ದೇಶ

ಮಣಿಪುರ ವಿಧಾನಸಭೆಗೆ ಸ್ಪರ್ಧಿಸಲು ಬಿಜೆಪಿ ಮುಖಂಡರು 36 ಕೋಟಿ ಆಪರ್ ನೀಡಿದ್ದರು: ಶರ್ಮಿಳಾ

ಮಣಿಪುರ ವಿಧಾನ ಸಭೆ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಲು ಆ ಪಕ್ಷದ ಮುಖಂಡರೊಬ್ಬರು 36 ಕೋಟಿ ರು ಆಫರ್ ನೀಡಿದ್ದರು ಎಂದು ಇರೋಮ್ ಶರ್ಮಿಳಾ ..

ಮಣಿಪುರ ವಿಧಾನಸಭೆಗೆ ಸ್ಪರ್ಧಿಸಲು ಬಿಜೆಪಿ ಮುಖಂಡರು 36 ಕೋಟಿ ಆಪರ್ ನೀಡಿದ್ದರು: ಶರ್ಮಿಳಾ
ಇರೋಮ್ ಶರ್ಮಿಳಾ
Published On :

ಗುವಾಹಟಿ: ಮಣಿಪುರ ವಿಧಾನ ಸಭೆ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಲು ಆ ಪಕ್ಷದ ಮುಖಂಡರೊಬ್ಬರು 36 ಕೋಟಿ ರು ಆಫರ್ ನೀಡಿದ್ದರು ಎಂದು ಇರೋಮ್ ಶರ್ಮಿಳಾ ಹೇಳಿದ್ದಾರೆ.

ಬಿಜೆಪಿ ಮೋರ್ಚಾ ಸಂಚಾಲಕ ಸುರ್ಬಿನೋಯ್ ಎಂಬುವರು ನನಗೆ 30 ಕೋಟಿ ರು ಆಫರ್ ನೀಡಿದ್ದರು ಎಂದು ಶರ್ಮಿಳಾ ದೂರಿದ್ದಾರೆ, ಆದರೆ ಶರ್ಮಿಳಾ ಅವರ ಈ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ.

ನನ್ನ ಉಪವಾಸ ಮುಗಿದ ಬಳಿಕ, ನಾನು ಓರ್ವ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದೆ ನಾನು ಚುನವಾಣೆಗೆ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೆ.  ಈ ವೇಳೆ ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ಹಣದ ಅವಶ್ಯಕತೆಯಿದೆ, ಚುನಾವಣೆ ಎದುರಿಸಲು ನಿಮಗೆ 36 ಕೋಟಿ ರು ಹಣದ ಅವಶ್ಯಕತೆಯಿದೆ. ನಿಮ್ಮಲ್ಲಿ ಅಷ್ಟು ಹಣ ಇದ್ದರೇ ಅದರಲ್ಲೇ ಸ್ಪರ್ಧಿಸಿ, ಇಲ್ಲದಿದ್ದರೇ ಕೇಂದ್ರ ಅದನ್ನು ನೀಡುತ್ತದೆ ಎಂದು ಸುರ್ಬಿನೋಯ್ ಹೇಳಿದ್ದರು ಎಂದು ಅವರು ತಿಳಿಸಿದ್ದಾರೆ.

ನಾನು ಚುನಾವಣೆಗೆ ಸ್ಪರ್ಧಿಸಿದರೇ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾಗಿ ಶರ್ಮಿಳಾ ತಿಳಿಸಿದ್ದಾರೆ.

ಇನ್ನೂ ಶರ್ಮಿಳಾ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಶರ್ಮಿಳಾ ಆರೋಪ ನಿರಾಧಾರವಾದದ್ದು, ಯಾವೊಬ್ಬ ಬಿಜೆಪಿ ನಾಯಕರು ಹಣ ನೀಡುವುದಾಗಿ ಅವರಿಗೆ ಹೇಳಿದ್ದಾರೆ. ನಮ್ಮ ಬಳಿ 36 ಕೋಟಿ ರು ಹಣವಿಲ್ಲ ಎಂದು ಮಣಿಪುರ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ತೊಂಗಮ್ ಬಿಸ್ವಜಿತ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.