ಕಳವಾಗಿದ್ದ ಕೈಲಾಶ್ ಸತ್ಯರ್ಥಿಯವರ ನೊಬೆಲ್ ಪ್ರಶಸ್ತಿ ವಶ, ಮೂವರ ಬಂಧನ
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯರ್ಥಿಯವರ ಮನೆಯಿಂದ ಕಳವಾಗಿದ್ದ ನೊಬೆಲ್ ಪ್ರಶಸ್ತಿಯ...

Published On :
ನವದೆಹಲಿ: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯರ್ಥಿಯವರ ಮನೆಯಿಂದ ಕಳವಾಗಿದ್ದ ನೊಬೆಲ್ ಪ್ರಶಸ್ತಿಯ ಪ್ರತಿಕೃತಿ ಸೇರಿದಂತೆ ಹಲವು ಮೌಲ್ಯಯುತ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಲಾಗಿದೆ.
ಕಳೆದ ವಾರ ಕೈಲಾಶ್ ಸತ್ಯರ್ಥಿಯವರ ಮನೆಯಿಂದ ನೊಬೆಲ್ ಶಾಂತಿ ಪ್ರಶಸ್ತಿಯ ಪ್ರತಿಕೃತಿ ಸೇರಿದಂತೆ ಚಿನ್ನಾಭರಣಗಳು ಮತ್ತು ಹಲವು ಮೌಲ್ಯಯುತ ವಸ್ತುಗಳು ಕಳವಾಗಿದ್ದವು. ಪೊಲೀಸ್ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಕದ್ದುಹೋಗಿದ್ದ ಅಷ್ಟೂ ವಸ್ತುಗಳು ಸಿಕ್ಕಿವೆ.
ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯರ್ಥಿ 2014ರಲ್ಲಿ ವಿಶ್ವ ಸಂಸ್ಥೆ ನೀಡುವ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಾಕಿಸ್ತಾನದ ಮಲಾಲಾ ಯೂಸಫ್ಜೈ ಜೊತೆ ಹಂಚಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Arrestನೊಬೆಲ್ ಶಾಂತಿ ಪ್ರಶಸ್ತಿಬಂಧನಕಳವುrecoverstoleKailash Satyartiಕೈಲಾಶ್ ಸತ್ಯರ್ಥಿNobel Prize replicaವಶಪಡಿಸಿಕೊಳ್ಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


