ಶಶಿಕಲಾ, ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ: ಮುಂದಿನ ವಾರ ಸುಪ್ರೀಂ ತೀರ್ಪು
ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಹಾಗೂ ತಮಿಳುನಾಡಿನ ಭಾವಿ ಸಿಎಂ ಶಶಿಕಲಾ ಅವರ ಅಕ್ರಮ ಆಸ್ತಿ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಮುಂದಿನ ವಾರ ತೀರ್ಪು ನೀಡುವ ಸಾಧ್ಯತೆ ಇದೆ.

Published On :
ನವದೆಹಲಿ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಹಾಗೂ ತಮಿಳುನಾಡಿನ ಭಾವಿ ಸಿಎಂ ಶಶಿಕಲಾ ಅವರ ಅಕ್ರಮ ಆಸ್ತಿ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಮುಂದಿನ ವಾರ ತೀರ್ಪು ನೀಡುವ ಸಾಧ್ಯತೆ ಇದೆ.
ನ್ಯಾ.ಪಿಸಿ ಘೋಸೆ ಹಾಗೂ ಅಮಿತಾವ್ ರಾಯ್ ಅವರ ವಿಭಾಗೀಯ ಪೀಠ ತೀರ್ಪು ನೀಡಲಿದೆ. ಜಯಲಲಿತಾ ಅವರ ಹಳೆಯ ಮೂರು ಪ್ರಕರಣಗಳ ತೀರ್ಪನ್ನು ಮೂರು ತಿಂಗಳ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಆದರೆ ಈಗ ಜಯಲಲಿತಾ ಅವರು ಇಹಲೋಕ ತ್ಯಜಿಸಿದ್ದು, ಸಿಎಂ ಆಗಲು ಹೊರಟಿರುವ ಜಯಲಿತಾ ಆಪ್ತೆ ಶಶಿಕಾಲಾ ಅವರಿಗೆ ಕೋರ್ಟ್ ತೀರ್ಪು ಪರಿಣಾಮ ಬೀರಲಿದೆ.
ಜಯಲಿತಾ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಕರ್ನಾಟಕ ಸರ್ಕಾರದ ಪರವಾಗಿ ವಾದ ಮಡಿಸಿರುವ ದುಷ್ಯಂತ್ ದಾವೆ, ಮೂರು ತಿಂಗಳ ಹಿಂದೆ ಕೋರ್ಟ್ ಕಾಯ್ದಿರಿಸಿರುವ ತೀರ್ಪಿನ ಬಗ್ಗೆ ನ್ಯಾಯಪೀಠಕ್ಕೆ ನೆನಪಿಸಿದ್ದಾರೆ.
ಶಶಿಕಲಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಿದ್ಧತೆ ನಡೆಸುತ್ತಿರುವ ವೇಳೆಯಲ್ಲೇ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗಲಿರುವುದು ಕುತೂಹಲ ಮೂಡಿಸಿದೆ.
ಶಶಿಕಲಾ ನಟರಾಜನ್ ಇದೇ ಭಾನುವಾರ ತಮಿಳುನಾಡು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು. ಮುಖ್ಯಮಂತ್ರಿಯಾಗಿ ಇದೇ ಫೆಬ್ರವರಿ 9 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಶಶಿಕಲಾ ನಟರಾಜನ್ ಇದೇ ಭಾನುವಾರ ತಮಿಳುನಾಡು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು. ಮುಖ್ಯಮಂತ್ರಿಯಾಗಿ ಇದೇ ಫೆಬ್ರವರಿ 9 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
JayalalithaaDisproportionate assets caseಜಯಲಲಿತಾಅಕ್ರಮ ಆಸ್ತಿ ಪ್ರಕರಣsupreme courtಸುಪ್ರೀಂ ಕೋರ್ಟ್judgementತೀರ್ಪುಶಶಿಕಲಾSasikala
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


