ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರೀಂ ತೀರ್ಪು: ಸಂಭ್ರಮಾಚರಣೆ ಮಾಡಿದ ಅಮ್ಮನ ನಿಷ್ಠರಲ್ಲಿ ಸಂದಿಗ್ಧತೆ
ಅಕ್ರಮ ಆಸ್ತಿ ಪ್ರಕರಣದಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ ಶಶಿಕಲಾ ಅವರಿಗೆ ಸುಪ್ರೀಂಕೋರ್ಟ್ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದು ತಮಿಳುನಾಡು ...

ಚೆನ್ನೈ: ಅಕ್ರಮ ಆಸ್ತಿ ಪ್ರಕರಣದಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ ಶಶಿಕಲಾ ಅವರಿಗೆ ಸುಪ್ರೀಂಕೋರ್ಟ್ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದು ತಮಿಳುನಾಡು ಹಂಗಾಮ್ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರಿಗೆ ಸಂತಸ ತಂದಿದೆ. ಇದೇ ವೇಳೆ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಸ್ತಿಯ ಕಾನೂನು ಬದ್ಧತೆ ಬಗ್ಗೆ ಅಮ್ಮನ ನಿಷ್ಠರಲ್ಲಿ ಸಂದಿಗ್ಧತೆ ತಲೆದೋರಿದೆ.
ಶಶಿಕಲಾ ಗೆ ಶಿಕ್ಷೆಯಾಗಿರುವುದಕ್ಕೆ ಪನ್ನೀರ್ ಸೆಲ್ವಂ ಬೆಂಬಲಿಗರ ಸಂಭ್ರಮಾಚರಣೆ ಒಂದೆಡೆಯಾದರೇ, ಜಯಲಲಿತಾ ಅವರನ್ನು ಅಪರಾಧಿ ಎಂದು ಸುಪ್ರೀಂ ಹೇಳಿದೆ,. ಹೀಗಿರುವಾಗ ಪನ್ನೀರ್ ಬೆಂಬಲಿಗರ ಸಂಭ್ರಮಾಚರಣೆ ಜಯಲಲಿತಾ ವಿರುದ್ಧ ಕೂಡ ಆಗಿದೆ ಎಂಬುದು ತೀವ್ರ ಟೀಕೆಗೊಳಪಟ್ಟಿದೆ.
ನನ್ನ ನಾಯಕಿಯನನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ, ಅವರೊಬ್ಬ ವರ್ಚಸ್ವಿ ನಾಯಕಿ, ಅವರ ಜೊತೆ ನಾವು ಹಲವು ವರ್ಷ ಕೆಲಸ ಮಾಡಿದ್ದೇವೆ, ಅವರನ್ನು ತುಂಬಾ ಚೆನ್ನಾಗಿ ಬಲ್ಲೆವು. ಅವರು ಯಾವಾಗಲೂ ಜನರಿಗಾಗಿ ಕೆಲಸ ಮಾಡುತ್ತಿದ್ದರು ಎಂದು ಎಐಎಡಿಎಂಕೆ ಹಿರಿಯ ಮುಖಂಡ ಎಸ್. ಸೆಮ್ಮಾಳಾಯ್ ಹೇಳಿದ್ದಾರೆ.
ಇನ್ನೂ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಜಯಲಲಿತಾ ಅವರದ್ದು ಮಕ್ಕಳಂತ ಹೃದಯ, ಅವರು ಯಾವುದೇ ಕಾರಣಕ್ಕೂ ತಪ್ಪು ಮಾಡಲು ಸಾಧ್ಯವಿಲ್ಲ, ಅವರ ಯೋಚನೆ ಯಾವಾಗಲೂ ಜನರಿಗೆ ಸಹಾಯ ಮಾಡುವುದೇ ಆಗಿತ್ತು. ಬೇರೆಯವರ ತಪ್ಪಿಗೆ ಅಮ್ಮಾ ಜವಾಬ್ದಾರರಾಗಲು ಸಾಧ್ಯವಿಲ್ಲ, ಜಯಲಲಿತಾ ಅವರ ಹೆಸರನ್ನು ಬಳಸಿಕೊಂಡು ಬೇರೆಯವರು ತಪ್ಪು ಮಾಡಿದ್ದಾರೆ ಎಂದು ಸೆಮ್ಮಾಳಾಯ್ ಸಮರ್ಥಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಜಯಲಲಿತಾ ಸಂತ್ರಸ್ತೆ, ಅವರು ಯಾರದ್ದೋ ಪಿತೂರಿಗೆ ಹರಕೆಯ ಕುರಿಯಾಗಿದ್ದರು ಎಂದು ಇತ್ತೀಚೆಗೆ ಡಿಎಂಡಿಕೆ ಯಿಂದ ಉಚ್ಚಾಟನೆಗೊಂಡ ಮಾಜಿ ಶಾಸಕ ಆರ್ ಎಂ ಬಾಬು ಮುರಗವೇಲ್ ಹೇಳಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಸಂಬಂಧ ಅಮ್ಮಾ ನಿಷ್ಠ ಹಾಗೂ ತಮಿಳುನಾಡು ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ,
ಅಕ್ರಮ ಆಸ್ತಿ ಪ್ರಕರಣದಲ್ಲಿ ಶಶಿಕಲಾ ವಿರುದ್ಧ ತೀರ್ಪು ಬಂದಿದ್ದಕ್ಕೆ ತಮಿಳುನಾಡಿನಲ್ಲಿ ಪನ್ನೀರ್ ಸೆಲ್ವಂ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದರು, ಜಯಲಲಿತಾ ವಿರುದ್ಧವು ಕೂಡ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು, ಹಾಗಾಗಿ ಸೆಲ್ವಂ ಬೆಂಬಲಿಗರು ಜಯಾ ವಿರುದ್ಧವೇ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಹುಟ್ಟಿ ಹಾಕಿತ್ತು.
ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪನ್ನೀರ್ ಸೆಲ್ವಂ ಏಕೆ ಪ್ರತಿಕ್ರಿಯೆ ನೀಡುತ್ತಿಲ್ಲ, ಒಬ್ಬ ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರದ ವಿರುದ್ಧದ ತೀರ್ಪನ್ನು ಸ್ವಾಗತಿಸಬೇಕಲ್ಲವೆ ಎಂದು ಪಿಎಂಕೆ ಸಂಸ್ಥಾಪಕ ಎಸ್ ರಾಮದಾಸ್ ಪ್ರಶ್ನಿಸಿದ್ದಾರೆ.
2014 ರಲ್ಲಿ ವಿಚಾರಣಾ ನ್ಯಾಯಾಲಯಾ ಜಯಲಲಿತಾ ವಿರುದ್ಧ ತೀರ್ಪು ನೀಡಿದಾಗ ಎಐಎಡಿಎಂಕಾ ಶಾಸಕರು ಹಾಗೂ ಸಚಿವರು ವಿರೋಧಿಸಿದ್ದರು, ಆದರೆ ಇಂದು ಅದೇ ನಾಯಕರು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ ಸ್ಚಾಲಿನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


