ರಜನಿಕಾಂತ್ ರಾಜಕೀಯ ಪ್ರವೇಶದ ಕುರಿತು ಕಮಲ್ ಹಾಸನ್ ಏನು ಹೇಳಿದರು ಗೊತ್ತಾ?
ತೀವ್ರ ಕುತೂಹಲ ಕೆರಳಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶ ಕುತೂಹಲಕ್ಕೆ ತೆರೆ ಬಿದ್ದಿದ್ದು, ಇದೀಗ ಸ್ವತಃ ರಜನಿಕಾಂತ್ ಅವರು ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

Published On :
ಚೆನ್ನೈ: ತೀವ್ರ ಕುತೂಹಲ ಕೆರಳಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶ ಕುತೂಹಲಕ್ಕೆ ತೆರೆ ಬಿದ್ದಿದ್ದು, ಇದೀಗ ಸ್ವತಃ ರಜನಿಕಾಂತ್ ಅವರು ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ರಜನಿ ರಾಜಕೀಯ ಪ್ರವೇಶ ಇದೀಗ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡಿದ್ದು, ಈ ಸಂಬಂಧ ರಜನಿಕಾಂತ್ ಅವರ ಸಮಕಾಲೀನ ನಟ ಮತ್ತೋರ್ವ ಸೂಪರ್ ಸ್ಟಾರ್ ಕಮಲ್ ಹಾಸನ್ ರಜನಿ ರಾಜಕೀಯ ಪ್ರವೇಶ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. "ರಜನಿಕಾಂತ್ ರಾಜಕೀಯ ಪ್ರವೇಶ ಖುಷಿ ತಂದಿದೆ. ಸಹೋದರ ರಜನಿಕಾಂತ್ ಅವರ ಸಾಮಾಜಿಕ ಪ್ರಜ್ಞೆಯನ್ನು ನಾನು ಬಲ್ಲೆ. ಹೀಗಾಗಿ ಅವರಿಗೆ ನಾನು ಶುಭ ಕೋರುತ್ತೇನೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಇನ್ನು ಸ್ವತಃ ಕಮಲ್ ಹಾಸನ್ ಕೂಡ ಈ ಹಿಂದೆ ತಾವು ರಾಜಕೀಯ ಪ್ರವೇಶ ಮಾಡುವುದಾಗಿ ಘೋಷಣೆ ಮಾಡಿದ್ದರು. ಅದರೆ ಕಮಲ್ ಹಾಸನ್ ಸ್ವಂತ ಪಕ್ಷ ಕಟ್ಟುತ್ತಾರೋ ಅಥವಾ ಮತ್ತೊಂದು ರಾಜಕೀಯ ಪಕ್ಷ ಸೇರುತ್ತಾರೋ ಎಂಬ ಕುತೂಹಲ ಹಾಗೆಯೇ ಉಳಿದಿದೆ. ಏತನ್ಮಧ್ಯೆ ಈ ಹಿಂದೆ ಕಮಲ್ ಹಾಸನ್ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಭೇಟಿ ಚರ್ಚಿಸಿದ್ದರು. ಇದು ಅವರು ಕಮ್ಯುನಿಸ್ಟ್ ಪಕ್ಷ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು.
ಒಟ್ಟಾರೆ ಇದೀಗ ತಮಿಳುನಾಡು ರಾಜಕೀಯ ಯುಗದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ರಜನಿ ರಾಜಕೀಯ ಪ್ರವೇಶ ಹೊಸ ಸಂಚಲನ ಸೃಷ್ಟಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
RajinikanthKamal HaasanChennaiಚೆನ್ನೈರಜನಿಕಾಂತ್ಕಮಲ್ ಹಾಸನ್TamilNadu Politicsತಮಿಳುನಾಡು ರಾಜಕೀಯFans Meetಅಭಿಮಾನಿಗಳ ಸಭೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


