ದೇಶ

ಹೇಳಿಕೆಯಲ್ಲಿ ಭಾಷಾಂತರ ದೋಷ: ಚು.ಆಯೋಗಕ್ಕೆ ಪರಿಕ್ಕರ್ ಪ್ರತಿಕ್ರಿಯೆ

ಚುನಾವಣಾ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿರುವ ಆರೋಪದ ಬಗ್ಗೆ ಗೋವಾ ಮಾಜಿ ಮುಖ್ಯಮಂತ್ರಿ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಚುನಾವಣಾ ಆಯೋಗಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಹೇಳಿಕೆಯಲ್ಲಿ ಭಾಷಾಂತರ ದೋಷ: ಚು.ಆಯೋಗಕ್ಕೆ ಪರಿಕ್ಕರ್ ಪ್ರತಿಕ್ರಿಯೆ
ಮನೋಹರ್ ಪರಿಕ್ಕರ್
Published On :
ನವದೆಹಲಿ: ಚುನಾವಣಾ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿರುವ ಆರೋಪದ ಬಗ್ಗೆ ಗೋವಾ ಮಾಜಿ ಮುಖ್ಯಮಂತ್ರಿ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಚುನಾವಣಾ ಆಯೋಗಕ್ಕೆ ಪ್ರತಿಕ್ರಿಯೆ ನೀಡಿದ್ದು, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂಬ ಸ್ಪಷ್ಟನೆ ನೀಡಿದ್ದಾರೆ. 
ಮತಗಳನ್ನು ಹಣಕೊಟ್ಟು ಖರೀದಿಸುವ ಭ್ರಷ್ಟಾಚಾರದ ಬಗ್ಗೆ ಜ.29 ರಂದು ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಮನೋಹರ್ ಪರಿಕ್ಕರ್, ಈಗ ಯಾರಾದರು ನಿಮಗೆ 1,000 ರೂಗಳನ್ನು ನೀಡುತ್ತಾರೆ,  ನಂತರ ಪ್ರತಿ ತಿಂಗಳು 1,500 ರೂ ನೀಡುತ್ತಾರೆ. 5 ವರ್ಷಗಳ ಬಳಿಕ 1,500 ರೂಗಳನ್ನು ನೀಡುತ್ತಾರೆ. ಹೀಗೆ ಮುಂದೊಂದು ದಿನ ಇದು 90,000 ರೂ ದಾಟಿ ಗಣನೀಯವಾಗಿ ಹೆಚ್ಚಬಹುದು. 
ಇಂದು ನೀವು 2000 ರೂಗಳನ್ನು ಪಡೆದು ಹಣ ಕೊಟ್ಟವರಿಗೆ ಮತ ಹಾಕುತ್ತೀರ. ನಿಮ್ಮ ಸುತ್ತಮುತ್ತ ಹಣ ಪಡೆದು ಓಡಾಡುವವರಿರಬಹುದು, ಆದರೆ ಜನತೆ ಕಮಲದ ಗುರುತಿಗೆ ಮತ ಹಾಕಿ ಎಂದು ಮನೋಹರ್ ಪರಿಕ್ಕರ್ ಹೇಳಿದ್ದನ್ನು ಜಿಲ್ಲಾ ಚುನಾವಣಾ ಅಧಿಕಾರಿ ವರದಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪರಿಕ್ಕರ್ ಗೆ ಚುನಾವಣಾ ಆಯೋಗ ಮನೋಹರ್ ಪರಿಕ್ಕರ್ ಗೆ ಸ್ಪಷ್ಟನೆ ನೀಡುವಂತೆ ನೊಟೀಸ್ ಜಾರಿ ಮಾಡಿತ್ತು. 
ಕೊಂಕಣಿ ಭಾಷೆಯಲ್ಲಿ ನಾನು ಮಾಡಿದ್ದ ಭಾಷಣವನ್ನು ಆಂಗ್ಲಕ್ಕೆ ಭಾಷಾಂತರ ಮಾಡುವಾಗ ತಪ್ಪು ಅರ್ಥ ಬರುವಂತೆ ಭಾಷಾಂತರ ಮಾಡಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಪರಿಕ್ಕರ್ ಅವರ ಸ್ಪಷ್ಟನೆಯನ್ನು ಚುನಾವಣಾ ಆಯೋಗ ಪರಿಶೀಲಿಸುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.