ಬೋಯಿಂಗ್ ಕಾರ್ಗೋ ಡೋರ್ ಗಳ ಪೂರೈಕೆಗೆ ಹೆಚ್ಎಎಲ್ ಗೆ ಇಸ್ರೇಲ್ ನಿಂದ ಬೇಡಿಕೆ
ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋ-2017 ರಲ್ಲಿ ಇಸ್ರೇಸ್ ನೊಂದಿಗೆ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ಬೋಯಿಂಗ್ ವಿಮಾನಕ್ಕೆ ಕಾರ್ಗೋ ಡೋರ್ ಗಳನ್ನು ಪೂರೈಕೆ ಮಾಡುವ ಒಪ್ಪಂದ ಮಾಡಿಕೊಂಡಿದೆ.

Published On :
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋ-2017 ರಲ್ಲಿ ಇಸ್ರೇಸ್ ನೊಂದಿಗೆ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ಬೋಯಿಂಗ್ ವಿಮಾನಕ್ಕೆ ಕಾರ್ಗೋ ಡೋರ್ ಗಳನ್ನು ಪೂರೈಕೆ ಮಾಡುವ ಒಪ್ಪಂದ ಮಾಡಿಕೊಂಡಿದೆ.
ಬೋಯಿಂದ್ 737 ಮೇನ್ ಡೆಕ್ ಕಾರ್ಗೋ ಡೋರ್ ಗಳನ್ನು ಪೂರೈಕೆ ಮಾಡಲು ಇಸ್ರೇಲ್ ಏರೋ ಸ್ಪೇಸ್ ಇಂಡಸ್ಟ್ರೀಸ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, 8 ಸೆಟ್ ಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ಹೆಚ್ಎಎಲ್ ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಎಎಲ್ ಈಗಾಗಲೇ 30 ಕ್ಕೂ ಹೆಚ್ಚು ಕಾರ್ಗೋ ಡೋರ್ ಗಳನ್ನು ಇಸ್ರೇಲ್ ಗೆ ಪೂರೈಕೆ ಮಾಡಿದ್ದು, ಈಗ ಮತ್ತೊಮ್ಮೆ 8 ಸೆಟ್ ಗಳ ಡೋರ್ ಗಳನ್ನು ಪೂರೈಕೆ ಮಾಡಲಿದೆ.
ಗುಣಮಟ್ಟ ಹಾಗೂ ನಿಗದಿತ ವೇಳೆಯಲ್ಲಿ ಈ ಹಿಂದೆ ಕಾರ್ಗೋ ಡೋರ್ ಗಳನ್ನು ಪೂರೈಕೆ ಮಾಡಲಾಗಿತ್ತು. ಇದನ್ನು ಪರಿಗಣಿಸಿ ಐಎಐ ಮತ್ತಷ್ಟು ಕಾರ್ಗೋ ಡೋರ್ ಗಳನ್ನು ಪೂರೈಸಲು ಬೇಡಿಕೆ ಇಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


