ಅಲ್ಪಸಂಖ್ಯಾತಳೆಂಬ ಭಾವನೆ ನನ್ನಲ್ಲಿಲ್ಲ: ನಜ್ಮಾ ಹೆಫ್ತುಲ್ಲಾ
ನನ್ನಲ್ಲಿ ನಾನು ಅಲ್ಪಸಂಖ್ಯಾತಳೆಂಬ ಭಾವನೆ ಇರಲಿಲ್ಲ. ನಾನು ಭಾರತೀಯಳೆಂಬ ಭಾವನೆ ಇದೆ. ಭಾರತದಲ್ಲಿ ಜನ್ಮಿಸಿದ್ದರ ಬಗ್ಗೆ ಹೆಮ್ಮೆ ಇದೆ.

Published On :
ನವದೆಹಲಿ: 2014 ರ ಚುನಾವಣೆ ಬಳಿಕ ರಚನೆಯಾದ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ನನಗೆ ಅಲ್ಪಸಂಖ್ಯಾತ ಖಾತೆಯ ಸ್ವತಂತ್ರ ನಿರ್ವಹಣೆ ನೀಡಿದ್ದು, ವಿಚಿತ್ರ ಎನಿಸಿತ್ತು, ಏಕೆಂದರೆ ಅಲ್ಪಸಂಖ್ಯಾತಳೆಂಬ ಭಾವನೆ ನನ್ನಲ್ಲಿ ಇರಲಿಲ್ಲ ಎಂದು ಮಣಿಪುರದ ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ಹೇಳಿದ್ದಾರೆ.
ಅಲ್ಪಸಂಖ್ಯಾತ ಇಲಾಖೆ ಖಾತೆಯ ಜವಾಬ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಬಹುಶಃ ಈಶಾನ್ಯ ರಾಜ್ಯದವರಿಗೆ ನೀಡಬೇಕೆಂದುಕೊಂಡಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ನನಗೆ ನೀಡಿದಾಗ " ನಾನು ಅಲ್ಪಸಂಖ್ಯಾತಳಲ್ಲ" ಎಂದು ಪ್ರಧಾನಿಗೆ ಹೇಳಿದ್ದನ್ನು ನಜ್ಮಾ ಹೆಫ್ತುಲ್ಲಾ ನೆನಪಿಸಿಕೊಂಡಿದ್ದಾರೆ.
ಐಬಿಎಸ್ ಡಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ನಜ್ಮಾ ಹೆಫ್ತುಲ್ಲಾ, ಅಲ್ಪಸಂಖ್ಯಾತ ಖಾತೆ ಸಚಿವಳಾಗುವವರೆಗೂ ನನ್ನಲ್ಲಿ ನಾನು ಅಲ್ಪಸಂಖ್ಯಾತಳೆಂಬ ಭಾವನೆ ಇರಲಿಲ್ಲ. ನಾನು ಭಾರತೀಯಳೆಂಬ ಭಾವನೆ ಇದೆ. ಭಾರತದಲ್ಲಿ ಜನ್ಮಿಸಿದ್ದರ ಬಗ್ಗೆ ಹೆಮ್ಮೆ ಇದೆ, ಇಲ್ಲಿನ ವೈವಿಧ್ಯತೆಯಲ್ಲಿ ನಾವೂ ಒಂದು ಎಂಬ ಭಾವನೆ ಇದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


