ಸಶಸ್ತ್ರ ಪಡೆಗಳಲ್ಲಿ ಸುಮಾರು 60,000 ಸಿಬ್ಬಂದಿಗಳ ಕೊರತೆ ಇದೆ: ನಿರ್ಮಲಾ ಸೀತಾರಮನ್
ಸಶಸ್ತ್ರ ಪಡೆಗಳು ಸುಮಾರು 60,000 ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದ್ದು, ಸೈನ್ಯದಲ್ಲಿ 27,000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದೆ ಎಂದು ಸರ್ಕಾಅರ ಹೇಳಿದೆ.

Published On :
ನವದೆಹಲಿ: ಸಶಸ್ತ್ರ ಪಡೆಗಳು ಸುಮಾರು 60,000 ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದ್ದು, ಸೈನ್ಯದಲ್ಲಿ 27,000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದೆ ಎಂದು ಸರ್ಕಾಅರ ಹೇಳಿದೆ.
ಭೂ ಸೇನೆ , ನೌಕಾಪಡೆ ಮತ್ತು ವಾಯುಪಡೆಯ ಗಳಲ್ಲಿ ಒಟ್ಟು 9,259 ಅಧಿಕಾರಿಗಳು ಮತ್ತು 50,363 ಕಡಿಮೆ ಶ್ರೇಣಿಯ ಸೈನಿಕರ ಕೊರತೆ ಇದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮಾನ್ ಲೋಕಸಭೆಗೆ ತಿಳಿಸಿದ್ದಾರೆ .
ಜುಲೈ 1ರ ದಿನಾಂಕದ ಆಧಾರದಲ್ಲಿ ಭೂ ಸೇನೆಯಲ್ಲಿ 12.37 ಲಕ್ಷ ಸಿಬ್ಬಂದಿನ್ ಇದ್ದಾರೆ. ಇನ್ನು ಒಟ್ಟು 27,864 ಸಿಬ್ಬಂದಿಗಳ ಕೊರತೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಹೇಳಿದ್ದಾರೆ. 67,228 ಸಿಬ್ಬಂದಿಗಳು ಭಾರತೀಯ ನೌಕಾದಳದಲ್ಲಿದ್ದು 16,255 ಸಿಬ್ಬಂದಿಗಳ ಕೊರತೆ ಇದೆ. ಇನ್ನು ವಾಯುದಳದಲ್ಲಿ 1.55 ಲಕ್ಷ ಸಿಬ್ಬಂದಿಗಳಿದ್ದು ಅಲ್ಲಿ ಸಹ 15,503 ಸಿಬ್ಬಂದಿಗಳ ಕೊರತೆ ಇದೆ ಎಂದು ಸಚಿವರು ಮಾಹಿತಿ ನಿಡಿದ್ದಾರೆ.
"ಸಶಸ್ತ್ರ ಪಡೆಗಳಲ್ಲಿನ ನೇಮಕಾತಿ ನಿರಂತರ ಪ್ರಕ್ರಿಯೆಯಾಗಿದ್ದು, ಸಿಬ್ಬಂದಿ ಕೊರತೆಯನ್ನು ತಗ್ಗಿಸಲು ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ" ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
"2014-15 ರಿಂದ ಐ ಎ ಎಫ್ ನ ಮಿಗ್ ಫೈಟರ್ ಜೆಟ್ ಗಳು 10 ಬಾರಿ ಅಪಘಾತಕ್ಕೀಡಾಗಿವೆ" ಸಚಿವರು ಇದೇ ವೇಳೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian Air Forceಭಾರತೀಯ ವಾಯುಪಡೆNirmala Sitharamanಸಿಬ್ಬಂದಿ ಕೊರತೆarmed forcesನಿರ್ಮಲ ಸೀತಾರಾಮನ್shortage of personnelಸಶಸ್ತ್ರ ಪಡೆಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


