ದೇಶ

107ರ ಅಜ್ಜಿಗೆ ಟ್ವಿಟ್ಟರ್ ನಲ್ಲಿ ಶುಭಕೋರಿ, ಸ್ವತಃ ಕರೆ ಮಾಡಿದ ರಾಹುಲ್ ಗಾಂಧಿ!

ತನ್ನ 107ನೇ ಹುಟ್ಟುಹಬ್ಬವನ್ನಾಚರಿಸಿಕೊಳ್ಳುತ್ತಿರುವ ವೃದ್ದೆಯೊಬ್ಬರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಬಯಸಿದ್ದಾರೆ.

107ರ ಅಜ್ಜಿಗೆ ಟ್ವಿಟ್ಟರ್ ನಲ್ಲಿ ಶುಭಕೋರಿ, ಸ್ವತಃ ಕರೆ ಮಾಡಿದ ರಾಹುಲ್ ಗಾಂಧಿ!
ರಾಹುಲ್ ಗಾಂಧಿ
Published On :
ನವದೆಹಲಿ: ತನ್ನ 107ನೇ ಹುಟ್ಟುಹಬ್ಬವನ್ನಾಚರಿಸಿಕೊಳ್ಳುತ್ತಿರುವ ವೃದ್ದೆಯೊಬ್ಬರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಬಯಸಿದ್ದಾರೆ. 
ಇದಕ್ಕೆ ಒತ್ತಾಸೆ ನೀಡಿದ ಆಕೆಯ ಮೊಮ್ಮಗಳು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ."ತನ್ನಜ್ಜಿ ರಾಹುಲ್ ಅವರನ್ನು ಭೇಟಿಯಾಗಲು ಆಸೆ ಪಟ್ಟಿದ್ದಾರೆ. ಇಂದು (ಸೋಮವಾರ) ಅವರ 107ನೇ ಜನ್ಮದಿನ. ಅವರ ಒಂದೇ ಆಸೆ ಎಂದರೆ ರಾಹುಲ್ ಗಾಂಧಿಯನ್ನೊಮ್ಮೆ ಭೇಟಿಯಾಗಬೇಕು ಎಂದಾಗಿದೆ. ನಾನು ಏಕೆ ಎಂದು ಕೇಳಲು ಅವರು ಮೆಲುವಾಗಿ 'ಆತ ಹ್ಯಾಂಡ್ ಸಮ್ ಆಗಿದ್ದಾನೆ' ಎಂದರು.
ಹೀಗೆಂದು ವೃದ್ದೆಯ ಮೊಮ್ಮಗಳು ದೀಪಾಲಿ ಟ್ವೀಟ್ ಮಾಡಿದ್ದಾರೆ.ಇದರೊಡನೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅಜ್ಜಿಯ ಭಾವಚಿತ್ರವನ್ನೂ ಸಹ ಹಾಕಿದ್ದರು. ಹಾಗೆಯೇ ಟ್ವೀಟ್ ನ್ನು ರಾಹುಲ್ ಗಾಂಧಿಗೆ ಟ್ಯಾಗ್ ಮಾಡಿದ್ದರು.
ಇದೇ ವೇಳೆ ಈ ದೀಪಾಲಿ ಟ್ವೀಟ್ ಗೆ ರಾಹುಲ್ ಗಾಂಧಿ ಪ್ರತಿಕ್ರಯಿಸಿದ್ದಾರೆ. "ಡಿಯರ್ ದೀಪಾಲಿ,  ನಿಮ್ಮ ಸುಂದರವಾದ ಅಜ್ಜಿಗೆ ಹುಟ್ಟುಹಬ್ಬದ ಶುಭಾಶಯಗಳು ಜೊತೆಗೆ ಮೆರಿ ಕ್ರಿಸ್‍ಮಸ್. ನನ್ನ ಕಡೆಯಿಂದ ಆಕೆಗೆ ದೊಡ್ಡ ಅಪ್ಪುಗೆ ನೀಡಿ ಎಂದು ರಾಹುಲ್ ಟ್ವೀಟ್ ನಲ್ಲಿ ಹೇಳಿದ್ದಾರೆ.
ಆ ನಂತರ ಸಹ ರಾಹುಲ್ ತಾವು ಸ್ವತಃ ಕರೆ ಮಾಡಿ ಅಜ್ಜಿಗೆ ಶುಭಾಶಯ ತಿಳಿಸಿದ್ದಾರೆಂದು ದೀಪಾಲಿ ಟ್ವೀಟ್ ನಲ್ಲಿ ಹೇಳಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.