೆಯಲ್ಲಿ ಅಂತ್ಯಗೊಂಡಿವೆ. ಅಂತೆಯೇ ಮೂವರು ಉಗ್ರರನ್ನು ಸೆರೆ ಹಿಡಿಯಲಾಗಿದ್ದು, ಉಗ್ರರಿಗೆ ಆಶ್ರಯ ನೀಡಿದ್ದ , ಕುಕೃತ್ಯಗಳಿಗೆ ನೆರವಾಗುತ್ತಿದ್ದ 40 ಮಂದಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಕುಪ್ವಾರದ ಹಂದ್ವಾರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಓರ್ವ ಅಧಿಕಾರಿ ಇದೇ ಫೆಬ್ರವರಿ 14ರಂದು ಸಾವನ್ನಪ್ಪಿದ್ದರು. ಬಂಡಿಪೋರಾದ ಹಜಿನ್ ಪ್ರದೇಶದಲ್ಲಿ ಅಡಗಿ ಕುಳಿತು ದಾಳಿ ಮಾಡಲಾಗುತ್ತಿದ್ದ ಮೂವರು ಉಗ್ರಗಾಮಿಗಳನ್ನು ಸದೆಬಡಿಯಲಾಗಿತ್ತು. ಕಾಶ್ಮೀರದ ಕುಲ್ಗಾಮ್ ಮೇಲೆ ಉಗ್ರರು ದಾಳಿ ಮಾಡಿದ್ದಾಗ 4 ಮಂದಿ ಉಗ್ರರನ್ನು ಹತ್ಯೆಗೈಯ್ಯಲಾಗಿತ್ತು.
ಒಟ್ಟಾರೆ 2010ರ ಬಳಿಕ ನಡೆದ ಉಗ್ರ ದಾಳಿಗಳಲ್ಲಿ 2017ರ ಆರಂಭದಲ್ಲೇ ಅತೀ ಹೆಚ್ಚು ದಾಳಿಗಳಾಗಿದ್ದು, ಉಗ್ರರಿಗಿಂತ ಹುತಾತ್ಮರಾದ ಯೋಧರ ಸಂಖ್ಯೆಯೇ ಹೆಚ್ಚಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


