ದೇಶ

ನಾಪತ್ತೆಯಾಗಿದ್ದ ಯುವತಿ ಶವ ಪ್ರಿಯಕರನ ಅಡುಗೆ ಕೋಣೆಯಲ್ಲಿ ಪತ್ತೆ

ಕಳೆದ ವರ್ಷ ಜೂನ್ ನಲ್ಲಿ ಅಮೆರಿಕಕ್ಕೆ ಹೋಗಲಿದ್ದ 28 ವರ್ಷದ ಹರೆಯದ ಯುವತಿಯ ಶವ ಭೋಪಾಲ್ ನಲ್ಲಿನ ಆಕೆಯ ಪ್ರಿಯಕರನ ಮನೆಯ ಅಡುಗೆ ಕೋಣೆಯಲ್ಲಿ...

ನಾಪತ್ತೆಯಾಗಿದ್ದ ಯುವತಿ ಶವ ಪ್ರಿಯಕರನ ಅಡುಗೆ ಕೋಣೆಯಲ್ಲಿ ಪತ್ತೆ
ಆಕಾಂಶಾ ಶರ್ಮಾ
Published On :
ಬಂಕುರಾ: ಕಳೆದ ವರ್ಷ ಜೂನ್ ನಲ್ಲಿ ಅಮೆರಿಕಕ್ಕೆ ಹೋಗಲಿದ್ದ 28 ವರ್ಷದ ಹರೆಯದ ಯುವತಿಯ ಶವ ಭೋಪಾಲ್ ನಲ್ಲಿನ ಆಕೆಯ ಪ್ರಿಯಕರನ ಮನೆಯ ಅಡುಗೆ ಕೋಣೆಯಲ್ಲಿ ಹೂಳಲ್ಪಟ್ಟಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. 
ಆಕಾಂಶಾ ಶರ್ಮಾ 2016ರ ಜೂನ್ 23ರಂದು ದೆಹಲಿ ಮೂಲಕ ಅಮೆರಿಕಕ್ಕೆ ಪ್ರಯಾಣಿಸಬೇಕಿತ್ತು. ಇದಕ್ಕಾಗಿ ಜೂನ್ 22ರಂದು ಆಕೆ ತನ್ನ ಮನೆಯಿಂದ ಹೊರಟ್ಟಿದ್ದಳು. ಪೋಷಕರು ಆಕೆ ಅಮೆರಿಕ ತಲುಪಿದ್ದಾಳೆ ಎಂದು ಭಾವಿಸಿದ್ದರು. ಅಲ್ಲದೆ ಕಳೆದ ವರ್ಷ ಡಿಸೆಂಬರ್ ವರೆಗೂ ಆಕೆ ತನ್ನ ಪೋಷಕರೊಂದಿಗೆ ಸಂಪರ್ಕದಲ್ಲಿದ್ದಳು. ಆನಂತರ ಆಕೆ ನಿಗೂಢವಾಗಿ ನಾಪತ್ತೆಯಾಗಿದ್ದಳು. 
ತಮ್ಮ ಪುತ್ರಿ ಆಕಾಂಶಾ ಶರ್ಮಾ ನಿಗೂಢವಾಗಿ ನಾಪತ್ತೆಯಾಗಿರುವ ಬಗ್ಗೆ ತಂದೆ ಶಿಬೇಂದ್ರ ಶರ್ಮಾ ಅವರು ಜನವರಿ 5ರಂದು ಬಂಕುರಾ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ತನಿಖೆ ಶುರು ಮಾಡಿದ ಬಂಕುರಾ ಪೊಲೀಸ್ ತಂಡ ಫೆಬ್ರವರಿ 1ರಂದು ಭೋಪಾಲ್ ತಲುಪಿತ್ತು. ಖಚಿತ ಸುಳಿವಿನ ಮೇಲೆ ಪೊಲೀಸರು ಭೋಪಾಲ್ ನ ಸಾಕೇತ್ ನಗರದ ನಿವಾಸಿಯಾಗಿರುವ ಉದಯನ್ ದಾಸ್ ಎಂಬಾತನ ಮನೆ ಮೇಲೆ ದಾಳಿ ನಡೆಸಿದರು. ಆತನ ಮನೆಯನ್ನು ತೀವ್ರವಾಗಿ ಶೋಧಿಸಿದಾಗ ಆಕಾಂಶಾಳನ್ನು ಅಡುಗೆ ಕೋಣೆಯಲ್ಲಿ ಹೂಳಲ್ಪಟ್ಟಿರುವುದನ್ನು ಪತ್ತೆಹಚ್ಚಿದ್ದಾರೆ. 
ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಉದಯನ್ ದಾಸ್ ಮತ್ತು ಆಕಾಂಶಾಳ ಪರಿಚಯವಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.