ದೇಶ

ಆಡಳಿತಾರೂಢ ಎಐಎಡಿಎಂಕೆಯೊಳಗಿನ ದೊಂಬರಾಟವನ್ನು ಉಸಿರು ಬಿಗಿಹಿಡಿದು ವೀಕ್ಷಿಸುತ್ತಿರುವ ವಿಪಕ್ಷಗಳು

ತಮಿಳುನಾಡು ಸಿಎಂ ಆಗಬೇಕೆಂದು ಕನಸು ಕಂಡಿದ್ದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಕನಸು ನುಚ್ಚು ನೂರಾಗಿದೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ...

ಆಡಳಿತಾರೂಢ ಎಐಎಡಿಎಂಕೆಯೊಳಗಿನ ದೊಂಬರಾಟವನ್ನು ಉಸಿರು ಬಿಗಿಹಿಡಿದು ವೀಕ್ಷಿಸುತ್ತಿರುವ ವಿಪಕ್ಷಗಳು
ಪನ್ನೀರ್ ಸೆಲ್ವಂ
Published On :

ಚೆನ್ನೈ: ತಮಿಳುನಾಡು ಸಿಎಂ ಆಗಬೇಕೆಂದು ಕನಸು ಕಂಡಿದ್ದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಕನಸು ನುಚ್ಚು ನೂರಾಗಿದೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲಿಗೆ ಹೋಗಲು ಸಿದ್ಧರಾಗುತ್ತಿದ್ದಾರೆ. ಸುಪ್ರೀಂ ಕೋರ್ಟ್ ಪ್ರಮುಖ ವಿರೋಧ ಪಕ್ಷವಾದ ಡಿಎಂಕೆಗೆ ಸಂತಸ ತಂದಿದೆ.


ಆಡಳಿತಾರೂಢ ಪಕ್ಷದೊಳಗಿನ ಕಚ್ಚಾಟ, ರಾಜಕೀಯ ಬದಲಾವಣೆಗಳನ್ನು ಸದ್ದಿಲ್ಲದೇ ನೋಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಡಿಎಂಕೆ ಹವಣಿಸುತ್ತಿದೆ. ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಉತ್ತರ ಪ್ರದೇಶದಕ್ಕಿಂತ ಹೊರತಾಗಿಲ್ಲ.

ತಮಿಳುನಾಡಿನಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ರಾಜಕೀಯ ದೊಂಬರಾಟದ ಬಗ್ಗೆ  ಮದ್ರಾಸ್ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಪ್ರೊಫೆಸರ್  ಎಆರ್ ವೆಂಕಟಾಚಲಪತಿ ಸದ್ಯದ ರಾಜಕೀಯ ಬೆಳವಣಿಗೆಗಳಿಂದ ವಿರೋಧ ಪಕ್ಷಗಳು ದೂರ ಉಳಿದಿವೆ.  ವಿಪಕ್ಷಗಳು ಯಾವ ತಂತ್ರ ಎಣೆಯುತ್ತಿವೆ ಎಂಬುದರ ಬಗ್ಗೆ ಸುಳಿವಿಲ್ಲ ಎಂದು ಹೇಳಿದ್ದಾರೆ.

ಸದ್ಯ ತಲೆದೋರಿರುವ ಅತಂತ್ರ ಸ್ಥಿತಿಗೆ ಅಂತ್ಯ ಹಾಡಬೇಕು ಎಂದು ರಾಜ್ಯಪಾಲರ ಮೇಲೆ ವಿರೋಧ ಪಕ್ಷಗಳು ಒತ್ತಡ ಹಾಕಬಹುದು. ಅದರ ಹೊರತು ಸದ್ಯಕ್ಕೆ ಬೇರೇನು ಮಾಡಲು ಸಾಧ್ಯವಿಲ್ಲ.

ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಒಂದು ವಾರದ ಕೆಳಗೆ ಶಶಿಕಲಾ ವಿರುದ್ಧ ಬಂಡಾಯ ಎದ್ದಿದ್ದಾರೆ. ಹೀಗಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಸದ್ಯ ಸೆಲ್ವಂ ಇರುವುದರಿಂದ ಇತರೆ ವಿರೋಧ ಪಶ್ರಗಳು ಎಐಎಡಿಎಂಕೆಯಲ್ಲಿ ನಡೆಯುತ್ತಿರುವ ಹೈ ಡ್ರಾಮಾವನ್ನು ಉಸಿರು ಬಿಡದೇ ಸುಮ್ಮನೇ ವೀಕ್ಷಿಸುತ್ತಿವೆ.

ಪನ್ನೀರ್ ಸೆಲ್ವಂ ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ವಿಫಲರಾದರೇ ಡಿಎಂಕೆ ಸೆಲ್ವಂಗೆ ಬೆಂಬಲ ಸೂಚಿಸಲು ಸಾಧ್ಯವಿಲ್ಲ. ಒಂದು ವೇಳೆ ಸೆಲ್ವಂ ಡಿಎಂಕೆ ಬೆಂಬಲ ಪಡೆದರೇ ಮೂಲ ಎಐಎಡಿಎಂಕೆ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸುವ ಸಾಧ್ಯತೆಗಳಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ವಿಧಾನಸಭೆಯಲ್ಲಿ ಬಹುಮತ ಸಾಬೀತು ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಗೊತ್ತಾಗುತ್ತದೆ,  ಒಂದು ವೇಳೆ ಬಹಮತ ಪ್ರದರ್ಶಿಸಲು ಎಐಎಡಿಎಂಕೆ ವಿಫಲವಾದರೇ ಮತ್ತೆ ಅಧಿಕಾರಕ್ಕೇರುವ ಅದೃಷ್ಟ ಡಿಎಂಕೆ ಯದ್ದು. ಆದರೆ ಇದೆಲ್ಲಾ ಗವರ್ನರ್ ಅವರ ನಿರ್ಧಾರದ ಮೇಲೆ ಅವಲಂಬಿತವಾಗಿದೆ.

ಶಶಿಕಲಾ ಬೆಂಗಳೂರು ಜೈಲು ಸೇರಿದ ಮೇಲೆ ಪನ್ನೀರ್ ಸೆಲ್ವಂ ಎಲ್ಲಾ ಶಾಸಕರುಗಳ ಮನವೊಲಿಸಿದರೇ ಮುಂದಿನ ನಾಲ್ಕೂವರೆ ವರ್ಷಗಳು ಅಧಿಕಾರ ನಡೆಸಬಹುದು. ಸದ್ಯ ಚುನಾವಣೆ ಎದುರಿಸುವ ಇಷ್ಟವಿಲ್ಲದ ಕಾರಣ ಎಐಎಡಿಎಂಕೆ ಅಧಿಕಾರ ಕಳೆದುಕೊಳ್ಳಲು ಇಚ್ಚಿಸುವುದಿಲ್ಲ ಎಂದು ಪ್ರೊಫೆಸರ್ ಅಭಿಮತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.