ನಿರ್ಧರಿಸಬೇಕಾದವರು ನಾವೋ, ನೀವೋ: ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ಕೇಜ್ರಿವಾಲ್ ಪ್ರಶ್ನೆ
ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಹಾಗೂ ದೆಹಲಿ ಎಎಪಿ ಸರ್ಕಾರದ ನಡುವೆ ಮತ್ತೆ ಜಟಾಪಟಿ ಪ್ರಾರಂಬವಾಗಿದೆ.

Published On :
ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಹಾಗೂ ದೆಹಲಿ ಎಎಪಿ ಸರ್ಕಾರದ ನಡುವೆ ಮತ್ತೆ ಜಟಾಪಟಿ ಪ್ರಾರಂಬವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ "ದೆಹಲಿಯಲ್ಲಿ ಯಾರ ನಿರ್ಧಾರ ಅಂತಿಮ? ಎಂದು ಪ್ರಶ್ನಿಸಿದ್ದಾರೆ.
"ಲೆಫ್ಟಿನೆಂಟ್ ಗವರ್ನರ್ ಡಿಜಿಟಲೈಸೇಷನ್ ಸಾಕಷ್ಟು ಬೆಳವಣಿಗೆ ಕಂಡಿದೆ ಎಂದು ಹೇಳುತ್ತಾರೆ. ಆದರೆ ದೆಹಲಿ ಸರ್ಕಾರವು ಡಿಜಿಟಲೈಸೇಷನ್ ಇನ್ನೂ ಮನೆ ಮನೆಗೆ ತಲುಪಬೇಕು ಎನ್ನುತ್ತಿದೆ. ಇಲ್ಲಿ ಪ್ರಶ್ನೆ ಎಂದರೆ ಇಲ್ಲಿ ಅಂತಿಮ ನಿರ್ಧಾರ ಯಾರದ್ದು? ಲೆಫ್ಟಿನೆಂಟ್ ಗವರ್ನರ್? ಚುನಾಯಿತ ಸರ್ಕಾರವೆ?" ಕೇಜ್ರಿವಾಲ್ ಇಂದು ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.
"ಪ್ರಸ್ತುತ ಪ್ರಸ್ತಾಪವನ್ನು ಮರುಪರಿಶೀಲಿಸುವಂತೆ ನಾವು ಸಲಹೆ ನಿಡುತ್ತೇವೆ. ಭ್ರಷ್ಟಾಚಾರವನ್ನು ಕೊನೆಗೊಳಿಸಲು ಮತ್ತು ಸಾರ್ವಜನಿಕ ಸೇವೆ ಸುಧಾರಣೆಗಾಘಿ ಪರ್ಯಾಯ ಮಾದರಿಯನ್ನು ಹುಡುಕಿ" ಎಂದು ಲೆ. ಗವರ್ನರ್ ಹೇಳಿದ್ದಾರೆ.
"ಉತ್ತಮ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಒದಗಿಸಲು ದೆಹಲಿಯ ಸರ್ಕಾರದ ಪ್ರಯತ್ನಗಳಲ್ಲಿ ಭಾರಿ ಹಿನ್ನೆಡೆ ಅನುಭವಿಸಿದೆ ಎನ್ನುವ ಗವರ್ನರ್ ನಿಜ ಪರಿಸ್ಥಿತಿಯ ಅರಿವಿಲ್ಲದೆ ಹೇಳಿಕೆ ನೀಡಿದ್ದಾರೆ." ಎಂದು ಮಂಗಳವಾರ, ದೆಹಲಿಯ ಉಪಮುಖ್ಯಮಂತ್ರಿ ಸಿಸೋಡಿಯಾ ಸಹ ಗವರ್ನರ್ ಹೇಳಿಕೆಯನ್ನು ಖಂಡಿಸಿದ್ದಾರೆ.
ನೀರಿನ ಸಂಪರ್ಕದಿಂದ ವಿವಾಹ ನೊಂದಣಿವರೆಗೆ ಒಟ್ಟು ನಲವತ್ತು ಸೇವೆಗಳನ್ನು ಡಿಜಿಟಲೀಕರಣ ಯೋಜನೆಯಲ್ಲಿ ತರಲು ದೆಹಲಿ ಸರ್ಕಾರವು ತೀರ್ಮಾನಿಸ್ದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew Delhiಅರವಿಂದ್ ಕೇಜ್ರಿವಾಲ್Arvind KejriwalAAPಎಎಪಿDelhi Lt Governor Anil Baijalದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


