ದೇಶ

ಪೋಷಕರನ್ನು ಕಡೆಗಣಿಸಿದರೇ ವೇತನಕ್ಕೆ ಕತ್ತರಿ: ನೌಕರರಿಗೆ ಸರ್ಕಾರದ ಎಚ್ಚರಿಕೆ

ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದೇ ಅವರನ್ನು ಕಡೆಗಣಿಸಿದರೇ ಅಂಥವರ ವೇತನ ಕಟ್ ಮಾಡುವುದಾಗಿ ತನ್ನ ಎಲ್ಲಾ ನೌಕರರಿಗೆ ಅಸ್ಸಾಂ ಸರ್ಕಾರ ...

ಪೋಷಕರನ್ನು ಕಡೆಗಣಿಸಿದರೇ ವೇತನಕ್ಕೆ ಕತ್ತರಿ: ನೌಕರರಿಗೆ ಸರ್ಕಾರದ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Published On :

ಗುವಾಹಟಿ: ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದೇ ಅವರನ್ನು ಕಡೆಗಣಿಸಿದರೇ ಅಂಥವರ ವೇತನ ಕಟ್ ಮಾಡುವುದಾಗಿ ತನ್ನ ಎಲ್ಲಾ ನೌಕರರಿಗೆ ಅಸ್ಸಾಂ ಸರ್ಕಾರ ಎಚ್ಚರಿಕೆ ನೀಡಿದೆ.

ಮಂಗಳವಾರ ಅಸ್ಸಾಂ ಹಣಕಾಸು ಸಚಿವ ಹಿಮಂತಾ ಬಿಸ್ವಾ ಮಂಡಿಸಿದ 2017-18ರ ಬಜೆಟ್ ನಲ್ಲಿ ಸರ್ಕಾರ ಪ್ರಸಕ್ತ ವರ್ಷದಿಂದ ನೌಕರರ ವೇತನಕ್ಕೆ ವಯಸ್ಸಾದ ಪೋಷಕರ ಆರೈಕೆ ಲಿಂಕ್ ಅಳವಡಿಸಲು ಉದ್ದೇಶಿಸಿದೆ. ಒಂದು ವೇಳೆ ನೌಕರರು ತಮ್ಮ ಪೋಷಕರನ್ನು ಸರಿಯಾಗಿ ಆರೈಕೆ ಮಾಡದಿದ್ದರೇ  ಅವರ ಸಂಬಳದಲ್ಲಿ ಹಣ ಹಿಡಿಯಲಾಗುವುದು ಎಂದು ಸರ್ಕಾರ ತಿಳಿಸಿದೆ.

ವಯಸ್ಸಾದವರಿಗೆ ತಕ್ಕ ಮಟ್ಟಿಗೆ ಆರೈಕೆ ಮಾಡಬೇಕು, ಇಲ್ಲದಿದ್ದರೇ ನೌಕರರ ಸಂಬಳಕ್ಕೆ ಕತ್ತರಿ ಹಾಕುವ ಆದೇಶವನ್ನು ಶಾಸಕಾಂಗ ಹೊರಡಿಸಿದೆ , ಮಕ್ಕಳಾದವರು ಮುಪ್ಪಲ್ಲಿರುವ ಪೋಷಕರ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ಸ್ವದೇಶಿ ಮೌಲ್ಯಗಳಲ್ಲಿ ನಂಬಿಕೆ ಇಟ್ಟಿರುವ ಬಿಜೆಪಿ ಸರ್ಕಾರ ಎಲ್ಲಾ ಸರ್ಕಾರಿ ನೌಕರರು ಸಾವಿರ ರೂಪಾಯಿ ಮೌಲ್ಯದ ಖಾದಿ ವಸ್ತ್ರ ಖರೀದಿಸುವುದು ಕಡ್ಡಾಯ ಎಂಬ ಆದೇಶ ಹೊರಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.