ದೇಶ

ಎಲ್‌ಪಿಜಿ ಸಿಲೆಂಡರ್ ಗಳ ಮಾಸಿಕ ದರ ಏರಿಕೆ ಆದೇಶ ವಾಪಾಸ್, ಕೇಂದ್ರ ಸರ್ಕಾರದ ಮಹತ್ವದ ತೀರ್ಮಾನ

ಪ್ರತಿ ತಿಂಗಲೂ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ನಿಯಮಿತವಾಗಿ ಹೆಚ್ಚಳ ಮಾಡುವ ತನ್ನ ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ.

ಎಲ್‌ಪಿಜಿ ಸಿಲೆಂಡರ್ ಗಳ ಮಾಸಿಕ ದರ ಏರಿಕೆ ಆದೇಶ ವಾಪಾಸ್, ಕೇಂದ್ರ ಸರ್ಕಾರದ ಮಹತ್ವದ ತೀರ್ಮಾನ
ಎಲ್‌ಪಿಜಿ ಸಿಲೆಂಡರ್ ಗಳ ಮಾಸಿಕ ದರ ಏರಿಕೆ ಆದೇಶ ವಾಪಾಸ್, ಕೇಂದ್ರ ಸರ್ಕಾರದ ಮಹತ್ವದ ತೀರ್ಮಾನ
Published On :
ನವದೆಹಲಿ: ಪ್ರತಿ ತಿಂಗಲೂ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ನಿಯಮಿತವಾಗಿ ಹೆಚ್ಚಳ ಮಾಡುವ ತನ್ನ ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ ಎಂದು ಮಾದ್ಯಮ ವರದಿಯೊಂದು ತಿಳಿಸಿದೆ.
ಬಡವರಿಗೆ ಉಚಿತ ಅಡಿಗೆ ಅನಿಲ ವಿತರಿಸುವ ಉಜ್ವಲ ಯೋಜನೆಗೆ ಈ ಆದೇಶ ವಿರುದ್ಧವಾಗಿದೆ ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿರುವುದಾಗಿ ಸರ್ಕಾರ ತಿಳಿಸಿದೆ. ಆದರೆ ಸಬ್ಸಿಡಿ ಸಿಲೆಂಡರ್ ಬೆಲೆಗಳಲ್ಲಿ ಅಕ್ಟೋಬರ್ ನಂತರವೂ ಏರಿಕೆಯಾಗಿದೆ ಎಂಡು ಮೂಲಗಳು ಹೇಳಿವೆ.
2016ರ ಜೂನ್‌ನಿಂದ ಗೃಹ ಬಳಕೆ ಸಿಲಿಂಡ್ ಬೆಲೆಯನ್ನು ಪ್ರತಿ ತಿಂಗಳು 4 ರೂ. ನಂತೆ ಹೆಚ್ಚಿಸಲು ತೈಲ ಸಂಸ್ಥೆಗಳಿಗೆ ಸರ್ಕಾರ ಸೂಚಿಸಿತ್ತು.  ಆದರೆ ಅಕ್ಟೋಬರ್ ನಿಂದ ಈ ಆದೇಶವನ್ನು ಹಿಂಪಡೆದಿದ್ದು ಸಂಸ್ಥೆಗಳು ಅಡಿಗೆ ಅನಿಲ ಸಿಲೆಂಡರ್ ಗಳ ಬೆಲೆಗಳಲ್ಲಿ ಏರಿಕೆ ಮಾಡಿಲ್ಲ.  ಈ ಆದೇಶ ಜಾರಿಯಾದ ನಂತರದಲ್ಲಿ ಸಿಲೆಂಡರ್ ಬೆಲೆಗಳು ಪ್ರತಿ ತಿಂಗಳು ಏರುತ್ತಿದ್ದು ಸಬ್ಸಿಡಿ ಅಡುಗೆ ಅನಿಲದ ಬೆಲೆ 76.5 ರೂ. ಏರಿಕೆ ಕಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.