ದೇಶ

ನವಭಾರತ ನಿರ್ಮಾಣಕ್ಕೆ ಕೈ ಜೋಡಿಸುವ 21 ಶತಮಾನದ ಹೊಸ ಮತದಾರರಿಗೆ ಸ್ವಾಗತ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ನವಭಾರತ ನಿರ್ಮಾಣಕ್ಕೆ ಕೈ ಜೋಡಿಸಿುವ 21ನೇ ಶತಮಾನದ ಹೊಸ ಮತದಾರರಿಗೆ ಸ್ವಾಗತ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ...

ನವಭಾರತ ನಿರ್ಮಾಣಕ್ಕೆ ಕೈ ಜೋಡಿಸುವ 21 ಶತಮಾನದ ಹೊಸ ಮತದಾರರಿಗೆ ಸ್ವಾಗತ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Published On :
ನವದೆಹಲಿ: ನವಭಾರತ ನಿರ್ಮಾಣಕ್ಕೆ ಕೈ ಜೋಡಿಸಿುವ 21ನೇ ಶತಮಾನದ ಹೊಸ ಮತದಾರರಿಗೆ ಸ್ವಾಗತ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ. 
39ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಹೊಸವರ್ಷಕ್ಕೆ ಇನ್ನು ಕೇವಲ ಒಂದು ದಿನ ಬಾಕಿಯಿರುವ ಹಿನ್ನಲೆಯಲ್ಲಿ ದೇಶದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಅಲ್ಲದೆ, ನವಭಾರತ ನಿರ್ಮಾಣಕ್ಕೆ ಕೈ ಜೋಡಿಸುವ 21ನೇ ಶತಮಾನದ ಹೊಸ ಮತದಾರರಿಗೆ ಸ್ವಾಗತ ಎಂದು ಹೇಳಿದ್ದಾರೆ. 
ಹೊಸ ಮತದಾರರೊಂದಿಗೆ 21ನೇ ಶತಮಾನ ನಾಳೆಯಿಂದ ಆರಂಭಗೊಳ್ಳಲಿದೆ. ಹೊಸ ಮತದಾರರನ್ನು ನಾವು ಸ್ವಾಗತಿಸುತ್ತೇವೆ. ಮತದಾರರ ಪಟ್ಟಿಗೆ ನಿಮ್ಮನ್ನು ನೋಂದಣಿ ಮಾಡಿಕೊಳ್ಳುವಂತೆ ಈ ಮೂಲಕ ಮನವಿ ಮಾಡಿಕೊಳ್ಳುದ್ದೇನೆ. ನಿಮಗೆ ಕೇವಲ ಮತ ಹಾಕುವ ಹಕ್ಕು ಅಷ್ಟೇ ಅಲ್ಲ, ನವಭಾರತ ನಿರ್ಮಾಣಕಾರರಾಗಲಿದ್ದೀರಿ. ಹೊಸ ಮತದಾರರನ್ನು ನವಭಾರತದ ಯುವಕರು ಎಂಬು ಎಂದು ನಾನು ಪರಿಗಣಿಸುತ್ತೇನೆ. ನವಭಾರತ ನಿರ್ಮಾಣದ ಕನಸನ್ನು ಹೊಸ ಮತದಾರರು ಪೂರ್ಣಗೊಳಿಸುತ್ತಾರೆಂಬ ಭರವಸೆ ನನಗಿದೆ ಎಂದು ಹೇಳಿದ್ದಾರೆ, 

ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿ, ಕಿಚಡಿ, ಲೊಹ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಎಲ್ಲಾ ಹಬ್ಬಗಳು ಪ್ರಕೃತಿಗೆ ಸಂಬಂಧಿಸಿದ್ದಾಗಿದೆ. ಈ ಎಲ್ಲಾ ಹಬ್ಬಗಳನ್ನು ಆಚರಿಸಿರುವ ಎಲ್ಲಾ ಧರ್ಮದ ಜನರಿಗೂ ಈ ಮೂಲಕ ಶುಭಾಶಯಗಳನ್ನು ಕೋರುತ್ತೇನೆಂದು ಹೇಳಿದ್ದಾರೆ. 

2018ರ ಗಣರಾಜ್ಯೋತ್ಸವ ದಿನಾಚರಣೆಗೆ ಆಸಿಯಾನ್ (ಆಗ್ನೇಯ ಏಷ್ಯಾ ದೇಶಗಳ ಸಂಘಟನೆ) ರಾಷ್ಟ್ರಗಳ ನಾಯಕರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ, ಇದೇ ಮೊದಲ ಬಾರಿಗೆ ಆಸಿಯಾನ್ ರಾಷ್ಟ್ರಗಳ ನಾಯಕರು ಗಣರಾಜ್ಯೋತ್ಸವಕ್ಕೆ ಆಗಮಿಸುತ್ತಿದ್ದು, ಅವನ್ನು ಸ್ವಾಗತಿಸಲು ಭಾರತ ಕಾತರದಿಂದಿದೆ ಎಂದು ತಿಳಿಸಿದ್ದಾರೆ. 

ಪುರುಷರ ನೆರವಿಲ್ಲದೆ ಹಜ್ ಯಾತ್ರೆಗೆ ಹೋಗಲು ಮುಸ್ಲಿಂ ಮಹಿಳೆಯರಿಗೆ ಅವಕಾಶವಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಈ ರೀತಿಯ ಅಸಮಾನತೆ ಮುಂದುವರೆಯುವುದು ಸರಿಯೇ? ಈ ನಿರ್ಬಂಧಕ್ಕೆ ಅಲ್ಪಸಂಖ್ಯಾತರ ವ್ಯವಹಾರ ಇಲಾಖೆ ಅಂತ್ಯ ಹಾಡಿದ್ದು, ಒಬ್ಬಂಟಿಯಾಗಿ ಹಜ್ ಯಾತ್ರೆಗೆ ಹೊರಡುವ ಮಹಿಳೆಯರಿಗೆ ಲಾಟರಿ ವ್ಯವಸ್ಥೆಯಿಂದ ವಿನಾಯಿತಿ ನೀಡಿ ಅವರಿಗೆ ವಿಶೇಷ ವ್ಯವಸ್ಥೆಯಡಿ ಯಾತ್ರೆಗೆ ಅವಕಾಶ ಮಾಡಿಕೊಡುವಂತೆ ಈಗಾಗಲೇ ಇಲಾಖೆಗೆ ಸಲಹೆಯನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ. 

2018ರ ಜ.4ರಿಂದ ಮಾ.10ರವರೆಗೆ ಸ್ವಚ್ಛ ಸರ್ವೇಕ್ಷಣೆ ನಡೆಯಲಿದೆ. ದೇಶದ ಸುಮಾರು 4,000 ಪಟ್ಟಣಗಳಲ್ಲಿ ಈ ಸರ್ವೇಕ್ಷಣೆ ನಡೆಯಲಿದೆ. ಇದು ಅತ್ಯಂತ ದೊಡ್ಡ ಸರ್ವೇಕ್ಷಣೆ ಎಂದೇ ಹೇಳಬಹುದು ಶಬರಿಮಲೆಗೆ ತೆರಳುವವರು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಾಮಾನ್ಯ ಜನರಲ್ಲದೆ. ಗಣ್ಯರು ಹಾಗೂ ಅಧಿಕಾರಿಗಳೂ ಕೂಡ ಭಾಗಿಯಾಗಲಿದ್ದಾರೆ. 

ಉಗ್ರರ ಕಿರುಕುಳವನ್ನು ಮೆಟ್ಟಿನಿಂತು, ಪ್ರತ್ಯೇಕತಾವಾದಿಗಳೊಡನೆ ಕೈಜೋಡಿಸದೇ ಜಮ್ಮು ಮತ್ತು ಕಾಶ್ಮೀರದ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಕಾಶ್ಮೀರದ ಅಂಜುಮ್ ಬಷೀರ್ ಖಾನ್ ಇಂದು ಮಾದರಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. 

ಕೌಶಲ್ಯ ಅಭಿವೃದ್ಧಿ ಹಾಗೂ ನವೋದ್ಯಮಗಳಿಗಾಗಿ ಸಾಕಷ್ಟು ಅವಕಾಶಗಳಿವೆ. ಯುವಕರು ಇವುಗಳ ಬಗ್ಗೆ ಮಾಹಿತಿ ಪಡೆದು ಅವುಗಳ ಪ್ರಯೋಜನವನ್ನು ಪಡೆಯಬೇಕು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.