ಸುಂದರ ಯುವತಿಯರೊಂದಿಗೆ ವಿವಾಹ ಆಮಿಷ: 46 ಯುವಕರನ್ನು ವಂಚಿಸಿದ ಜಾಲ ಪತ್ತೆ
ಸುಂದರ ಯುವತಿಯರೊಂದಿಗೆ ವಿವಾದ ಮಾಡಿಸಿಕೊಡುವುದಾಗಿ ನಂಬಿಸಿ 46 ಯುವಕರಿಗೆ ವಂಚಿಸಿ ರೂ.30 ಲಕ್ಷ ದೋಚಿರುವ ಪ್ರಕರಣವೊಂದಿ ಇದೀಗ ಬೆಳಕಿಗೆ ಬಂದಿದೆ...

Published On :
ಚಂಡೀಗಢ: ಸುಂದರ ಯುವತಿಯರೊಂದಿಗೆ ವಿವಾದ ಮಾಡಿಸಿಕೊಡುವುದಾಗಿ ನಂಬಿಸಿ 46 ಯುವಕರಿಗೆ ವಂಚಿಸಿ ರೂ.30 ಲಕ್ಷ ದೋಚಿರುವ ಪ್ರಕರಣವೊಂದಿ ಇದೀಗ ಬೆಳಕಿಗೆ ಬಂದಿದೆ.
ದೆಹಲಿ ಮೂಲದ ಮಹಿಳೆಯೊಬ್ಬಲ ನೇತೃತ್ವದ ಈ ತಂಡ ಸೋನೆಪತ್, ಜಿಂದ್ ಹಾಗೂ ರೊಹ್ಟಕ್ ನಲ್ಲಿ ಯುವಕನ್ನು ವಂಚಿಸಿ ಹಣವನ್ನು ಸಂಗ್ರಹಿಸಿದೆ ಎಂದು ತಿಳಿದುಬಂದಿದೆ.
ಪ್ರತೀಯೊಬ್ಬ ಯುವಕರಿಂದ ರೂ.45,000, ರೂ.60,000 ಹಾಗೂ ರೂ.96,000 ಹಣವನ್ನು ವಂಚಕರ ತಂಡ ಸಂಗ್ರಹಿಸಿದ್ದು, ಹಣ ನೀಡಿದ ಯುವಕರು ಹಾಗೂ ಕುಟುಂಬ ಸದಸ್ಯರು ಸೋನೆಪತ್'ನ ಖರ್ಕೋಡಾ ಪಟ್ಟಣದಲ್ಲಿ ಸೇರಲು ಹೇಳಿದ್ದಾರೆ,
ಖರ್ಕೋಡಾ ಪಟ್ಟಣದಲ್ಲಿ ವಧುಗಳು ತಮಗಾಗಿ ಕಾಯುತ್ತಿರುತ್ತಾರೆ. ಎಲ್ಲರನ್ನೂ ಸಾಮೂಹಿಕ ವಿವಾಹಕ್ಕೆ ಕರೆದೊಯ್ಯುವುದಾಗಿ ವಂಚಕರ ತಂಡ ನಂಬಿಸಿದ್ದಾರೆ. ವಂಚಕರು ಹೇಳಿದ ಸ್ಥಳಕ್ಕೆ ಯುವಕರು ಹಾಗೂ ಕುಟುಂಬ ಸದಸ್ಯರು ದೀರ್ಘಕಾಲದವರೆಗೂ ಕಾಯುತ್ತಾ ಕುಳಿತರೂ ಯಾರೊಬ್ಬರೂ ಬಂದಿಲ್ಲ. ಬಳಿಕ ಮೊಬೈಲ್ ಗಳೂ ಕೂಡ ಸ್ವಿಚ್ ಆಫ್ ಬಂದಿವೆ. ಬಳಿಕ ಮೋಸಗೊಂಡ ಜನರು ಪೊಲೀಸರಿಗೆ ದೂರು ನೀಡಿದ್ದಾರೆ.
ಅನಿತಾ ಸುಶೀಲಾ ಹಾಗೂ ಮೋನು ಎಂಬುವವರ ವಿರುದ್ಧ ಸೋನೆಪತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣ ಸಂಬಂಧ ಇದೀಗ ಪೊಲೀಸರು ಸುಶೀಲಾ ಹಾಗೂ ಮೋನು ಎಂಬುವವರನ್ನು ಬಂಧನಕ್ಕೊಳಪಡಿಸಿದ್ದಾರೆ,
ವಿಚಾರಣೆ ವೇಳೆ ಅನಿತಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಯುವಕರಿಂದ ಹಣವನ್ನು ಪಡೆಯುತ್ತಿದ್ದ ಅನಿತಾ ನಮಗೆ ಕಮಿಷನ್ ನೀಡುತ್ತಿದ್ದಳು. ಬಳಿಕ ಎಲ್ಲಾ ಹಣವನ್ನು ಆಕೆಯೇ ಇಟ್ಟುಕೊಳ್ಳುತ್ತಿದ್ದಳು ಎಂದು ಆರೋಪಿಗಳು ಹೇಳಿದ್ದಾರೆ.
ವಂಚನೆಗೊಳಗಾದ ರಮೇಶ್, ಕೃಷನ್, ರಾಜ್ ವೀರ್, ಮನೀಶ್ ಎಂಬ ಯುವಕರು ಮಾತನಾಡಿ, ಡಿ.27 ರಂದು ದೆಹಲಿಯಿಂದ ಬಸ್ ವೊಂದು ಬರುತ್ತಿದ್ದು, ಎಲ್ಲರನ್ನೂ ದೆಹಲಿಯ ತಿಸ್ ಹಜಾರಿ ಆಶ್ರಮಕ್ಕೆ ಕರೆದೊಯ್ದು ಸಾಮೂಹಿಕ ವಿವಾಹ ಮಾಡಿಸುವುದಾಗಿ ಹೇಳಿದ್ದರು. ಸೋನೆಪತ್ ನಿಂದ 34, ಜಿಂದ್ ಹಾಗೂ ರೊಹ್ಟಕ್ ನಿಂದ 14 ಮಂದಿ ಯುವಕರು ಇದರಿಂದ ಮೋಸ ಹೋಗಿದ್ದಾರೆಂದು ಹೇಳಿದ್ದಾರೆ.
ಸಂತ್ರಸ್ತ ಯುವಕ ಸಂದೀಪ್ ಕುಮಾರ್ ಮಾತನಾಡಿ, ಸುಶೀಲಾ ನಮ್ಮ ನೆರೆಮನೆ ಮಹಿಳೆಯಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದ ಸುಶೀಲಾ ವಧುವನ್ನು ಹುಡುಕಿ ಕೊಡುವುದಾಗಿ ಹೇಳಿ ರೂ.45 ಸಾವಿರ ನೀಡುವಂತೆ ತಿಳಿಸಿದ್ದಳು. ಬಳಿಕ ಸಂಬಂಧಿಕರನ್ನು ಕೇಳಿ ಹೇಗೋ ಹಣವನ್ನು ಸಂಗ್ರಹಿಸಿ ನೀಡಿದ್ದೆವು. ಬಳಿಕ ಯುವತಿಯ ಬಗ್ಗೆ ವಿಚಾರಿಸಿದಾಗಲೆಲ್ಲಾ ಕರೆ ಮಾಡುವ ನೆಪದಲ್ಲಿ ಸಬೂಬು ಹೇಳಿ ಹೊರಟು ಹೋಗುತ್ತಿದ್ದಳು. ಡಿ.26 ರಂದು ಅಂತಿಮ ಅವಕಾಶವನ್ನು ನೀಡಿದ್ದೆವು. ಆದರೆ, ಸುಶೀಲ ಮತ್ತೆ ನಮ್ಮ ಕರೆಯನ್ನೇ ಸ್ವೀಕರಿಸಿರಲಿಲ್ಲ ಎಂದು ಹೇಳಿದ್ದಾರೆ.
11 ದಿನಗಳ ಬಳಿಕ ನಾವು ಅನಿತಾಗೆ ಕರೆ ಮಾಡಿದ್ದೆವು. ಈ ವೇಳೆ ಅನಿತಾ ವಿವಾಹಕ್ಕೆ ವಿದೇಶಿಗರು ಹಣ ಸಹಾಯ ಮಾಡುತ್ತಿದ್ದು, ಇದೀಗ ಅವರು ತಮ್ಮ ದೇಶದಲ್ಲಿಯೇ ಉಳಿದುಕೊಂಡಿದ್ದು, ಹೀಗಾಗಿ ವಧುಗಳನ್ನು ತೋರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಳು ಎಂದು ಮತ್ತೊಬ್ಬ ಸಂತ್ರಸ್ತ ರೊಹ್ತಾಸ್ ಎಂಬುವವರು ಹೇಳಿದ್ದಾರೆ.
ಹರಿಯಾಣ ರಾಜ್ಯದಲ್ಲಿ ವಿವಾಹಕ್ಕೆ ಯೋಗ್ಯ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಬೇರೆ ರಾಜ್ಯಗಳಿಂದ ಹೆಣ್ಣುಮಕ್ಕಳನ್ನು ಕರೆತರುವುದಾಗಿ ಯುವಕರನ್ನು ನಂಬಿಸಿ ವಂಚನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


